ನಾಪೋಕ್ಲು ಗ್ರಾಮೀಣ ಪ್ರದೇಶಗಳಲ್ಲಿ ಬತ್ತ ಬಿತ್ತನೆಯ ವಿನೂತನ ಕ್ರಮ ಜನಪ್ರಿಯವಾಗುತ್ತಿದೆ. ಅದುವೇ ಡ್ರಂಸೀಡರ್ ಬಿತ್ತನೆ. ಇದರಿಂದ ಹಣ ಉಳಿತಾಯವಾಗುತ್ತಿದೆ. ಜೊತೆಗೆ ಕೆಲಸವೂ ಹಗುರವಾಗುತ್ತಿದೆ.
ಮಡಿಕೇರಿ(ಜು.22): ನಾಪೋಕ್ಲು ಗ್ರಾಮೀಣ ಪ್ರದೇಶಗಳಲ್ಲಿ ಬತ್ತ ಬಿತ್ತನೆಯ ವಿನೂತನ ಕ್ರಮ ಜನಪ್ರಿಯವಾಗುತ್ತಿದೆ. ಅದುವೇ ಡ್ರಂಸೀಡರ್ ಬಿತ್ತನೆ. ಇದರಿಂದ ಹಣ ಉಳಿತಾಯವಾಗುತ್ತಿದೆ. ಜೊತೆಗೆ ಕೆಲಸವೂ ಹಗುರವಾಗುತ್ತಿದೆ.
ಚೆಯ್ಯಂಡಾಣೆ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ರೈತರು ಬತ್ತದ ಬಿತ್ತನೆಗಾಗಿ ಈ ಕ್ರಮ ಅನುಸರಿಸುತ್ತಿದ್ದಾರೆ. ಪೂರ್ವಜರ ಕಾಲದಿಂದಲು ಈ ಗ್ರಾಮದಲ್ಲಿ ಗ್ರಾಮಸ್ಥರು ಒಟ್ಟು ಸೇರಿ ಕೂಡು ನಾಟಿ ಪದ್ಧತಿ ಅನುಸರಿಸುತ್ತಿದ್ದರು. ಡ್ರಂಸೀಡರ್ ಬಿತ್ತನೆಗೆ ಒಂದು ದಿನ (24.ಗ) ಬತ್ತವನ್ನು ನೀರಿನಲ್ಲಿ ನೆನೆ ಹಾಕಿ ಬಳಿಕ ಚೀಲದಲ್ಲಿ ಕಟ್ಟಿಭಾರ ಇರಿಸಿ ಒಂದು ದಿನ ಮೊಳಕೆಯೊಡೆಯಲು ಬಿಟ್ಟು ಬಿತ್ತನೆ ಮಾಡಬಹುದು.
Fact Check: ‘ಇದು ಬೆಂಗಳೂರಿನ ಆಸ್ಪತ್ರೆಯ ಸ್ಥಿತಿ, ಯಾರೂ ಮನೆಯಿಂದ ಹೊರಹೋಗಬೇಡಿ’
ನರಿಯಂದಡ ಗ್ರಾಮದ ಅಯ್ಯಪ್ಪ ಯುವಕ ಸಂಘದ ಅಧ್ಯಕ್ಷ ತೋಟಂಬೈಲು ಅನಂತಕುಮಾರ್ ಪ್ರಸಕ್ತ ವರ್ಷ ಪ್ರಾಯೋಗಿಕವಾಗಿ ತಮ್ಮ ಎರಡು ಎಕರೆ ಗದ್ದೆಯಲ್ಲಿ ಸೀಡ್‌ಡ್ರಂ ಬತ್ತದ ಬಿತ್ತನೆ ಕೈಗೊಂಡಿದ್ದಾರೆ. ಈ ಹಿಂದೆ 50 ಕೆ.ಜಿ. ಬತ್ತದ ಬಿತ್ತನೆ ಮಾಡಬೇಕಾಗಿತ್ತು. ಆದರೆ ಈ ಪದ್ಧತಿಯಲ್ಲಿ ಕೇವಲ 20 ಕೆ.ಜಿ. ಬತ್ತ ಸಾಕು. ಬತ್ತದ ಬಿತ್ತನೆ, ಅಗೆ ತೆಗೆಯುವುದು ನಾಟಿ. ಕೆಲಸ ಸೇರಿದಂತೆ ವಿವಿಧ ಕೆಲಸಗಳಿಗಾಗಿ 5ರಿಂದ 6 ಸಾವಿರ ರು. ಉಳಿತಾಯವಾಗಿದೆ ಎನ್ನುತ್ತಾರೆ ಅವರು. ಗ್ರಾಮದ ಬಿಳಿಯಂಡ್ರ ಉತ್ತಪ್ಪ, ಸದಾಶಿವ ಮತ್ತಿತರ ರೈತರು ಈ ಕ್ರಮ ಅನುಸರಿಸುತ್ತಿದ್ದಾರೆ.
