ರಾಯಚೂರು: ಕೊರೋನಾ ಆರ್ಭಟ, ನೀರಾವರಿ ಸಲಹಾ ಸಮಿತಿ ಸಭೆ ರದ್ದು

By Suvarna News  |  First Published Jul 22, 2020, 11:11 AM IST

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಸಭೆ ಇಲ್ಲದೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡಲು ನಿರ್ಧಾರ| ಜುಲೈ 25 ರಿಂದ 30ರವರೆಗೆ ಮುಂಗಾರು ಹಂಗಾಮಿಗೆ ನೀರು ಬಿಡಲು ತೀರ್ಮಾಣ| ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಕಾಲುವೆಗೆ ನೀರು ಬಿಡಲು ನಿರ್ಧಾರ|


ರಾಯಚೂರು(ಜು.22):  ಮಹಾಮಾರಿ ಕೊರೋನಾ ವೈರಸ್‌ ದಿನೇ ದಿನೆ ಹೆಚ್ಚಾಗುತ್ತಿದೆ. ಇದರಿಂದ ಜನರು ಮನೆ ಬಿಟ್ಟು ಹೊರಗಡೆ ಬರೋದಕ್ಕು ಹಿಂದೆ ಮುಂದೆ ಯೋಚನೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ  ನೀರಾವರಿ ಸಲಹಾ ಸಮಿತಿ ಸಭೆ ಕೂಡ ರದ್ದು ಪಡಿಸಲಾಗಿದೆ ಎಂದು ತುಂಗಭದ್ರಾ ಅಧೀಕ್ಷಕ ಅಭಿಯಂತರರು ಬಿ.ಆರ್. ರಾಠೋಡ್ ಅವರು ಆದೇಶ ಹೊರಡಿಸಿದ್ದಾರೆ. 

ಈ ಸಂಬಂಧ ಆದೇಶವೊಂದನ್ನ ಹೊರಡಿಸಿರುವ ಬಿ.ಆರ್. ರಾಠೋಡ್ ಅವರು, ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಐಸಿಸಿ ಸಭೆ ಇಲ್ಲದೆ ತುಂಗಭದ್ರಾ ಎಡದಂಡೆ ಕಾಲುವೆಗೆ ನೀರು ಬಿಡಲು ನಿರ್ಧಾರ ಮಾಡಲಾಗಿದೆ. ಜುಲೈ 25 ರಿಂದ 30ರವರೆಗೆ ಮುಂಗಾರು ಹಂಗಾಮಿಗೆ ನೀರು ಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

Latest Videos

undefined

ಕೊಪ್ಪಳ: ತುಂಗಭದ್ರಾ ಎಡದಂಡೆ ನಾಲೆಗೆ 25ರಿಂದ ನೀರು

ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಕಾಲುವೆಗೆ ನೀರು ಬಿಡಲು ನಿರ್ಧಾರ ಮಾಡಲಾಗಿದ್ದು, ಜಲಾಶಯ ನೀರಿನ ಪ್ರಮಾಣ ಆಧಾರಿಸಿ ಕಾಲುವೆ ನೀರು ಬಿಡಲು ತೀರ್ಮಾಣಿಸಲಾಗಿದೆ. ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಚ್ಯಾಲು ಮತ್ತು ಬಂದ್ ಪದ್ಧತಿಯನ್ನ ಅನ್ವಯ ಮಾಡಲಾಗುವುದು. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ನೀರು ಮಿತವಾಗಿ ಬಳಸಲು ಸೂಚನೆ ನೀಡಲಾಗಿದೆ. ಬೆಳೆ ಉಲ್ಲಂಘನೆ ಮಾಡದೆ ನಿಗದಿ ಬೆಳೆಗಳನ್ನು ಮಾತ್ರ ಬೆಳೆಯುವಂತೆ ಆದೇಶದಲ್ಲಿ ಸೂಚನೆ ನೀಡಲಾಗಿದೆ. 

click me!