Chamarajanagara: ಭತ್ತ ಖರೀದಿ ಕೇಂದ್ರದತ್ತ ಮುಖ ಮಾಡಲೂ ಅನ್ನದಾತನ ನಿರಾಸಕ್ತಿ

By Suvarna News  |  First Published Jan 13, 2023, 5:43 PM IST

ಭತ್ತ ಖರೀದಿ ಕೇಂದ್ರದತ್ತ ಮುಖ ಮಾಡಲೂ ಅನ್ನದಾತನ ನಿರಾಸಕ್ತಿ. ಸರ್ಕಾರದ ದರಕ್ಕಿಂತ ಖಾಸಗೀ ವ್ಯಾಪಾರಿಗಳೇ ರೇಟೇ ಜಾಸ್ತಿ. ಸರ್ಕಾರದಿಂದ 2040 ರಿಂದ 2060 ಕೊಟ್ರೆ,ವ್ಯಾಪಾರಿಗಳು 2300 ರಿಂದ 2500 ರವರೆಗೂ ಕೊಡ್ತಿದ್ದಾರೆ.


ವರದಿ: ಪುಟ್ಟರಾಜು ಆರ್. ಸಿ.  ಏಷಿಯಾನೆಟ್  ಸುವರ್ಣನ್ಯೂಸ್ 

ಚಾಮರಾಜನಗರ (ಜ.13): ಈ ದೇಶದ ಅನ್ನದಾತನ ಕಾಯುವ ಹೊಣೆ ಪ್ರತಿಯೊಂದು ಸರ್ಕಾರದ ಕರ್ತವ್ಯ. ಸರ್ಕಾರವೆನೋ ಇದೀಗಾ ರೈತರ ನೆರವಿಗೆ ಧಾವಿಸಲು  ಭತ್ತ ಮತ್ತು ರಾಗಿ ಖರೀದಿಗೆ ಖರೀದಿ ಕೇಂದ್ರವೆನೋ ತೆರೆದಿದೆ. ಆದ್ರೆ ಕ್ವಿಂಟಾಲ್ ಭತ್ತಕ್ಕೆ ಖಾಸಗೀ ವ್ಯಾಪಾರಿಗಳಿಗಿಂತ ಕಡಿಮೆ ಬೆಲೆ ನಿಗದಿಗೊಳಿಸಿದೆ. ಇದರಿಂದ ಸರ್ಕಾರದ ಖರೀದಿ ಕೇಂದ್ರಗಳತ್ತ ಮುಖ ಮಾಡಲೂ ಅನ್ನದಾತರು ಹಿಂದೇಟು ಹಾಕಿದ್ದಾರೆ. ರೈತ ದೇಶದ ಬೆನ್ನೆಲುಬು ಅಂತಾರೆ. ಆದ್ರೆ ಅಂತಹ ಬೆನ್ನಲುಬನ್ನು ಮತ್ತಷ್ಟು ಬಲಿಷ್ಟ ಮಾಡುವ ಕೆಲಸ ನಡೆಯದಿರೋದು ಮಾತ್ರ ದೌರ್ಬಗ್ಯ. ಇದೀಗಾ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಲು ರೈತರು ಬೆಳೆದ ಭತ್ತ ಹಾಗು ರಾಗಿ ಬೆಳೆಯನ್ನು ಕೊಂಡುಕೊಳ್ಳಲೂ ರಾಜ್ಯಾದ್ಯಂತ ಖರೀದಿ ಕೇಂದ್ರ ತೆರೆದಿದೆ. ಆದ್ರೆ ಇಲ್ಲಿ ನೊಂದಾಯಿಸುವ ರೈತರೇ ಸಂಖ್ಯೆ ಮಾತ್ರ ಬೆರಳಣಿಕೆಯಷ್ಟಿದೆ. ಚಾಮರಾಜನಗರ ಜಿಲ್ಲಾದ್ಯಂತ ಚಾಮರಾಜನಗರ, ಯಳಂದೂರು ಹಾಗು ಕೊಳ್ಳೇಗಾಲ ಸೇರಿದಂತೆ  ಈಗಾಗ್ಲೇ  ಭತ್ತ  ಹಾಗು ರಾಗಿ ಖರೀದಿ ತೆರೆಯಲಾಗಿದೆ. ಆದ್ರೂ ಕೂಡ ಖರೀದಿ ಕೇಂದ್ರದತ್ತ ಬರಲೂ ರೈತರು ನಿರಾಸಕ್ತಿ ತೋರಿದ್ದಾರೆ. ಇದಕ್ಕೆ ಕಾರಣವೂ ಇದೆ. ಯಾಕಂದ್ರೆ ಖಾಸಗೀ ವ್ಯಾಪಾರಿಗಳು ಕೊಡುವ ದರಕ್ಕಿಂತ ಸರ್ಕಾರ ಕೊಡುವ ದರ ಕಡಿಮೆಯಿದೆ. ಸರ್ಕಾರದಿಂದ ರೈತರಿಗೆ ಒಂದು ಕ್ವಿಂಟಾಲ್ ಭತ್ತ ಕ್ಕೆ 2040 ರಿಂದ 2060 ರೂ ನಿಗದಿ ಮಾಡಿದ್ದಾರೆ. ಆದರೆ ಖಾಸಗೀ ವ್ಯಾಪಾರಿಗಳು ರೈತರ ಜಮೀನಿಗೆ ತೆರಳಿ ಒಂದು ಕ್ವಿಂಟಾಲ್ ಗೆ 2300 ರಿಂದ 2500 ರೂ ವರೆಗೂ ಖರೀದಿಸ್ತಿದ್ದಾರೆ. ಅದರಲ್ಲೂ ತೇವಾಂಶ ಶೇ 25 ರಷ್ಟಿದ್ದರೆ ಕೊಂಡುಕೊಳ್ಳುತ್ತಾರೆ.

