ದೇವಸ್ಥಾನಗಳೂ ಈಗ ಡಿಜಿಟಲ್, ಆನ್‌ಲೈನ್ ಮೂಲಕವೇ ಚಾಮುಂಡೇಶ್ವರಿಗೆ ಕಾಣಿಕೆ ಮುಟ್ಟಿಸ್ಬಹುದು

By Suvarna News  |  First Published Aug 25, 2022, 8:26 PM IST

ಪ್ರಸ್ತುತ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಡಿಜಿಟಲ್ ಮಯ. ಚಿಲ್ಲರೆ ಅಂಗಡಿ ಹೋಗಿ ಜನರು ಒಂದು ರೂಪಾಯಿ ನೀಡಬೇಕೆಂದರೂ ತಮ್ಮ ಮೊಬೈಲ್‍ನಲ್ಲಿ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಅಥವಾ ಇನ್ಯಾವುದೋ ಆಪ್ ಮೂಲಕ ಆನ್‍ಲೈನ್ ಟ್ರಾನ್ಸ್ ಫರ್ ಮಾಡುತ್ತಾರೆ. ಇದೀಗ ಈ ಡಿಜಿಟಲ್ ಯುಗ ದೇವಸ್ಥಾನಗಳಿಗೂ ಸಹ ವ್ಯಾಪಿಸಿದೆ.


ವರದಿ : ಮಧು.ಎಂ.ಚಿನಕುರಳಿ.

ಮೈಸೂರು.(ಆಗಸ್ಟ್.25):
ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಆವರಿಸಿಕೊಂಡಿರುವ ಡಿಜಿಟಲೀಕರಣ ಇದೀಗ ಧಾರ್ಮಿಕ ಕ್ಷೇತ್ರವನ್ನು ಸೆಳೆದಿದೆ. ದೇವರಿಗೆ ನಾನಾ ರೂಪದಲ್ಲಿ ಕಾಣಿಕೆ ಅರ್ಪಿಸಿ ಭಕ್ತಿ ಮೆರೆಯುತ್ತಿದ್ದ ಭಕ್ತರು, ಕಾಣಿಕೆ ಸಮರ್ಪಿಸಲು ದೇವಸ್ಥಾನಕ್ಕೆ ಬರುವ ಅಗತ್ಯ ಇಲ್ಲ. ತಾವಿದ್ದಲ್ಲೇ ದೇವರಿಗೆ ಕಾಣಿಕೆ ಸಲ್ಲಿಸಬಹುದು. 

ಹೌದು....ಇಂದಿನಿಂದ ಚಾಮುಂಡಿ ಬೆಟ್ಟದಲ್ಲಿ‌ ಇ-ಹುಂಡಿ ನಿರ್ವಹಣೆಗೆ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಭಕ್ತರು ಮನೆಯಲ್ಲೇ ಕುಳಿತು ಚಾಮುಂಡೇಶ್ವರಿಗೆ ಕಾಣಿಕೆ ಹಾಕಬಹುದಾಗಿದೆ. ಪಾನಿಪೂರಿ, ಟೀ ಅಂಗಡಿ ಮಾದರಿಯಲ್ಲೇ ದೇವಸ್ಥಾನದಲ್ಲಿ ಕ್ಯೂ ಆರ್ ಸ್ಕ್ಯಾನ್ ಲೇಬಲ್ ಅಂಟಿಸಿ ಭಕ್ತರಿಂದ ಕಾಣಿಕೆ ಸ್ವೀಕರಿಸಲಾಗುತ್ತಿದೆ. ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲೂ ಇ- ಹುಂಡಿ ಜಾರಿಯಾಗುತ್ತಿದ್ದು, ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಾಲಯಕ್ಕೆ ಮೊದಲ ಬಾರಿಗೆ ಜಾರಿ ಮಾಡಲಾಗಿದೆ.

