ಬೆಂಗಳೂರು: ಮೊಬೈಲ್‌ ಕಸಿದು ಓಡುತ್ತಿದ್ದಾಗ ಕ್ಯಾಬ್‌ ಡಿಕ್ಕಿಯಾಗಿ ಕಳ್ಳ ಸಾವು

Published : Oct 14, 2023, 11:23 AM IST
ಬೆಂಗಳೂರು: ಮೊಬೈಲ್‌ ಕಸಿದು ಓಡುತ್ತಿದ್ದಾಗ ಕ್ಯಾಬ್‌ ಡಿಕ್ಕಿಯಾಗಿ ಕಳ್ಳ ಸಾವು

ಸಾರಾಂಶ

ಬಳ್ಳಾರಿ ಸರ್ವೀಸ್‌ ರಸ್ತೆಯ ಹೆಬ್ಬಾಳ ಬಸ್ ನಿಲ್ದಾಣ ಬಳಿ ಸೋದಾಗಾರ ಮೆಹರಾಜ್‌ ಎಂಬುವರು ಬಸ್ಸಿಗೆ ಕಾಯುತ್ತಿದ್ದರು. ಆಗ ಅವರಿಂದ ಮೊಬೈಲ್‌ ಕಸಿದುಕೊಂಡು ಆರೋಪಿ ಪರಾರಿ ಆಗುಗುತ್ತಿದ್ದ ಕಳ್ಳನಿಗೆ ಕ್ಯಾಬ್‌ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಮೃತಪಟ್ಟಿದ್ದಾನೆ. 

ಬೆಂಗಳೂರು(ಅ.14):  ಬಸ್ಸಿಗೆ ಕಾಯುತ್ತಿದ್ದ ಮಹಿಳೆಯ ಮೊಬೈಲ್ ಕದ್ದು ಪರಾರಿ ಆಗುವಾಗ ಕ್ಯಾಬ್‌ ಡಿಕ್ಕಿಯಾಗಿ ಕಳ್ಳನೊಬ್ಬ ಮೃತಪಟ್ಟಿರುವ ಘಟನೆ ಆರ್‌.ಟಿ.ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅ.9ರಂದು ಬಳ್ಳಾರಿ ಸರ್ವೀಸ್‌ ರಸ್ತೆಯ ಹೆಬ್ಬಾಳ ಬಸ್ ನಿಲ್ದಾಣ ಬಳಿ ಸೋದಾಗಾರ ಮೆಹರಾಜ್‌ ಎಂಬುವರು ಬಸ್ಸಿಗೆ ಕಾಯುತ್ತಿದ್ದರು. ಆಗ ಅವರಿಂದ ಮೊಬೈಲ್‌ ಕಸಿದುಕೊಂಡು ಆರೋಪಿ ಪರಾರಿ ಆಗುಗುತ್ತಿದ್ದ ಕಳ್ಳನಿಗೆ ಕ್ಯಾಬ್‌ ಡಿಕ್ಕಿಯಾಗಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆರೋಪಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು: ಬೈಕ್‌ಗೆ ಬಿಎಂಟಿಸಿ ಬಸ್‌ ಡಿಕ್ಕಿ, ಯುವಕ ಸಾವು

ಮೃತ ವ್ಯಕ್ತಿ 40-45 ವರ್ಷ ವಯೋಮಾನದವನಾಗಿದ್ದು, 5.3 ಅಡಿ ಎತ್ತರವಿದ್ದಾನೆ. ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಮೃತನ ಎಡಭುಜದ ಮೇಲೆ ಕಪ್ಪು ಬಣ್ಣದ ಹುಟ್ಟು ಮಚ್ಚೆ ಇರುತ್ತದೆ. ಮೃತನ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ದೂ.080-22943026, 22943027 ಅಥವಾ ಮೊ.94808 01931ಕ್ಕೆ ಕರೆ ಮಾಡುವಂತೆ ಆರ್‌,ಟಿ.ನಗರ ಸಂಚಾರ ಠಾಣೆ ಪೊಲೀಸರು ಮನವಿ ಮಾಡಿದ್ದಾರೆ.

PREV
Read more Articles on
click me!

Recommended Stories

ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!