ಧಾರವಾಡ ಜಿಲ್ಲೆಯ 46,937 ನೊಂದಾಯಿತ ಅರ್ಹ ರೈತರಿಗೆ ರೂ.31.7760 ಕೋಟಿ ರೂ.ಗಳ ಮಧ್ಯಂತರ ವಿಮಾ ಪರಿಹಾರ ಹಣ ಜಮೆ ಆಗಲಿದೆ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ
ಧಾರವಾಡ(ನ.29): 2023 ನೇ ಸಾಲಿನ ಮುಂಗಾರು ಹಂಗಾಮಿನ ಭತ್ತ, ಮೆಕ್ಕೆಜೋಳ, ಹತ್ತಿ, ಈರುಳ್ಳಿ ಮತ್ತು ಆಲೂಗಡ್ಡೆ ಬೆಳೆಗಳಿಗೆ ಬೆಳೆ ವಿಮೆ ಯೋಜನೆಯಡಿ ನೋಂದಾಯಿಸಿಕೊಂಡ ಅರ್ಹ ರೈತರಿಗೆ ಮದ್ಯಂತರ ವಿಮೆ ಪರಿಹಾರ ಮಂಜೂರು ಆಗಿದ್ದು, ಪರಿಹಾರ ಹಣ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಜಿಲ್ಲಾಮಟ್ಟದ ಬೆಳೆ ವಿಮೆ ಜಂಟಿ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
undefined
ಇಂದು(ಬುಧವಾರ) ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು, ಜಿಲ್ಲೆಯ 46,937 ನೊಂದಾಯಿತ ಅರ್ಹ ರೈತರಿಗೆ ರೂ.31.7760 ಕೋಟಿ ರೂ.ಗಳ ಮಧ್ಯಂತರ ವಿಮಾ ಪರಿಹಾರ ಹಣ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ.
ರಿಪೇರಿ ಮಾಡದಷ್ಟು ಹದಗೆಟ್ಟಿರುವ ಬಿಜೆಪಿ ಪಕ್ಷ: ಜಗದೀಶ್ ಶೆಟ್ಟರ್
ಅಳ್ಳಾವರ ತಾಲ್ಲೂಕಿನ 3,052 ಜನ ನೊಂದಾಯಿತ ಅರ್ಹ ರೈತರಿಗೆ 1.82 ಕೋಟಿ ರೂ.ಅಣ್ಣಿಗೇರಿ ತಾಲ್ಲೂಕಿನ ನೋಂದಾಯಿತ 833 ಅರ್ಹ ರೈತರಿಗೆ 0.65 ಕೋಟಿ ರೂ, ಧಾರವಾಡ ತಾಲ್ಲೂಕಿನ ನೋಂದಾಯಿತ 9,978 ಅರ್ಹ ರೈತರಿಗೆ 6.57 ಕೋಟಿ ರೂ, ಹುಬ್ಬಳ್ಳಿ ತಾಲ್ಲೂಕಿನ ನೊಂದಾಯಿತ 4,681 ಅರ್ಹ ರೈತರಿಗೆ 3.28 ಕೋಟಿ ರೂ ಹುಬ್ಬಳ್ಳಿ ನಗರ ತಾಲ್ಲೂಕಿನ ನೊಂದಾಯಿತ 199 ಅರ್ಹ ರೈತರಿಗೆ 0.23 ಕೋಟಿ ರೂ. ಕಲಘಟಗಿ ತಾಲ್ಲೂಕಿನ ನೊಂದಾಯಿತ 15,248 ಅರ್ಹ ರೈತರಿಗೆ 9.74 ಕೋಟಿ ರೂ, ಕುಂದಗೋಳ ತಾಲ್ಲೂಕಿನ ನೋಂದಾಯಿತ 9,120 ಅರ್ಹ ರೈತರಿಗೆ 5.70 ಕೋಟಿ ರೂ.ಗಳ ಮತ್ತು ನವಲಗುಂದ ತಾಲ್ಲೂಕಿನ ನೋಂದಾಯಿತ 3,826 ಅರ್ಹ ರೈತರಿಗೆ 3.79 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಪರಿಹಾರ ಜಮಾ ಆಗಲಿದೆ.
ಕೆಂಪು ಮೆಣಸಿನಕಾಯಿ ಬೆಳೆಯಡಿಯು ಕೂಡ ಮಧ್ಯಂತರ ವಿಮಾ ಪರಿಹಾರ ಪ್ರಸ್ತಾವನೆ ಅಂಗೀಕೃತವಾಗಿದ್ದು 15 ದಿನಗೊಳಗಾಗಿ ಈ ಬೆಳೆಯಡಿ ಕೂಡ ಅರ್ಹ ನೋಂದಾಯಿತ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಜಮೆ ಆಗಲಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.