Tap to resize

Latest Videos

ದೇವಾಲಯಗಳಿಗೆ ಭರ್ಜರಿ 116 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ

ಇಲ್ಲಿ ಭಕ್ತರು ಗೂಗಲ್ ಪೇ, ಫೋನ್ ಪೇ, ಬೀಮ್, ಪೇಟಿಎಂ ಸೇರಿದಂತೆ ಯಾವುದೇ ಆ್ಯಪ್‌ನಿಂದ ಕಾಣಿಕೆ ಸಲ್ಲಸಲು ಅವಕಾಶ ಮಾಡಿಕೊಡಲಾಗಿದೆ. ಹುಂಡಿ, ಭಕ್ತರ ಸರತಿ ಸಾಲುಗಳಲ್ಲಿ ಕ್ಯೂಆರ್ ಕೋಡ್ ಅಳವಡಿಕೆ ಮಾಡಿ, ಕಾಷಿಕೆ ಸಲ್ಲಿಸಲು ಅನುಕೂಲ ಮಾಡಿಕೊಡಲಾಗಿದೆ. ರಾಜ್ಯ ಸರ್ಕಾರದ ದಾರ್ಮಿಕ ದತ್ತಿ ಇಲಾಖೆ ಸ್ಥಾಪಿಸಿರುವ ಇ-ಹುಂಡಿಯು ಶ್ರೀ ಚಾಮುಂಡೇಶ್ವರಿ ಟೆಂಪಲ್, ಚಾಮುಂಡಿ ಬೆಟ್ಟ ಹೆಸರಿನಲ್ಲಿ‌ ಸ್ಥಾಪಿಸಲ್ಪಟ್ಟಿದೆ. 114158869@cnrb ಸಂಖ್ಯೆಯ ಅಕೌಂಟ್ ನಂಬರ್ ಹೊಂದಿರುವ ಸ್ಕ್ಯಾನರ್ ಇದಾಗಿದ್ದು, ಹೊರ ರಾಜ್ಯದ ಹಾಗೂ‌ ದೇಶ ವಿದೇಶಗಳ ಭಕ್ತರ ಬೇಡಿಕೆಗೆ ಸ್ಪಂದಿಸಿ ಇ- ಹುಂಡಿ ಮಾಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು  ಚಾಮುಂಡೇಶ್ವರಿ ವೆಬ್‌ಸೈಟ್‌ಗೆ ಇ-ಹುಂಡಿ ಲಿಂಕ್ ಹೊಂದಿದ್ದು, ತಾಯಿ ಹೆಸರು ನೋಡಿಕೊಂಡು ಮೋಸ ಹೋಗದಂತೆ ತಾಯಿಗೆ ಕಾಣಿಕೆ ಹಾಕಬಹುದಾಗಿದೆ.

ಡಿಜಿಟಲ್ ದೇಗುಲ
ಮುಜರಾಯಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಸಮಗ್ರ ದೇವಾಲಯ ನಿರ್ವಹಣಾ ವ್ಯವಸ್ಥೆ (Integrated Temple Management System – ITMS) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆಗೊಳಿದ್ದಾರೆ.

ಐಟಿಎಂಎಸ್ ಯೋಜನೆಯಿಂದ ಒಂದೇ ವೆಬ್‍ಸೈಟ್‍ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳ ಸಮಗ್ರ ಮಾಹಿತಿಗಳು ಜನರ ಬೆರಳ ತುದಿಯಲ್ಲೇ ಲಭ್ಯವಿರಲಿವೆ. ಅಲ್ಲದೇ ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇರಲಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಸಾರ್ವಜನಿಕರಿಗೆ/ಭಕ್ತಾಧಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿಗಳನ್ನು ಅಪ್ ಲೋಡ್ ಮಾಡುವ ವ್ಯವಸ್ಥೆಯಿದೆ.

 ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳೂ ಇರಲಿವೆ. ಜಗತ್ತಿನ ಯಾವುದೇ ಭಾಗದಿಂದ ಆನ್‍ಲೈನ್ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ಸರ್ಕಾರದ ಭೂ ದಾಖಲೆಗಳ ದತ್ತಾಂಶದೊಂದಿಗೆ (Bhoomi etc) ಸಂಯೋಜನೆ ಮಾಡಬಹುದಾದ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ವಿವಿಧ ರೀತಿಯ MIS ವರದಿಗಳನ್ನು ಪಡೆಯಲು ಅವಕಾಶವಿರುತ್ತದೆ. 

click me!