ಹೆಣ ಸಿಗದೇ ಇದ್ರೆ ಅನಾಮಿಕನ ಒದ್ದು ಒಳಗೆ ಹಾಕಿ: ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆಕ್ರೋಶ

Published : Aug 13, 2025, 01:39 PM IST
dharmasthala  Iranna Kadadi

ಸಾರಾಂಶ

ಧರ್ಮಸ್ಥಳದ ವಿರುದ್ಧದ ಅಪಪ್ರಚಾರದ ಬಗ್ಗೆ ಈರಣ್ಣಾ ಕಡಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಬಂಧಿಸಿ ತನಿಖೆ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ಸರ್ಕಾರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಬೆಳಗಾವಿ (ಆ.13): ಧರ್ಮಸ್ಥಳ ಶ್ರದ್ಧಾ ಕೇಂದ್ರದ ವಿರುದ್ಧ ಅಪಪ್ರಚಾರ ನಡೆಸುತ್ತಿರುವ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯನ್ನು ಕೂಡಲೇ ಬಂಧಿಸಿ, ಈ ‘ನಾಟಕ’ವನ್ನು ನಿಲ್ಲಿಸುವಂತೆ ಅವರು ಎಸ್‌ಐಟಿ ಮತ್ತು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಳೆದ ಹಲವು ದಿನಗಳಿಂದ ಧರ್ಮಸ್ಥಳದ ಕುರಿತು ನಡೆಯುತ್ತಿರುವ ತನಿಖೆ ಹಾಗೂ ಚರ್ಚೆಗಳನ್ನು ಕಡಾಡಿ ಖಂಡಿಸಿದ್ದಾರೆ. "ಕರ್ನಾಟಕದ ಶ್ರದ್ಧಾ ಕೇಂದ್ರದ ಮೇಲೆ ದಾಳಿ ನಡೆಯುತ್ತಿದೆ. ಅನಾಮಿಕ ವ್ಯಕ್ತಿಯನ್ನು ಕರೆದುಕೊಂಡು ಎಸ್‌ಐಟಿ ಎಷ್ಟು ದಿನ ನೆಲ ಅಗೆಯಲಿದೆ? ಈ ನಾಟಕವನ್ನು ತಕ್ಷಣ ನಿಲ್ಲಿಸಿ, ಆತನನ್ನು ಒದ್ದು ಒಳಗೆ ಹಾಕಬೇಕು" ಎಂದು ಅವರು ತೀವ್ರ ಪದಗಳಲ್ಲಿ ಖಂಡಿದ್ದಾರೆ.

ತನಿಖೆಯ ಹಿಂದೆ ಕಾಣದ ಕೈಗಳಿರುವ ಶಂಕೆ ವ್ಯಕ್ತಪಡಿಸಿದ ಕಡಾಡಿ, "ಇದರ ಹಿಂದಿರುವವರನ್ನು ಪತ್ತೆ ಹಚ್ಚಬೇಕು" ಎಂದಿದ್ದಾರೆ. ಅಲ್ಲದೆ, ತನಿಖಾ ತಂಡವು ಕೇವಲ ಹಿಂದೂ ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಮಾತ್ರ ಅಗೆಯುವ ಕೆಲಸ ಮಾಡುತ್ತಿದೆ. ಬೇರೆ ಯಾವುದೇ ಧಾರ್ಮಿಕ ಕೇಂದ್ರಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ತನಿಖೆಯಿಂದ ಯಾವುದೇ ಫಲಿತಾಂಶ ಸಿಕ್ಕಿಲ್ಲ, ಎಸ್‌ಐಟಿ ರಚನೆ ಮಾಡಿ ಏನೂ ಆಗಲಿಲ್ಲ ಎಂದು ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಕಡಾಡಿ ಒತ್ತಾಯಿಸಿದರು. "ಪ್ರತಿದಿನ ಅನಾಮಿಕ ಹೊಸ ಕಥೆ ಕಟ್ಟುತ್ತಿದ್ದಾನೆ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಧರ್ಮಸ್ಥಳಕ್ಕೆ ಆದ ಕಳಂಕವನ್ನು ತೊಡೆದು ಹಾಕಬೇಕು" ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸರ್ಕಾರಕ್ಕೆ ಕಿವಿ, ಮೂಗು ಏನೂ ಇಲ್ಲ ಎಂದ ಕಡಾಡಿ

ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿರುವ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿಎಂ ಸ್ಥಾನಕ್ಕಾಗಿ ಫೈಟ್ ನಡೆಯುತ್ತಿದೆ, ಸರ್ಕಾರಕ್ಕೆ ಕಿವಿ, ಮೂಗು ಇಲ್ಲ, ಇದು ದಪ್ಪ ಚರ್ಮದ ಸರ್ಕಾರ ಎಂದು ಅವರು ಲೇವಡಿ ಮಾಡಿದ್ದಾರೆ.

