30 ವರ್ಷ ಹಿಂದೆ ತಾವು ಕೂಲಿ ಕೆಲಸ ಮಾಡಿದ್ದ ಊರಿಗೆ ರವಿ ಚನ್ನಣ್ಣನವರ್‌ ಭೇಟಿ

By Kannadaprabha News  |  First Published Sep 28, 2021, 4:05 PM IST
  • ರವಿ ಡಿ. ಚನ್ನಣ್ಣನವರ್‌  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ 
  • ಬಳಿಕ ಧರ್ಮಸ್ಥಳಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ 

 ಸುಬ್ರಹ್ಮಣ್ಯ (ಸೆ.28):   ಕರ್ನಾಟಕದ ದಕ್ಷ, ಪ್ರಾಮಾಣಿಕ ಐಪಿಎಸ್‌ (IPS) ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದಿರುವ ಬೆಂಗಳೂರು ರವಿ ಡಿ. ಚನ್ನಣ್ಣನವರ್‌ (Ravi D channannanavar) ಶನಿವಾರ ಕುಕ್ಕೆ ಸುಬ್ರಹ್ಮಣ್ಯ (Kukke Subhramanya Temple) ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ಧರ್ಮಸ್ಥಳಕ್ಕೆ (Dharmastala) ತೆರಳುವ ವೇಳೆ ಮಾರ್ಗ ಮಧ್ಯೆ ಕಡಬ ತಾಲೂಕಿನ ನೆಟ್ಟಣಕ್ಕೆ ಭೇಟಿ ನೀಡಿದ್ದಾರೆ.

Tap to resize

Latest Videos

ತಮ್ಮ ಸ್ನೇಹಿತರ ಜೊತೆಗೆ ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಲುವಾಗಿ ಬಂದಿದ್ದ ಅವರು, ನೆಟ್ಟಣಕ್ಕೆ ಬರುವಾಗ ತನ್ನ ವಾಹನ ನಿಲ್ಲಿಸಿ ಕೆಳಗಿಳಿದು ಇಲ್ಲಿರುವ ಪ್ರಕಾಶ್‌ ಎಂಬವರ ಹೋಟೆಲಿಗೆ ಭೇಟಿಕೊಟ್ಟು ಮಾತುಕತೆ ನಡೆಸಿದರು.

ಬಿಜೆಪಿ ಸೇರ್ತಾರಾ ರವಿ ಚನ್ನಣ್ಣನವರ್? ಸ್ಪಷ್ಟನೆ ಕೊಟ್ಟ ಐಪಿಎಸ್​ ಅಧಿಕಾರಿ

ಸುಮಾರು ಮೂವತ್ತು ವರ್ಷ ಹಿಂದೆ ನೆಟ್ಟಣಕ್ಕೆ ಸಮೀಪದ ಮೇರುಂಜಿ ಎಂಬಲ್ಲಿ ತೋಟವೊಂದರಲ್ಲಿ ರವಿ ಡಿ. ಚೆನ್ನಣವರ್‌ ಕೂಲಿ ಕೆಲಸ ಮಾಡುವ ಸಲುವಾಗಿ ಕುಟುಂಬದ ಸದಸ್ಯರ ಜೊತೆಗೆ ಬಂದಿದ್ದರು.

 ಅಂದು ಅವರು ಇಲ್ಲಿ ಕೆಲಸಕ್ಕೆ ಬರುವಾಗ ಇದ್ದ ರೈಲ್ವೆ ಸೇತುವೆಯೊಂದು (Railway Bridge) ಇಂದಿಗೂ ಅದೇ ತರಹ ಇರುವುದು ಮತ್ತು ನೆಟ್ಟಣ ಎಂಬ ಈ ಪುಟ್ಟಗ್ರಾಮ ದೊಡ್ಡ ಬದಲಾವಣೆಗಳು ಇಲ್ಲದೇ ಅದೇ ತರಹ ಇರುವುದು ಈ ಪ್ರದೇಶವನ್ನು ಗುರುತಿಸಲು ಸಾಧ್ಯವಾಯಿತು ಎಂದು ತನ್ನ ಇಲ್ಲಿನ ಕೆಲಸ ಮಾಡಿದ ದಿನಗಳ ಅನುಭವವನ್ನು ತನ್ನ ಜೊತೆಗೆ ಬಂದ ಗೆಳೆಯರಲ್ಲಿ ಮತ್ತು ಹೋಟೆಲ್‌ ಮಾಲೀಕ ಪ್ರಕಾಶ್‌ ಅವರಲ್ಲಿ ಹಂಚಿಕೊಂಡರು.

