ಮುಸ್ಲಿಂರ ವ್ಯಾಪಾರಕ್ಕೆ ನಿರ್ಬಂಧ: ಕೇಸರಿ ನಾಯಕರ ವಿರುದ್ಧವೂ ಸೋಶಿಯಲ್ ವಾರ್, ಮುಜುಗರಕ್ಕೀಡಾದ ಬಿಜೆಪಿ!

Published : Mar 25, 2022, 12:18 PM ISTUpdated : Mar 25, 2022, 01:06 PM IST
ಮುಸ್ಲಿಂರ ವ್ಯಾಪಾರಕ್ಕೆ ನಿರ್ಬಂಧ: ಕೇಸರಿ ನಾಯಕರ ವಿರುದ್ಧವೂ ಸೋಶಿಯಲ್ ವಾರ್, ಮುಜುಗರಕ್ಕೀಡಾದ ಬಿಜೆಪಿ!

ಸಾರಾಂಶ

*  ಕೇಸರಿ ನಾಯಕರು ಅನ್ಯಧರ್ಮೀಯರಿಗೆ ನೀಡುವ ಕಾಂಟ್ರಾಕ್ಟ್ ಯಾವಾಗ ನಿಲ್ಲಿಸ್ತೀರಾ? *  ಹಲವು ಹಿಂದೂ ನಾಯಕರಿಗೂ ಇದೆ ಅನ್ಯಧರ್ಮೀಯರ ಜೊತೆ ವ್ಯವಹಾರ *  ಸಾಮಾಜಿಕ ತಾಣಗಳಲ್ಲಿ ಬಿಜೆಪಿ ನಾಯಕರ ಪ್ರಶ್ನಿಸಿದ ಪೋಸ್ಟರ್‌ ವೈರಲ್

ಭರತ್ ರಾಜ್ ಏಷ್ಯಾನೆಟ್ ಸುವರ್ಣ ‌ನ್ಯೂಸ್ ಮಂಗಳೂರು

ಮಂಗಳೂರು(ಮಾ.25): ದೇವಸ್ಥಾನಗಳಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ ವಿವಾದ ಕಾವು ಪಡೆದುಕೊಳ್ಳುತ್ತಿರೋ ಹೊತ್ತಲ್ಲೇ ಕೇಸರಿ ಪಕ್ಷದ ನಾಯಕರ ವಿರುದ್ಧವೂ ಸಾಮಾಜಿಕ ತಾಣಗಳಲ್ಲಿ ಪೋಸ್ಟರ್‌ಗಳು ವೈರಲ್ ಆಗಿವೆ. ಅನ್ಯಧರ್ಮೀಯರ ಜೊತೆ ನಿಮಗಿರೋ ವ್ಯವಹಾರ ಮೈತ್ರಿಯನ್ನ ಯಾವಾಗ ನಿಲ್ಲಿಸ್ತೀರಿ ಅಂತ ಪ್ರಶ್ನಿಸಿ ಸಾಮಾಜಿಕ ತಾಣಗಳಲ್ಲಿ ಬಿಜೆಪಿ ‌ನಾಯಕರ ವಿರುದ್ಧವೇ ಅಭಿಯಾನ ಆರಂಭಿಸಲಾಗಿದೆ. 

ದೇವಸ್ಥಾನದ ಆರ್ಥಿಕ ನಿರ್ಬಂಧದ ಬೆನ್ನಲ್ಲೇ ಕೇಸರಿ ನಾಯಕರ ವಿರುದ್ಧವೂ ಸೋಶಿಯಲ್ ಮೀಡಿಯಾ ಅಭಿಯಾನ ಚಾಲ್ತಿಗೆ ಬಂದಿದೆ. ಅನ್ಯ ಧರ್ಮೀಯರ ಜೊತೆ ಮೈತ್ರಿ ಯಾವಾಗ ನಿಲ್ಲಿಸ್ತೀರಾ ಅಂತ‌ ಪ್ರಶ್ನಿಸಿ, ಸಾಮಾಜಿಕ ತಾಣಗಳಲ್ಲಿ ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಪೋಸ್ಟರ್‌ಗಳು ವೈರಲ್ ಆಗಿವೆ. ಸಂಸದರು, ಶಾಸಕರು, ಕಾರ್ಪೋರೆಟರ್‌ಗಳು, ಗ್ರಾ.ಪಂ ಸದಸ್ಯರಿಗೆ ಪ್ರಶ್ನೆ ಕೇಳಲಾಗಿದ್ದು, ಬಿಜೆಪಿಯ ಕೆಲ ನಾಯಕರಿಗೆ ಮತ್ತಷ್ಟು ಮುಜುಗರ ಹೆಚ್ಚಿಸಿದೆ. ದೇವಸ್ಥಾನ ಜಾತ್ರೆ ವೇಳೆ ಅನ್ಯಧರ್ಮೀಯರ ವ್ಯವಹಾರ ನಿಲ್ಲಿಸಿರೋದು ಸ್ವಾಗತಾರ್ಹ, ಆದರೆ ಕೇಸರಿ ನಾಯಕರಿಗೆ ಹಿಂದೂ ಸಮಾಜದ ಒಂದು ಪ್ರಶ್ನೆ, ಕೇಸರಿ ಪಕ್ಷದ ಜನಪ್ರತಿನಿಧಿಗಳು ಅನ್ಯಧರ್ಮೀಯರಿಗೆ ನೀಡುವ ಕಾಂಟ್ರಾಕ್ಟ್ ಯಾವಾಗ ನಿಲ್ಲಿಸ್ತೀರಾ?, ಅನ್ಯಧರ್ಮೀಯರ ಜೊತೆ ಮೈತ್ರಿ ವ್ಯವಹಾರ ಒಪ್ಪಂದ ಯಾವಾಗ ‌ನಿಲ್ಲಿಸ್ತೀರಾ!' ಅಂತ ಪ್ರಶ್ನೆ ಮಾಡಲಾಗಿದೆ. ಕೇಸರಿ ಪಕ್ಷದ ಅನೇಕ ನಾಯಕರಿಗೆ ಅನ್ಯಧರ್ಮೀಯರ ಜೊತೆ ವ್ಯವಹಾರಿಕ ಒಪ್ಪಂದದ ಹಿನ್ನೆಲೆ ಈ ಸೋಶಿಯಲ್ ವಾರ್ ಆರಂಭವಾಗಿದೆ ಎನ್ನಲಾಗಿದೆ.