"ಕಳೆದ ಜನವರಿಯಲ್ಲಿ ಮುಖ್ಯಮಂತ್ರಿಗಳು ಆಶಾ ಕಾರ್ಯಕರ್ತೆಯರೊಂದಿಗೆ ಸಭೆ ನಡೆಸಿ, ಅವರ ಕೈಗೆ ಕನಿಷ್ಠ 10 ಸಾವಿರ ರೂ. ಸಿಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಆಗಸ್ಟ್ ಬಂದರೂ ಅವರಿಗೆ ಆ ಹಣ ಸಿಕ್ಕಿಲ್ಲ" ಎಂದು ಕಡಾಡಿ ಅಸಮಾಧಾನ ವ್ಯಕ್ತಪಡಿಸಿದರು. ಆಶಾ ಕಾರ್ಯಕರ್ತೆಯರಿಗೆ ಬೆಂಬಲ ನೀಡಲು ತಾನು ಧರಣಿಯಲ್ಲಿ ಭಾಗಿಯಾಗಿದ್ದು, ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅವಮಾನ: ರಾಜ್ಯದಲ್ಲಿ ಆರ್ಥಿಕ ಅರಾಜಕತೆ ಉಂಟಾಗಿದೆ ಮತ್ತು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಾಯಕರ ನಡುವೆ ಜಗಳ ನಡೆಯುತ್ತಿದೆ ಎಂದು ಕಡಾಡಿ ಆರೋಪಿಸಿದರು. ಇದೇ ವೇಳೆ, ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, "ಇದು ರಾಜಣ್ಣನಿಗೆ ಮಾತ್ರವಲ್ಲ, ಇಡೀ ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅವಮಾನ" ಎಂದರು. "ರಾಜಣ್ಣ ಹೇಳಿದ್ದರಲ್ಲಿ ಏನು ತಪ್ಪು ಇತ್ತು? ಅವರಿಂದ ಸ್ಪಷ್ಟೀಕರಣ ಕೇಳಬೇಕಿತ್ತು. ಅವರು ರಾಜೀನಾಮೆ ಕೊಡ್ತೀನಿ ಅಂದಾಗ 'ಕಿಕ್ ಔಟ್' ಮಾಡಿ ಅಂತಾರೆ. ರಾಜಣ್ಣ ಅವರ ಜೊತೆಗಿದ್ದವರು ಈಗ ಯಾಕೆ ಸುಮ್ಮನಿದ್ದಾರೆ? ಅವರ ಮೇಲೆ ಯಾಕೆ ಕ್ರಮ ತಗೊಂಡ್ರಿ ಅಂತ ಮಾತಾಡಬೇಕು" ಎಂದು ಪ್ರಶ್ನಿಸಿದರು. ರಾಜ್ಯದ ಆಡಳಿತ ವ್ಯವಸ್ಥೆ ಸಮತೋಲನ ಕಳೆದುಕೊಂಡಿದೆ ಎಂದು ಕಡಾಡಿ ಹೇಳಿದ್ದಾರೆ.

 

PREV
Read more Articles on
click me!

Recommended Stories

ಹೊಸ ವರ್ಷಕ್ಕೆ ಎಲೆಕ್ಟ್ರಾನಿಕ್ ಸಿಟಿ ಹೈ ಅಲರ್ಟ್; ಮಹಿಳೆಯರ ಸುರಕ್ಷತೆಗೆ 'ರಾಣಿ ಚೆನ್ನಮ್ಮ ಪಡೆ ಸಜ್ಜು, ಪಬ್-ಬಾರ್‌ಗಳಿಗೆ ಪೊಲೀಸರ ಬಿಗಿ ರೂಲ್ಸ್!
ಡಿ.25ಕ್ಕೆ ಸಾಲು ಸಾಲು ದುರಂತ, ಲಾರಿ ಬೈಕ್ ಭೀಕರ ಅಪಘಾತದಲ್ಲಿ ನಾಲ್ವರು ಸಾವು