ಒಂದು ಹೆಣ್ಣಿನೊಂದಿಗೆ ಸರತಿಯಲ್ಲಿ ಕೂಡುವ 6 ಗಂಡು ಹಾವು : ಹೆಬ್ಬಾವಿನ ಕುತೂಹಲದ ಸಂತಾನೋತ್ಪತ್ತಿ ಕ್ರಿಯೆ

By Kannadaprabha NewsFirst Published Dec 9, 2020, 1:40 PM IST
Highlights

ವಿವಿಧೆಡೆ ಇದೀಗ ಹಾವುಗಳು ಪತ್ತೆಯಾಗುತ್ತಿವೆ. ಪದೇ ಪದೇ ಹಾವುಗಳು ಕಾಣಿಸಿಕೊಳ್ಳುತ್ತಿದ್ದು ಈ ಕಾಲದಲ್ಲಿ ಹೆಚ್ಚಾಗಿ ಕಾಣಲು ಕಾರಣ ಏನೆಂದು ಮಾಹಿತಿ ಇಲ್ಲಿದೆ. 

ಉಡುಪಿ (ಡಿ.09):  ನಗರದ ಹೃದಯಭಾಗದಲ್ಲಿ  ಒಂದೇ ಕಡೆಯಲ್ಲಿ 4 ಭಾರಿ ಗಾತ್ರದ ಹೆಬ್ಬಾವುಗಳು ಪತ್ತೆಯಾಗಿವೆ. ಹಾವು ಹಿಡಿಯಲೆತ್ನಿಸಿದ ಒಬ್ಬರಿಗೆ ಹಾವೊಂದು ಕಡಿದಿದೆ.  ನಗರದ ಪೂರ್ಣಪ್ರಜ್ಞಾ ಕಾಲೇಜಿನ ಬಳಿಯ ಖಾಲಿ ನಿವೇಶನದಲ್ಲಿ ಮಂಗಳವಾರ ಸಂಜೆ ಹಲ್ಲು ಕತ್ತರಿಸುವಾಗ ಒಂದು ಹೆಬ್ಬಾವು ಪತ್ತೆಯಾಗಿತ್ತು. ಬಳಿಕ ಅಲ್ಲಿಯೇ ಪೊದೆಯಲ್ಲಿ ಇನ್ನೊಂದು ಹೆಬ್ಬಾವು ಪತ್ತೆಯಾಯಿತು. 

ಡಿಸೆಂಬರ್‌ ನಿಂದ ಫೆಬ್ರವರಿ ತನಕ ಶೇ.70ರಷ್ಟುಪ್ರಬೇಧದ ಹಾವುಗಳು ಸಂತಾನೋತ್ಪತ್ತಿಗಾಗಿ ಲೈಂಗಿಕ ಕ್ರಿಯೆಯ ಋುತು. ಅವುಗಳಲ್ಲಿ ಹೆಬ್ಬಾವು ಕೂಡ ಒಂದು. ಈ ನಿಟ್ಟಿನಲ್ಲಿ ಗುಂಪಿನಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತವೆ. 

ಶೆಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ : ಅಬ್ಬಬ್ಬಾ ..! ..

 ಒಂದು ಹೆಣ್ಣು ಹೆಬ್ಬಾವಿನೊಂದಿಗೆ 5-6 ಗಂಡು ಹೆಬ್ಬಾವುಗಳು ಸರದಿಯಲ್ಲಿ ಲೈಂಗಿಕ ಕ್ರಿಯೆ ನಡೆಸುತ್ತವೆ. ಈ ಗಂಡು ಹಾವುಗಳ ಮಧ್ಯೆ ಸ್ಪರ್ಧೆ, ಜಗಳ ಇರುವುದಿಲ್ಲ. ತಾಳ್ಮೆಯಿಂದ ಕಾದು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತವೆ.

ಹೆಣ್ಣು ಹಾವು ಗಾತ್ರದಲ್ಲಿ ದೊಡ್ಡದಿರುತ್ತವೆ. ಗಂಡು ಹಾವುಗಳು ಚಿಕ್ಕದಿರುತ್ತವೆ. ಹೆಬ್ಬಾವುಗಳು ವಿಷಕಾರಿಯಲ್ಲ ಎನ್ನುತ್ತಾರೆ ಉರಗ ತಜ್ಞರಾದ ಗುರುರಾಜ್ ಸುನಿಲ್.

click me!