ಬಿತ್ತನೆಗಾಗಿ ಬಳಸುವ ಡ್ರಂಸೀಡರ್ ಬೆಲೆಯೂ ಕಡಿಮೆ. ಫೈಬರ್ ಡ್ರಂ ಐದು ಸಾವಿರ ರು. ಆಸುಪಾಸಿನಲ್ಲಿ ದೊರಕುತ್ತಿದೆ. ಬಿತ್ತನೆ ಮಾಡುವಾಗ ಗದ್ದೆಯಲ್ಲಿ ತೇವಾಂಶ ಕಡಿಮೆ ಇರಬೇಕು ಎನ್ನುತ್ತಾರೆ ಬಿತ್ತನೆ ಕೈಗೊಂಡಿರುವ ರೈತರು. ಕೂಡು ನಾಟಿ ಪದ್ಧತಿಯಲ್ಲಿ ಹಲವು ಜನರ ಅಗತ್ಯವಿತ್ತು. ಆದರೆ ಈ ಪದ್ಧತಿಯಲ್ಲಿ ಒಬ್ಬರೇ ಕೆಲಸ ನಿರ್ವಹಿಸಬಹುದು. ಒಟ್ಟಿನಲ್ಲಿ ಗ್ರಾಮೀಣ ಜನರು ತಾಂತ್ರಿಕತೆಯ ಮೊರೆ ಹೋಗಿ ಸಮಯ ಹಾಗೂ ಹಣ ಉಳಿತಾಯ ಮಾಡುತ್ತಿದ್ದಾರೆ.
ಕುಟುಂಬಕ್ಕೆ ಕೊರೋನಾ ತಟ್ಟಿದರೂ ಧೃತಿಗೆಡಲಿಲ್ಲ: ಅನ್ನ, ಆಹಾರ ಕೊಟ್ಟು ನೆರವಾದ್ರು ಅಕ್ಕಪಕ್ಕದ ಜನ
ಕೊರೋನಾ ಸೋಂಕಿನ ಭೀತಿ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಕೂಡು ನಾಟಿ ಪದ್ಧತಿಯಿಂದ ದೂರ ಉಳಿದಿದ್ದೇವೆ. ಎರಡು ಎಕರೆ ಬತ್ತದ ಗದ್ದೆಯಲ್ಲಿ ಡ್ರಂಸೀಡರ್ ಬಿತ್ತನೆ ಕೈಗೊಂಡಿದ್ದೇನೆ. ಬಿತ್ತನೆಗೆ ಕೇವಲ 20 ಕೆ.ಜಿ. ಬತ್ತ ಬಳಕೆ ಮಾಡಿದ್ದು ಇದರಿಂದ ಬತ್ತ ಮಾತ್ರವಲ್ಲ ಹಣವೂ ಉಳಿತಾಯವಾಗಿದೆ ಎಂದು ತೋಟಂಬೈಲು ಅನಂತಕುಮಾರ್ ತಿಳಿಸಿದ್ದಾರೆ.
-ದುಗ್ಗಳ ಸದಾನಂದ ನಾಪೋಕ್ಲು