ಇಂದಿರಾ ಕ್ಯಾಂಟೀನ್ ಟಾಯ್ಲೆಟ್‌ಗಳನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಆದೇಶ

By Sathish Kumar KHFirst Published Nov 29, 2023, 5:06 PM IST
Highlights

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿನ ಶೌಚಗೃಹಗಳನ್ನೂ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.

ಬೆಂಗಳೂರು (ನ.29): ರಾಜ್ಯ ಹೈಕೋರ್ಟ್‌ನಿಂದ ಚಾಟಿ ಬೀಸಿದ ಬೆನ್ನಲ್ಲಿಯೇ ಬೆಂಗಳೂರಿನಲ್ಲಿ 301 ಹೊಸ ಶೌಚಗೃಹಗಳನ್ನು ನಿರ್ಮಾಣ ಮಾಡಲು ಮುಂದಾಗಿರುವ ಬಿಬಿಎಂಪಿ ಇದಕ್ಕಾಗಿ ಪ್ರತ್ಯೇಕ ಸಮಿತಿಯನ್ನುಯ ರಚನೆ ಮಾಡಿದೆ. ಜೊತೆಗೆ, ಬಿಬಿಎಂಪಿ ವ್ಯಾಪ್ತಿಯಲ್ಲಿನ ಎಲ್ಲ ಇಂದಿರಾ ಕ್ಯಾಂಟೀನ್‌ಗಳಲ್ಲಿರುವ ಶೌಚಾಲಯಗಳನ್ನು ನಾಳೆಯಿಂದಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬೆಂಗಳೂರಿನ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಕುರಿತು ಸಭೆ ನಡೆಸಿ ಮಾತನಾಡಿದ ಅವರು, ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಗಳಲ್ಲಿ ನಿರ್ಮಿಸಿರುವ ಶೌಚಾಲಯಗಳನ್ನು ಸಾರ್ವಜನಿಕರು ಉಪಯೋಗಿಸಲು ಅನುವು ಮಾಡಬೇಕು. ಈ ಸಂಬಂಧ ಕೂಡಲೆ ಆದೇಶ ಹೊರಡಿಸಲು ಅಧಿಕಾರಿಗೆ ಸೂಚನೆ ನೀಡಿದರು. ಜೊತೆಗೆ, ಹೊಸದಾಗಿ 301 ಶೌಚಾಲಯ ನಿರ್ಮಿಸಲು ಆಯಾ ವಲಯ ವ್ಯಾಪ್ತಿಯಲ್ಲಿ ಜನದಟ್ಟಣೆ ಪ್ರದೇಶ, ಮಾರುಕಟ್ಟೆಗಳು, ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸುವ ಸಂಬಂಧ ತ್ವರಿತವಾಗಿ ಸ್ಥಳಗಳನ್ನು ಗುರುತಿಸಿ ಪಟ್ಟಿ ನೀಡಲು ವಲಯ ಆಯುಕ್ತರಿಗೆ ಸೂಚಿಸಿದರು. 

Bengaluru ಬಾಯ್‌ಫ್ರೆಂಡ್‌ ಮೊಬೈಲ್‌ನಲ್ಲಿ ತನ್ನದೂ ಸೇರಿ ಹುಡ್ಗೀರ 13,000 ನಗ್ನ ಫೋಟೋ ಪತ್ತೆ!

ನಗರದಲ್ಲಿ ಈಗಾಗಲೇ 255 ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸ್ಥಳಗಳನ್ನು ಗುರುತಿಸಲಾಗಿದ್ದು, ಶೌಚಾಲಯಗಳನ್ನು ನಿರ್ಮಿಸುವ ಸ್ಥಳ ವಿಶಾಲವಾಗಿರಬೇಕಿದೆ. ಈ ಸಂಬಂಧ ವಿಶಾಲವಾದ ಸ್ಥಳಗಳನ್ನು ಗುರುತಿಸಬೇಕಿದೆ. ಜೊತೆಗೆ ನಗರದ ಕೇಂದ್ರ ಪ್ರದೇಶದಲ್ಲಿ ಹೆಚ್ಚಾಗಿ ಶೌಚಾಲಯಗಳನ್ನು ನಿರ್ಮಿಸಬೇಕು. ಈ ಪೈಕಿ ಸೂಕ್ತ ಸ್ಥಳಗಳನ್ನು ಗುರುತಿಸಬೇಕು. ಅಲ್ಲದೆ ಹೊಸದಾಗಿ 46 ಶೌಚಾಲಯಗಳನ್ನು ನಿರ್ಮಾಣ ಮಾಡಲು ಕೂಡಾ ಸೂಕ್ತ ಸ್ಥಳಗಳನ್ನು ಗುರುತಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಮಹಿಳಾ ಶೌಚಾಲಯ(She Toilets) ನಿರ್ಮಾಣಕ್ಕೆ ಆದ್ಯತೆ: ನಗರದಲ್ಲಿ 393 ಸಾರ್ವಜನಿಕ ಶೌಚಾಲಯಗಳಿದ್ದು, ಈ ಪೈಕಿ 360 ಸಾರ್ವಜನಿಕ ಶೌಚಾಲಯ, 6 ಕಮ್ಯುನಿಟಿ ಶೌಚಾಲಯ, 17 ಮಾಡ್ಯುಲಾರ್ ಶೌಚಾಲಯ ಹಾಗೂ 10 ಪ್ರೀಕಾಸ್ಟ್ ಶೌಚಾಲಯಗಳಿವೆ. ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ವರಿತಗತಿಯಲ್ಲಿ ಹೆಚ್ಚು ಶೌಚಾಲಯಗಳನ್ನು ನಿರ್ಮಿಸಬೇಕು. ಮಹಿಳೆಯರು ಸಂಚರಿಸುವ/ಓಡಾಡುವ ಸ್ಥಳಗಳನ್ನು ಗುರುತಿಸಿ ಮಹಿಳಾ ಶೌಚಾಲಯ(She Toilets)ಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಪೈಕಿ ಎಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ ಎಂಬುದನ್ನು ಗುರುತಿಸಿ ಮಹಿಳಾ ಶೌಚಾಲಯ ನಿರ್ಮಾಣ ಮಾಡಲು ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಇ-ಶೌಚಾಲಯ ಸರಿಯಾಗಿ ನಿರ್ವಹಣೆ ಮಾಡಿ: ನಗರದಲ್ಲಿ 229 ಇ-ಶೌಚಾಲಯಗಳಿದ್ದು, ಸದ್ಯ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಎಲ್ಲವನ್ನೂ ಸ್ಥಗಿತಗೊಳಿಸಲಾಗಿದೆ. ಇ-ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡುವ ಸಲುವಾಗಿ ಕೂಡಲೆ ಟೆಂಡರ್ ಕರೆದು ಸರಿಯಾಗಿ ನಿರ್ವಹಣೆ ಮಾಡಲು ಸೂಚಿಸಿದರು. ಜೊತೆಗೆ ಬಸ್ ತಂಗುದಾಣಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಸಾಧ್ಯವಾದಲ್ಲಿ ಕೆಲ ಪ್ರಮುಖ ಬಸ್ ತಂಗುದಾನಗಳ ಬಳಿ ಇ-ಶೌಚಾಲಯಗಳನ್ನು ಅಳವಡಿಸಬೇಕು ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಾಕೀತು ಮಾಡಿದರು. 