 ಎಲ್ಲಾ ಸೇವೆ ಆರಂಭ:   ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೇವೆಗಳನ್ನು ನಡೆಸಲು ಹಾಗೂ ಸಾರ್ವಜನಿಕರ ಮುಕ್ತ ಪ್ರವೇಶಕ್ಕೆ ಷರತ್ತುಗಳನ್ನು ಪಾಲಿಸಿಕೊಂಡು ನಿಬಂಧನೆಗಳೊಂದಿಗೆ ಅನುಮತಿ ನೀಡಿ ಜಿಲ್ಲಾಧಿಕಾರಿ ನಿರ್ದೇಶನದಂತೆ  ದೇವಳದಿಂದ ಆದೇಶಿಸಲಾಗಿದೆ.

ಪಂಚಾಮೃತ ಮಹಾಭಿಷೇಕಕ್ಕೆ ದಿನಕ್ಕೆ 4 ಸೇವೆಗಳನ್ನು ನೆರವೇರಿಸಲು ಅವಕಾಶ, ಸರ್ಪಸಂಸ್ಕಾರ ದಿನವೊಂದಕ್ಕೆ 100 ಸೇವೆಗಳಿಗೆ ಅವಕಾಶ, ಸೇವೆವೊಂದಕ್ಕೆ ಇಬ್ಬರು ಸೇವಾ ಕರ್ತೃಗಳಿಗೆ ಭಾಗವಹಿಸಲು ಅವಕಾಶ, ದಿನಕ್ಕೆ ಆನ್‌ಲೈನ್‌ ಸೇವೆ, ಡಿಡಿ, ಎಂ.ಟಿ., ಎಂ.ಒ. ಇತ್ಯಾದಿ 10, ಗಣ್ಯ ವ್ಯಕ್ತಿಗಳಿಗೆ 30ರಂತೆ ಸೇವೆಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೇವಾರ್ಥಿಗಳ ಸಂಖ್ಯೆ ಕಡಿಮೆ ಇದ್ದಲ್ಲಿ ದಿನದಲ್ಲಿ ಆಗಮಿಸಿದ ಭಕ್ತರಿಗೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಈಗಾಗಲೇ 2020ರಿಂದ ಬುಕ್ಕಿಂಗ್‌ ಆಗಿರುವ ಸರ್ಪಸಂಸ್ಕಾರ ಸೇವಾ ಭಕ್ತಾದಿಗಳಿಗೆ ಆದ್ಯತೆ ನೆಲೆಯಲ್ಲಿ ಅವಕಾಶ ನೀಡಲಾಗಿದೆ.

ಕೊರೋನಾ ಇಳಿಮುಖ: ಧರ್ಮಸ್ಥಳ, ಕುಕ್ಕೆ ವಾರಾಂತ್ಯ ನಿರ್ಬಂಧ ತೆರವು

ನಾಗಪ್ರತಿಷ್ಠೆ ದಿನಕ್ಕೆ 20 ಸೇವಾ ರಶೀದಿಗಳಿಗೆ ಅವಕಾಶ ನೀಡಲಾಗಿದ್ದು, ಸರ್ಪ ಸಂಸ್ಕಾರ ಸೇವೆ ನಿಗದಿತ ಸಂಖ್ಯೆಯಲ್ಲಿ ನೆರವೇರದೇ ಇದ್ದ ದಿನಗಳಲ್ಲಿ ಆಯಾ ದಿನಗಳಲ್ಲಿ ನಾಗಪ್ರತಿಷ್ಠೆ ಸೇವೆಯ ರಶೀದಿಗಳನ್ನು ಸರ್ಪ ಸಂಸ್ಕಾರ ಸೇವೆಗಳಿಗೆ ಸರಿದೂಗಿಸಿಕೊಂಡು ಹೆಚ್ಚುವರಿಯಾಗಿ ನೀಡುವುದು.

click me!