Tap to resize

Latest Videos

undefined

ಆದ್ರೆ ಸರ್ಕಾರದ ಸೂಚನೆಯಂತೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬೇಕಾದರೆ ಶೇ 16 ರಷ್ಟಿರಬೇಕು ಅನ್ನೋ ಸೂಚನೆಯಿದೆ. ಹಾಗು ಕೆಲವು ಸರ್ಕಾರಿ ದಾಖಲೆಗಳನ್ನು ಸಹ ನೀಡಬೇಕಾಗಿರುವುದರಿಂದ ಜೊತೆಗೆ ಭತ್ತವನ್ನು ಖರೀದಿ ಕೇಂದ್ರಕ್ಕೆ ತಂದು ಕೊಡಬೇಕು ಇದರಿಂದ ಸಾಗಾಣಿಕ ವೆಚ್ಚ ಕೂಡ ರೈತರಿಗೆ ಹೊರೆಯಾಗುತ್ತದೆ. ಹಣ ಕೈ ಸೇರಲು ಸುಮಾರು ಹದಿನೈದು ದಿನ ಕಾಯಬೇಕು.  ಆದರೆ ವ್ಯಾಪಾರಿಗಳು ಸ್ಥಳಕ್ಕೆ ಬಂದು ಖರೀದಿಸುವುದರಿಂದ ರೈತರಿಗೆ ಹೆಚ್ಚು ಲಾಭವಾಗುವುದರಿಂದ  ಸರ್ಕಾರದ ನಡೆಗೆ ಬೇಸತ್ತು ರೈತರು ವ್ಯಾಪಾರಿಗಳ ಮೊರೆ ಹೋಗ್ತಿದ್ದೇವೆ ಅಂತಾರೆ ರೈತರು.

ಕೃಷಿ ಕಾಯಿದೆ ವಾಪಸ್, ಸಾಲ ಮನ್ನಾಕ್ಕೆ ಒತ್ತಾಯಿಸಿ ರೈತರ ಬೃಹತ್‌ ಪ್ರತಿಭಟನೆ

ಇನ್ನೂ ಖರೀದಿ ಕೇಂದ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 5 ಕಡೆ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರ ತೆರೆದಿದ್ದೇವೆ. ಸರ್ಕಾರ ಭತ್ತಕ್ಕೆ 2040 ರೂ ನಿಗದಿ ಮಾಡಿದ್ದೆವೆ. ಇದುವರೆಗೂ ಜಿಲ್ಲೆಯಲ್ಲಿ15 ಮಂದಿಯಷ್ಟೇ ರೈತರು ನೋಂದಣಿ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರು ನೋಂದಣಿ ಮಾಡಿಕೊಳ್ಳಲೂ ಹೆಚ್ಚು ಮುಂದೆ ಬಂದಿಲ್ಲ. ಓಪನ್ ಮಾರ್ಕೆಟ್ ನಲ್ಲಿ ಹೆಚ್ಚು ಬೆಲೆ ಸಿಕ್ತಿರೋದ್ರಿಂದ ರೈತರು ಬಂದಿಲ್ಲ ಅಂತಾರೆ ಅಧಿಕಾರಿಗಳು.

ನಾಲ್ಕು ತಿಂಗಳ ತಡೀರಿ, ನಮ್ದೇ ಸರ್ಕಾರ ಬರ್ತದ ನಿಮಗೆಲ್ಲಾ ಸಹಾಯ ಮಾಡ್ತೀನಿ; ರೈತರಿಗೆ ಎಚ್‌ಡಿಕೆ ಅಭಯ

ಒಟ್ಟಾರೆ ಜಿಲ್ಲೆಯಲ್ಲಿ ಹೆಸರಿಗಷ್ಟೇ ಖರೀದಿ ಕೇಂದ್ರ ತೆರೆದಿದ್ದಾರೆ. ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಗ್ತಿಲ್ಲ.ಕನಿಷ್ಠ ಬೆಂಬಲ ಕೊಡುವ ಜೊತೆಗೂ ಬೆಂಬಲ ಬೆಲೆ ಸೇರಿಸಿ ಖಾಸಗೀ ವ್ಯಾಪಾರಿಗಳಿಗಿಂತ ಹೆಚ್ಚು ಬೆಲೆ ಕೊಟ್ರೆ ರೈತರಿಗೆ ಅನುಕೂಲವಾಗುತ್ತೆ ಅನ್ನೊದು ಅನ್ನದಾತರ ಅಳಲು. ಇನ್ನಾದ್ರೂ ಸರ್ಕಾರ ಇತ್ತ ಗಮನಹರಿಸಿ ಅನ್ನದಾತರಿಗೆ ನೆರವಾಗ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ.

click me!