ಡಿ.ಕೆ. ಶಿವಕುಮಾರ್ ಮೇಲೆ ತೂಗುಗತ್ತಿ: ಅಕ್ರಮ ಆಸ್ತಿ ಗಳಿಕೆ ಕೇಸ್ ಮುಂದುವರಿಕೆ ಸಾಧ್ಯತೆ!

ಶೌಚಾಲಯ ನಿರ್ಮಿಸಲು ಸಮಿತಿ ರಚನೆ: ಹೈಕೋರ್ಟ್‌ ನಿರ್ದೇಶನದನ್ವಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸಂಕ್ಷಿಪ್ತ ಯೋಜನೆ ರೂಪಿಸುವ ಕುರಿತು ಸ್ಥಳೀಯ ಸಂಸ್ಥೆಗಳ ಹಂತದಲ್ಲಿ ಸಮಿತಿಗಳನ್ನು ರಚಿಸಲು ಆದೇಶಿಲಾಗಿರುತ್ತದೆ. ಅದರಂತೆ ಘನ ಕರ್ನಾಟಕ ಸರ್ಕಾರದ ಆದೇಶದನ್ವಯ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಹಾಗೂ ನಿರ್ವಹಣೆ ಮಾಡುವ ಸಂಕ್ಷಿಪ್ತ ಯೋಜನೆಗಳನ್ನು (Comprehensive Schemes) ರೂಪಿಸುವ ಕುರಿತು ಈ ಕೆಳಕಂಡಂತೆ ಸಮಿತಿಯನ್ನು ರಚಿಸಲಾಗಿದೆ.


ಸಮಿತಿಯ ವಿವರ:
ಅಧ್ಯಕ್ಷರು: 1. ಮುಖ್ಯ ಆಯುಕ್ತರು, ಬಿ.ಬಿ.ಎಂ.ಪಿ

  • ಸದಸ್ಯರು: 2. ವಿಶೇಷ ಆಯುಕ್ತರು (ಘ.ತ್ಯಾ.ನಿ)
  • 3. ವಿಶೇಷ ಆಯುಕ್ತರು (ಕಲ್ಯಾಣ)
  • 4. ಎಲ್ಲಾ ವಲಯ ಆಯುಕ್ತರು(ಪೂರ್ವ, ಪಶ್ಚಿಮ,ದಕ್ಷಿಣ,ಯಲಹಂಕ,ಆರ್.ಆರ್.ನಗರ,ದಾಸರಹಳ್ಳಿ,ಬೊಮನಹಳ್ಳಿ ಹಾಗೂ ಮಹದೇವಪುರ ವಲಯ).
  • 5. ಪ್ರಧಾನ ಅಭಿಯಂತರರು, ಮುಖ್ಯ ಅಭಿಯಂತರರು (ರಸ್ತೆ ಮೂಲ ಭೂತ ಸೌಕರ್ಯ)
  • 6. ಮುಖ್ಯ ಅಭಿಯಂತರರು (ಘ.ತ್ಯಾ.ನಿ)
  • 7. ಮಹಿಳಾ ಸದಸ್ಯರು (ಕೌನ್ಸಿಲರ್)
  • 8. ಮುಖ್ಯ ಆರೋಗ್ಯಾಧಿಕಾರಿಗಳು (ಸಾರ್ವಜನಿಕ)
  • 9. ಉಪ ಆಯುಕ್ತರು (ಕಲ್ಯಾಣ)
  • 10. NGO ಓರ್ವ ಸಕ್ರಿಯ ಮಹಿಳಾ ಪ್ರತಿನಿಧಿ

11.  ಸದಸ್ಯ ಕಾರ್ಯದರ್ಶಿ: ಜಂಟಿ ಆಯುಕ್ತರು(ಘ.ತ್ಯಾ.ನಿ)

click me!