ಒಬ್ಬಂಟಿ ಮಹಿಳೆಗೆ ಹಲವು ಮಹಿಳೆಯರ ಗುಂಪು ಸೇರಿಕೊಂಡು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದು, ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ.
ಬೆಳಗಾವಿ (ಅ.14): ಮಧ್ಯರಾತ್ರಿ ವೇಳೆ ನಿರ್ಭೀತವಾಗಿ ರಸ್ತೆಗೆ ಬಂದ ಒಬ್ಬಂಟಿ ಮಹಿಳೆಗೆ ಹಲವು ಮಹಿಳೆಯರ ಗುಂಪು ಸೇರಿಕೊಂಡು ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ್ದು, ಇಡೀ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದ್ದಾರೆ.
ಹೌದು, ಬೆಳಗಾವಿಯಲ್ಲಿ ಇಡೀ ಮಾನವೀಯ ಸಮಾಜವೇ ತಲೆ ತಗ್ಗಿಸುವ ಘಟನೆ ನಡೆದಿದೆ. ಮಹಿಳೆಯರಿಂದಲೇ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ತಡರಾತ್ರಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮರವಣಿಗೆ ಮಾಡಿರುವ ಘಟನೆ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾದಲ್ಲಿ ನಡೆದಿದೆ. ಘಟಪ್ರಭಾದ ಮೃತ್ಯುಂಜಯ ಸರ್ಕಲ್ ನಲ್ಲಿ ಮಹಿಳೆಯರ ಗುಂಪು ಸೇರಿಕೊಂಡು ಒಬ್ಬಂಟಿ ಮಹಿಳೆಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಇತರೆ ಮಹಿಳೆಯರು ಆಕೆಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ತೊಡೆ ಕಾಣಿಸೋ ಸೀಳು ಬಟ್ಟೆ ಧರಿಸಿಕೊಂಡು, ಕೈಯಿಂದ ತೊಡೆ ಮುಚ್ಕೊಂಡ ಜಾನ್ವಿ ಕಪೂರ್!
ಇನ್ನು ಹಲ್ಲೆಗೊಳಗಾದ ಮಹಿಳೆಯು ಸ್ಥಳೀಯವಾಗಿ ಹಲವು ಉದ್ಯಮಿಗಳು, ವ್ಯಾಪಾರಿಗಳು ಹಾಗೂ ನೌಕರರನ್ನು ಹನಿಟ್ರ್ಯಾಪ್ ಮಾಡುತ್ತಾ, ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡುತ್ತಾಳೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಈ ಮಹಿಳೆಯು ಕಿರುಕುಳ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿ, ಬಂಧಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು. ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು, ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಪ್ರೀತಿಸುವಾಗ ಲೈಂಗಿಕ ಕ್ರಿಯೆ ಮಾಡುವುದು ಅಪರಾಧವಲ್ಲ: ಪ್ರೇಮ ಸಂಬಂಧದಲ್ಲಿ ಲೈಂಗಿಕ ಸಂಬಂಧವನ್ನು ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಪಾಟ್ನಾ ಸಿವಿಲ್ ಕೋರ್ಟ್ ಹೇಳಿದೆ. ಕಳೆದ ಎಂಟು ವರ್ಷಗಳಿಂದ ನಡೆಯುತ್ತಿರುವ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ವೇಳೆ ಪಾಟ್ನಾ ಸಿವಿಲ್ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಸಂಗಮ್ ಸಿಂಗ್ ಈ ವಿಷಯ ತಿಳಿಸಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅತ್ಯಾಚಾರ ಆರೋಪದಿಂದ ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು.
ಪ್ರೀತಿ ಮಾಡುವಾಗ 'ಲೈಂಗಿಕ ಕ್ರಿಯೆ' ನಡೆಸುವುದು ರೇಪ್ ಅಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು
ಸಂತ್ರಸ್ತೆ ಮೇಜರ್ ಆಗಿದ್ದು, ಆಕೆ ಆರೋಪಿ ವಿಪಿನ್ ಕುಮಾರ್ ಅಲಿಯಾಸ್ ವಿಪಿನ್ ಲಾಲ್ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರೂ ಒಪ್ಪಿಗೆಯ ದೈಹಿಕ ಸಂಬಂಧ ಹೊಂದಿರುವುದು ನ್ಯಾಯಾಲಯ (Court)ದಲ್ಲಿ ಸಾಬೀತಾಗಿದೆ ಎಂದು ನ್ಯಾಯಮೂರ್ತಿ ಸಿಂಗ್ ತೀರ್ಪಿನಲ್ಲಿ ಹೇಳಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ದೂರುದಾರರಿಗೆ ಆರೋಪಿಯೊಂದಿಗೆ ಹಣಕಾಸಿನ ವಿವಾದವಿದ್ದು, ನಂತರ ಆಕೆ ಪೊಲೀಸರಿಗೆ ಅತ್ಯಾಚಾರದ ದೂರು ನೀಡಿದ್ದಳು. ಆದರೆ, ಆಕೆ ನ್ಯಾಯಾಲಯಕ್ಕೆ ಪುರಾವೆ (Proof) ಸಲ್ಲಿಸಲು ವಿಫಲಳಾದಳು ಎಂದು ತಿಳಿದುಬಂದಿದೆ.