ವಿಕ್ರಮಾದಿತ್ಯ ವೀಕ್ಷಣೆಗೆ ಅವಕಾಶ

By Kannadaprabha NewsFirst Published Jul 16, 2019, 3:52 PM IST
Highlights

ದೇಶದ ವಿಮಾನ ವಾಹಕ ಅತಿದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ವೀಕ್ಷಿಸಲು ಜು.20ಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಲಾಗಿದೆ. ಜು. 20ರಂದು ಮಧ್ಯಾಹ್ನ 11ಗಂಟೆಯಿಂದ ಸಂಜೆ 5ಗಂಟೆ ತನಕ ವೀಕ್ಷಿಸಬಹುದಾಗಿದೆ.

ಕಾರವಾರ(ಜು.16): ದೇಶದ ವಿಮಾನ ವಾಹಕ ಅತಿದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ವೀಕ್ಷಿಸಬೇಕೆ.. ? ಹಾಗಿದ್ದರೆ ಜು.20ಕ್ಕೆ ಇಲ್ಲಿನ ಐಎನ್‌ಎಸ್ ಕದಂಬ ನೌಕಾನೆಲೆಗೆ ಬನ್ನಿ. ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ 20ನೇ ವರ್ಷಾಚರಣೆ ಜು. 26ರಂದು ಆಚರಿಸಲಾಗುತ್ತಿದೆ.

ಇದರ ಪ್ರಯುಕ್ತ ನೌಕಾಪಡೆ ಸಾರ್ವಜನಿಕರು ಹಾಗೂ ಕಾರವಾರದ ಶಾಲಾ ವಿದ್ಯಾರ್ಥಿಗಳಿಗೆ (5 ಹಾಗೂ ನಂತರದ ತರಗತಿಯ ವಿದ್ಯಾರ್ಥಿಗಳಿಗೆ) ಐಎನ್‌ಎಸ್ ವಿಕ್ರಮಾದಿತ್ಯ ಹಾಗೂ ಐಎನ್‌ಎಸ್ ಸುವರ್ಣ ಯುದ್ಧ ನೌಕೆ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದೆ. ಜು. 20ರಂದು ಮಧ್ಯಾಹ್ನ 11ಗಂಟೆಯಿಂದ ಸಂಜೆ 5ಗಂಟೆ ತನಕ ವೀಕ್ಷಿಸಬಹುದಾಗಿದೆ.

ನೌಕಾನೆಲೆಗೆ ಸಾರ್ವಜನಿಕರು ವಾಹನ ಒಯ್ಯುವಂತಿಲ್ಲ:

ಸಾರ್ವಜನಿಕರು ತಮ್ಮ ವಾಹನಗಳನ್ನು ನೌಕಾನೆಲೆಯ ಒಳಗೆ ಒಯ್ಯುವಂತಿಲ್ಲ. ಅರ್ಗಾ ಗೇಟ್ ಬಳಿ ತಮ್ಮ ವಾಹನ ಪಾರ್ಕ ಮಾಡಬೇಕು. ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ಸರ್ಕಾರ ಕೊಡಮಾಡಿದ ಭಾವಚಿತ್ರ ಇರುವ ಗುರುತಿನ ಪತ್ರ ತೋರಿಸಿ ಪ್ರವೇಶ ಪಡೆಯಬಹುದು. ನೌಕಾನೆಲೆ ವಾಹನದಲ್ಲಿ ಯುದ್ಧ ನೌಕೆ ಇರುವಲ್ಲಿ ಕರೆದೊಯ್ಯಲಾಗುತ್ತದೆ ಎಂದು ನೌಕಾನೆಲೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಳೆಯಾಗದಿದ್ದರೆ ಕದಂಬ ನೌಕಾನೆಲೆಯಿಂದ ನೌಕೆಗಳ ಸ್ಥಳಾಂತರ

click me!