ಒಂದು ಮನೆಗೆ ಸೂತಕವಿದ್ದಾಗ ಆ ಮನೆಯಲ್ಲಿ ಹೋಮ, ಪೂಜೆ ಮಾಡಿದ್ರೆ ಏನು ಫಲವಿದೆ? ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ ಎಂದು ಸಿದ್ಧಾಪುರ ಶ್ರೀರಾಮಚಂದ್ರಾಪುರ ಮಠ (ಭಾನ್ಕುಳಿ ಮಠ)ದ ಗೋಸ್ವರ್ಗದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತರ ಕನ್ನಡ (ಜ.13): ಒಂದು ಮನೆಗೆ ಸೂತಕವಿದ್ದಾಗ ಆ ಮನೆಯಲ್ಲಿ ಹೋಮ, ಪೂಜೆ ಮಾಡಿದ್ರೆ ಏನು ಫಲವಿದೆ? ಗೋವುಗಳ ರಕ್ತ ಹರಿಯುವುದರಿಂದ ದೇಶಕ್ಕೆ ಸೂತಕವಿದ್ದಂತೆ ಎಂದು ಸಿದ್ಧಾಪುರ ಶ್ರೀರಾಮಚಂದ್ರಾಪುರ ಮಠ (ಭಾನ್ಕುಳಿ ಮಠ)ದ ಗೋಸ್ವರ್ಗದಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ತಿಳಿಸಿದ್ದಾರೆ. ನಿತ್ಯ ಲಕ್ಷ ಲಕ್ಷ ಗೋವುಗಳು ಸಾಯುತ್ತಿವೆ, ಅವುಗಳ ರಕ್ತದಿಂದ ಭೂಮಿ ನೆನೆಯುತ್ತಿದೆ. ಇಂತಹ ಭೂಮಿಯಲ್ಲಿ ಯಾವ ಫುಣ್ಯ ಕರ್ಮ ಮಾಡಿದ್ರೂ ಪೂರ್ಣ ಫಲ ದೊರೆಯಲು ಸಾಧ್ಯವಿಲ್ಲ. ದೇಶದಲ್ಲಿ ಗೋಹತ್ಯೆಯಂತಹ ಸೂತಕ ಕಳೆಯಬೇಕಿದೆ.
ಇದಕ್ಕೆ ಸರಕಾರ ಹಾಗೂ ಜನಸಾಮಾನ್ಯರು ದೃಢ ಸಂಕಲ್ಪ ಮಾಡಬೇಕು. ಅಲ್ಲಿಯವರೆಗೆ ದೇಶಕ್ಕೆ ಸೂತಕದ ಛಾಯೆ ಇದ್ದೇ ಇದೆ ಎಂದರು. ಭಾನ್ಕುಳಿ ಮಠದ ಗೋಸ್ವರ್ಗ ಏಳು ಅದ್ಭುತಗಳಲ್ಲಿ ಒಂದು. ಕಲ್ಪನಾತೀತ ಕೆಲಸಗಳು ಇಲ್ಲಿ ನಡೆಯುತ್ತವೆ. ಕೇವಲ 80 ದಿನಗಳಲ್ಲಿ ಗೋಸ್ವರ್ಗ ನಿರ್ಮಾಣವಾಯ್ತು. 30 ಸಾವಿರ ಲೋಡ್ ಮಣ್ಣು ಬಿದ್ದು, ಗದ್ದೆ ಮೇಲೆದ್ದು, ನಿರ್ಮಾಣವಾಗಿರೋದು ಗೋಸ್ವರ್ಗ. ಸರಕಾರ ಮಾಡಿದ್ರೆ ನೂರಾರು ಕೋಟಿ ರೂಪಾಯಿ ಯೋಜನೆಯಿದು.
ಕಾರ್ಯಕರ್ತರ ಶ್ರಮದಾನ, ಸೇವೆಗಳಿಂದಲೇ ಇದು ನಿರ್ಮಾಣಗೊಂಡಿದೆ. ಗೋವುಗಳಿಗೆ ಸ್ವಚ್ಛಂದವಾಗಿ ಓಡಾಡಲು, ಅವುಗಳ ಕರುಗಳಿಗೆ ಸ್ವತಂತ್ರವಾಗಿ ಹಾಲುಣಿಸಲು ಇಲ್ಲಿ ವ್ಯವಸ್ಥೆಗಳಿವೆ. ಗೋ ಸ್ವರ್ಗದಲ್ಲಿ ಗೋವುಗಳನ್ನು ಖುಷಿಖುಷಿಯಾಗಿ ಇರಿಸಲಾಗುತ್ತದೆ. ಇಲ್ಲಿ ಸಾವಿರ ಗೋವುಗಳ ಸ್ವಚ್ಛಂದ ಸಾಮ್ರಾಜ್ಯವಿರೋದ್ರಿಂದ ಇದು ಅದ್ಭುತ ಹೌದು ಎಂದು ರಾಘವೇಶ್ವರ ಸ್ವಾಮೀಜಿ ಹೇಳಿದರು. ಗೋಶಾಲೆಗಳಲ್ಲಿ ಗೋವುಗಳನ್ನು ಸಾಕಲಾಗದಾಗ ಅದಕ್ಕೆ ಸರಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು.
ಮಂಡ್ಯದಲ್ಲಿ 9.6 ಡಿಗ್ರಿ ಕನಿಷ್ಠ ಉಷ್ಣಾಂಶ ದಾಖಲು: 2011ರಲ್ಲಿ ದಾಖಲಾಗಿದ್ದಕ್ಕಿಂತ ಕಡಿಮೆ
ಸರಕಾರ ಪರ್ಯಾಯ ವ್ಯವಸ್ಥೆ ಕಲ್ಪಿಸಿದಲ್ಲಿ ಗೋ ಹತ್ಯೆಗಳು ತನ್ನಷ್ಟಕ್ಕೇ ನಿಲ್ಲುತ್ತವೆ. ಈ ಕಾರಣದಿಂದ ಗೋಶಾಲೆಗಳಿಗೆ ಸರಕಾರ ದೊಡ್ಡ ಮೊತ್ತದ ಅನುದಾನ ನೀಡಬೇಕು. ಸರಕಾರಿ ಗೋಶಾಲೆಗಳು ಚೆನ್ನಾಗಿ ನಡೆಯುದಿಲ್ಲ ಎಂಬ ಕೆಟ್ಟ ಹೆಸರಿದ್ದು, ಅದು ಹೋಗಬೇಕು. ಸರಕಾರಿ ಗೋಶಾಲೆಗಳು ಕೂಡಾ ಗೋಸ್ವರ್ಗದಂತೆ ಆಗಬೇಕು. ಈ ಹಿನ್ನೆಲೆಯ ಉತ್ತಮ ರೀತಿಯಲ್ಲಿ ಸರಕಾರ ಗೋ ಶಾಲೆಗಳಿಗೆ ಅನುದಾನ ನೀಡಬೇಕು ಎಂದು ರಾಘವೇಶ್ವರ ಸ್ವಾಮೀಜಿ ತಿಳಿಸಿದರು.