ರೈತರಿಗೆ ಸದ್ಗುರು ಜಗ್ಗಿ ವಾಸುದೇವ್‌ ಮಹತ್ವದ ಸಲಹೆ

By Suvarna NewsFirst Published Aug 2, 2021, 8:33 PM IST
Highlights

* ಜಗ್ಗಿ ವಾಸುದೇವ್‌ ಅವರಿಂದ ಮಣ್ಣಿನ ಫಲವತ್ತತೆ ಬಗ್ಗೆ ಮಾಹಿತಿ
* ರೈತರಿಗೆ ಸಲಹೆ ನೀಡಿದ ಈಶ ಫೌಂಡೇಶನ್‌ ಮುಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್‌ 
* ಕಾವೇರಿ ನದಿ ಬಗ್ಗೆಯೂ ಪ್ರತಿಕ್ರಿಯೆ

ಬೆಂಗಳೂರು, (ಅ.02): ಯಾವುದೇ ಭಾಷೆ ಮಾತಾಡಿದ್ರೂ ಕುಡಿಯೋದು ಕಾವೇರಿ ನೀರು. ಎರಡು ರಾಜ್ಯದಲ್ಲಿ ಈ ಕಾಂಟ್ರವರ್ಸಿ ಸಾಕಷ್ಟು ಸಮಯದಿಂದ ಇದೆ. ಇದೇ ರೀತಿ ಜಗಳ ಮುಂದುವರಿದರೆ ಕಾವೇರಿ ಕಡೆಗಣಿಸಲ್ಪಡುತ್ತದೆ ಎಂದು ಈಶ ಫೌಂಡೇಶನ್‌ ಮುಖ್ಯಸ್ಥರಾದ ಸದ್ಗುರು ಜಗ್ಗಿ ವಾಸುದೇವ್‌ ಕಳವಳ ವ್ಯಕ್ತಪಡಿಸಿದರು.

ಇಂದು (ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಸದ್ಗುರು, ಸದ್ಯ ಕಾವೇರಿ ರಕ್ಷಣೆ ಮೊದಲ ಗುರಿಯಾಗಬೇಕು. ಯಾರು ಎಷ್ಟು ಬಳಸುತ್ತಾರೆ ಎಂಬುದು ಮುಖ್ಯ ಅಲ್ಲ ಎಂದು ಸಲಹೆ ನೀಡಿದರು.

4 ತಿಂಗಳಲ್ಲಿ 1.1 ಕೋಟಿ ಸಸಿ ನೆಡುವ ಗುರಿ: ಸದ್ಗುರು ಜಗ್ಗಿ ವಾಸುದೇವ್‌

2020 ರಲ್ಲಿ 11 ಮಿಲಿಯನ್ ಸಸಿ ನೆಡುವ ಕೆಲಸ ಆಗಿತ್ತು. 2022 ವೇಳೆಗೆ 35 ಮಿಲಿಯನ್ ಗಿಡ ನೆಡುವ ಉದ್ದೇಶ ಇದೆ. ಇದಕ್ಕಾಗಿ ಕೃಷಿ ಜಾಗಗಳು ಬೇಕಾಗಿದೆ. ಈ ಹಿಂದೆ ತಮಿಳುನಾಡಲ್ಲಿ ನೆಟ್ಟ 52 ಮಿಲಿಯನ್ ಗಿಡಗಳನ್ನ ನೆಡಲಾಗಿದೆ. ಗಿಡ ನೆಟ್ಟು ಜಿಯೋ ಕೋಡಿಂಗ್ ಮಾಡಿ ಅದರ ಬೆಳವಣಿಗೆ ಗಮನಿಸಲಾಗ್ತಿದೆ. ತಂತ್ರಜ್ಞಾನದ ಸಹಾಯದಿಂದ ಎಲ್ಲವೂ ಮಾಡಲಾಗಿದೆ ಎಂದರು.

