ರಾಜ್ಯದ ಜನರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ

Published : Sep 24, 2023, 08:59 AM IST
 ರಾಜ್ಯದ ಜನರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ

ಸಾರಾಂಶ

ಕಾವೇರಿ ನೀರಿನ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರಿನ ನೈಜ ಸ್ಥಿತಿಯನ್ನು ಮನವರಿಕೆ ಮಾಡಿ ರಾಜ್ಯದ ರೈತ ಮತ್ತು ಜನರ ಹಿತ ಕಾಯುವುದು ಸರ್ಕಾರಗಳ ಜವಾಬ್ದಾರಿ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.

  ಶಿರಾ :  ಕಾವೇರಿ ನೀರಿನ ವಿಚಾರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರ್ನಾಟಕ ಮತ್ತು ತಮಿಳುನಾಡಿನ ಮುಖ್ಯಮಂತ್ರಿಗಳೊಂದಿಗೆ ಮಧ್ಯಸ್ಥಿಕೆ ವಹಿಸಿ ಕಾವೇರಿ ನೀರಿನ ನೈಜ ಸ್ಥಿತಿಯನ್ನು ಮನವರಿಕೆ ಮಾಡಿ ರಾಜ್ಯದ ರೈತ ಮತ್ತು ಜನರ ಹಿತ ಕಾಯುವುದು ಸರ್ಕಾರಗಳ ಜವಾಬ್ದಾರಿ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿಗಳು ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಶ್ರೀಮಠದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಶ್ರೀ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದ ಅವರು, ತಮಿಳುನಾಡಿನ ಜಲಾಶಯ ಭರ್ತಿ ಇದ್ದು ಕರ್ನಾಟಕದಿಂದ ಹರಿಸುವ ಕಾವೇರಿ ನೀರು ತಮಿಳುನಾಡಿನಿಂದ ಸಮುದ್ರ ಪಾಲಾಗಲಿದೆ. ದೇಶದ ನಾನಾ ಭಾಗಗಳಿಂದ ಬದುಕು ಕಟ್ಟಿಕೊಳ್ಳಲು ಬಂದು ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ 1.60 ಕೋಟಿ ಜನರಿಗೆ ಕುಡಿಯಲು ಕಾವೇರಿ ನೀರು ಆಸರೆ ಜೊತೆಗೆ ಹಲವಾರು ಜಿಲ್ಲೆಗಳ ರೈತರಿಗೆ ಕಾವೇರಿ ಜೀವನಾಡಿ ಇದ್ದಂತೆ ಎಂದರು.

ಹಲವಾರು ನಗರಗಳ ಜನರ ಕುಡಿಯುವ ನೀರಿನ ಭವಣೆ ನೀಗಿಸುವ ಕಾವೇರಿ ಮಳೆಯ ಅಭಾವ ಜಲಾಶಯದಲ್ಲಿ ಕಡಿಮೆ ನೀರಿದ್ದು, ಇಂತಹ ಸಂಕಷ್ಟ ಸ್ಥಿತಿಯಲ್ಲಿ ತಮಿಳುನಾಡಿಗೆ ಪ್ರತಿದಿನ ೫ ಸಾವಿರ ಕ್ಯೂಸೆಕ್ಸ್ ನೀರು ಬಿಡಲೇಬೇಕೆಂಬ ಘನ ಸರ್ವೋಚ್ಚ ನ್ಯಾಯಾಲಯದ ಆದೇಶ ರಾಜ್ಯದ ಜನರಿಗೆ ಮಾರಕ, ರಾಜ್ಯದ ಜನರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿಯಾಗಿದೆ. ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರವಾಗಿ ಹೋರಾಟ ನಡೆದರೆ ಶ್ರೀಮಠ ಕೂಡ ಬೆಂಬಲವಾಗಿ ನಿಲ್ಲಲಿದೆ ಎಂದರು.

ನಿಮಗೆ ಕೋಪ ಇದ್ರೆ ಎಷ್ಟಾದ್ರೂ ಬೈಯಿರಿ. ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ

 