 ಈ ಕಾವೇರಿ ಕೂಗು ಅಭಿಯಾನ ರೈತರಿಂದ ಉತ್ಸಾಹದ ಅಭಿಪ್ರಾಯ ಬಂದಿದೆ. ಸರ್ಕಾರವೂ ಸಪೋರ್ಟ್ ಮಾಡಿದೆ.  ಸ್ವಯಂಸೇವಕರು ಕೆಲಸ ಮಾಡಿ 1 ಕೋಟಿ 10 ಲಕ್ಷ ಸಸಿ ಹೋಗಿದೆ. ಇದನ್ನು ಮೂರುವರೆ  ಕೋಟಿಗೆ ಹೆಚ್ಚಿಸಬೇಕು. ಈವರೆಗೆ ಪರಿಸರ ಕೆಲಸ ಸ್ವಲ್ಪ ಜನ ಮಾಡುತ್ತಿದ್ದರು. ಆದರೆ ಇದೇ ಮೊದಲ ಬಾರಿ ರೈತರ ಭಾಗವಹಿಸುವಿಕೆಯಿಂದ ಆಗ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

80% ಭೂಮಿ ರೈತರ ಕೈಯಲ್ಲಿದೆ. ಇದರ ಮುಖ್ಯ ಉದ್ದೇಶ, ರೈತರನ್ನು ತೊಡಗಿಸಿಕೊಳ್ಳುವುದು.  ಈಗಾಗಲೇ 890 ಸ್ವಯಂ ಸೇವಕರು  ಪಂಚಾಯತ್ ಗಳಲ್ಲಿ ಇದ್ದಾರೆ. ರೈತರನ್ನು ಪ್ರೋತ್ಸಾಹಿಸುವ ಕೆಲಸ ಮಾಡ್ತಿದಾರೆ.  ಈ ಯೋಜನೆಯನ್ನ 8 -12 ವರ್ಷ ಮಾಡುವ ಉದ್ದೇಶ ಇದೆ.  ಅಭಿಯಾನ ಮುಖ್ಯವಾಗಿ ರೈತರಿಗೆ ಲಾಭ ಆಗಲು ಎರಡು ವರ್ಷ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

25 ವರ್ಷದಲ್ಲಿ ರೈತರ ವರಮಾನದ ವ್ಯತ್ಯಾಸ ತಿಳಿಯಲಿದೆ. ಮಣ್ಣಿನಲ್ಲಿ ಶಕ್ತಿ ಇಲ್ಲದಿದ್ದರೆ ವ್ಯವಸಾಯ ಮಾಡಲು ಸಾಧ್ಯವಿಲ್ಲ. 2030 ಕ್ಕೆ ಆಹಾರ ಅಭದ್ರತೆ ಉಂಟಾಗದಿರಲು ಮಣ್ಣಿಗೆ ಬೇಕಾದ ಸಾವಯವ ಗುಣ ಕೊಡಬೇಕು. ಮಣ್ಣಿನ ಫಲವತ್ತತೆ ಕಾಪಾಡಬೇಕು . 60 ವರ್ಷ ಮಾತ್ರ ವ್ಯವಸಾಯ ಮಾಡ್ಬಹುದು ಎಂದು USA ಅಧ್ಯಯನ ತಿಳಿಸಿದೆ ಎಂದು ವಿವರಿಸಿದರು.

ಸದ್ಯ ಆಹಾರ ಇದೆ. ಆಹಾರ ಇಲ್ಲದ ಸ್ಥಿತಿ ನೆನೆಸಿಕೊಳ್ಳಲೂ ಸಾಧ್ಯವಿಲ್ಲ. ಇದು ದೇಶದಲ್ಲಿ ಆಗಬಾರದೆಂದು ಮಣ್ಣು ಫಲವತ್ತತೆ ಕಾಪಾಡಬೇಕು. ಮಣ್ಣಿನ‌ ಫಲವತ್ತತೆ ಮರಗಳ ಎಲೆಗಳಿಂದ, ಪ್ರಾಣಿಗಳ ಸೆಗಣಿಯಿಂದ ಬರಬೇಕಿದೆ ಎಂದರು.
 

click me!