ಬೆಂಗಳೂರು (ಸೆ.22): ಕಾವೇರಿ ನೀರಿನ ವಿಚಾರವಾಗಿ ಸುಪ್ರೀಂ ಕೋರ್ಟ್‌ ಪ್ರಾಧಿಕಾರದ ಆದೇಶವನ್ನು ಎತ್ತಿಹಿಡಿದು ಸೆ.27ರವರೆಗೆ ಪ್ರತಿನಿತ್ಯ ತಲಾ 5,000 ಕ್ಯೂಸೆಕ್ಸ್‌ ನೀರು ಬಿಡಲು ಆದೇಶ ಹೊರಡಿಸಿದೆ. ಈ ಪರಿಸ್ಥಿತಿ ಎಲ್ಲ ಸರ್ಕಾರದಲ್ಲೂ ಬಂದಿತ್ತು. ಇನ್ನು ಮಂಡ್ಯ ನಗರವನ್ನು ಬಂದ್‌ ಮಾಡಲು ರೈತರು ಕರೆ ನೀಡಿದ್ದಾರೆ. ಆದರೆ, ನಮ್ಮ ಸರ್ಕಾರ ನಿಮ್ಮ ಪರವಾಗಿದೆ. ಅಹಿತಕರ ಘಟನೆ ನಡೆದು ರಾಜ್ಯಕ್ಕೆ ಧಕ್ಕೆಯಾದಂತೆ ಎಲ್ಲರೂ ಜಾಗ್ರತೆವಹಿಸುವುದು ಅಗತ್ಯವಾಗಿದೆ. ನಿಮಗೆ ಕೋಪ ಇದ್ರೆ ಎಷ್ಟಾದ್ರೂ ಬೈಯಿರಿ. ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿತಮಿಳುನಾಡು 24 ಸಾವಿರ ಕ್ಯೂಸೆಕ್ ಕೇಳಿದೆ.  ನಮ್ಮ ಅಧಿಕಾರಿಗಳು ಎರಡು ಕಮಿಟಿಗಳ ಮುಂದೆ ಪ್ರಸ್ತಾಪ ಮಾಡಿ ಎರಡು ಸಲ 10,000 ಕ್ಯೂಸೆಕ್ಸ್ ಬಿಡಲು ಒಪ್ಪಿದ್ದೆವು. ನಂತರ ಒತ್ತಡ ಮಾಡಿ 5,000 ಕ್ಯೂಸೆಕ್‌ಗೆ ಇಳಿಸಿದೆವು. ಮಳೆ ಚೆನ್ನಾಗಿ ಆಗಬಹುದೆಂಬ ನಿರೀಕ್ಷೆ ಇತ್ತು. ಈಗ ಅಪೀಲು ಹೋಗಬೇಕು ಅಂತ ತೀರ್ಮಾನ ಮಾಡಿದ್ದೆವು. ಆದರೆ, ಇಬ್ಬರ ಅಪೀಲುಗಳನ್ನು ಡಿಸ್‌ಮಿಸ್ ಮಾಡಿದಾರೆ. ಸೆ.27ರವರೆಗೆ ನೀರು ಬಿಡಲು ಆದೇಶ ಆಗಿದೆ. ಈ ಪರಿಸ್ಥಿತಿ ಎಲ್ಲಾ ಸರ್ಕಾರಗಳ ಕಾಲದಲ್ಲಿ ಕೂಡಾ ಆಗಿತ್ತು ಎಂದು ಸಮಜಾಯಿಷಿ ನೀಡಿದರು.

ನಾಳೆ ಮಂಡ್ಯ ಬಂದ್‌: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರೇ ಎಚ್ಚರ!

ಇನ್ನು ನಾಳೆ ಮಂಡ್ಯ ಬಂದ್ ನಿಂದ ಕಾವೇರಿ ವಿಚಾರವಾಗಿ ಏನೂ ಆಗಲ್ಲ. ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ನಾವೇ ನಿಮ್ಮ ಪರ ಹೋರಾಟ ಮಾಡ್ತೀವಿ. ಬಂದ್ ಮಾಡಿ ಜನರಿಗೆ ತೊಂದರೆ ಮಾಡಬೇಡಿ. ಸರ್ಕಾರ ನಿಮ್ಮ ಪರವಾಗಿದೆ.  ಅಹಿತಕರ ಘಟನೆ ನಡೆದ್ರೆ ರಾಜ್ಯಕ್ಕೆ ಧಕ್ಕೆ ಆಗುತ್ತದೆ. ನಿಮಗೆ ಕೋಪ ಇದ್ದರೆ ಎಷ್ಟಾದ್ರೂ ಬೈಯಿರಿ, ನಾವು ಅಧಿಕಾರದಲ್ಲಿ ಇರುವವರು ಬೈಸಿಕೊಳ್ಳಲು ರೆಡಿ ಇದ್ದೇವೆ. ಇವತ್ತು ಬೊಮ್ಮಾಯಿ ಯಡಿಯೂರಪ್ಪ ಎಲ್ಲಾ ಮಾತಾಡ್ತಾ ಇದಾರೆ. ಅವರು ವಿಪಕ್ಷದವರು ಮಾತಾಡ್ಲೇ ಬೇಕು. ಅವರು ಯಾವ ಲಾಯರ್ ಇಟ್ಟಿದ್ರೋ, ನಾವೂ ಅದೇ ಲಾಯರ್ ಇಟ್ಟಿರೋದು ಎಂದು ಹೇಳಿದರು.

PREV
click me!

Recommended Stories

ವನ್ಯಜೀವಿ ಸಂರಕ್ಷಣೆ: ಏಷ್ಯಾನೆಟ್ ಸುವರ್ಣ ನ್ಯೂಸ್ & ಕನ್ನಡಪ್ರಭದ ಅಭಿಯಾನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಸಾಥ್!
ಚಿಕ್ಕಮಗಳೂರು: ಹೈಟೆಕ್ ಕಾರ್‌ನಲ್ಲಿ ಗೋ ಕಳ್ಳತನ; ಸಿನಿಮೀಯ ಶೈಲಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರಿಂದ ಚೇಸಿಂಗ್!