Ban Muslim Traders: ಕೊಲ್ಲೂರಿನಲ್ಲೂ ಮುಸ್ಲಿಮರಿಗೆ ವ್ಯಾಪಾರಕ್ಕೆ ತಡೆಕೋರಿ ಮನವಿ

ಹಲವು ಹಿಂದೂ ನಾಯಕರಿಗೂ ಇದೆ ಅನ್ಯಧರ್ಮೀಯರ ಜೊತೆ ವ್ಯವಹಾರ!

ಇನ್ನು ಈ ಸೋಶಿಯಲ್ ಮೀಡಿಯಾ ಅಭಿಯಾನ ಕೇವಲ ಬಿಜೆಪಿ ನಾಯಕರನ್ನಷ್ಟೇ ಪ್ರಶ್ನೆ ಮಾಡುತ್ತಿಲ್ಲ.‌ ಬದಲಾಗಿ ಕೆಲ ಹಿಂದೂ ಸಂಘಟನೆಗಳ ನಾಯಕರಿಗೂ ಅನ್ಯಧರ್ಮೀಯರ ಜೊತೆ ವ್ಯಾವಹಾರಿಕ ಮೈತ್ರಿ ಇರೋದು ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ. ಕೆಲ ಹಿಂದೂ ಮುಖಂಡರ ವ್ಯವಹಾರದ ಕಾಂಟ್ರಾಕ್ಟ್ ಗಳು ಮುಸ್ಲಿಮರ ಸಂಸ್ಥೆಗಳ ಜೊತೆಗಿದ್ದು, ಪಾಲುದಾರಿಕೆ ವ್ಯವಹಾರಗಳ ಬಗ್ಗೆಯೂ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗ್ತಿದೆ. ಆದರೆ ಹೀಗಿದ್ದರೂ ಹಿಂದೂ ಸಮಾಜಕ್ಕೆ ಮಾತ್ರ ಅನ್ಯಧರ್ಮೀಯರ ಜೊತೆ ವ್ಯವಹಾರ ಬೇಡ ಅಂತ ಉಪದೇಶ ನೀಡೋ ಕೇಸರಿ ಮುಖಂಡರು ಅನ್ಯಧರ್ಮೀಯರ ಜೊತೆ ವ್ಯವಹಾರಿಕ ಮೈತ್ರಿ ಯಾವಾಗ ನಿಲ್ಲಿಸ್ತೀರಾ ಅಂತ ಕೆಲವರು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಎತ್ತಿದ್ದಾರೆ.

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ರಾಜ್ಯಾದ್ಯಂತ ಆಂದೋಲನಕ್ಕೆ ಶ್ರೀರಾಮಸೇನೆ ನಿರ್ಧಾರ

ಹಿಜಾಬ್‌ ತೀರ್ಪು ​ಧಿಕ್ಕರಿಸಿ ಬಂದ್‌ ಎಫೆಕ್ಟ್‌: ಕರ್ನಾಟಕದ ಇನ್ನಷ್ಟು ಕಡೆ ಮುಸ್ಲಿಂರ ಜಾತ್ರೆ ವ್ಯಾಪಾರಕ್ಕೆ ಬಹಿಷ್ಕಾರ

ಬೆಂಗಳೂರು:  ದೇವಸ್ಥಾನದ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ(Muslim Traders) ವ್ಯಾಪಾರ ವಹಿವಾಟಿಗೆ ಅವಕಾಶ ನಿರಾಕರಿಸುತ್ತಿರುವ ಮತ್ತಷ್ಟು ಪ್ರಸಂಗಗಳು ವರದಿಯಾಗಿವೆ. ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಕಾಣಿಸಿಕೊಂಡಿದ್ದ ಈ ಬೆಳವಣಿಗೆ ರಾಜಧಾನಿ ಬೆಂಗಳೂರು(Bengaluru) ಬಳಿಕ ಇದೀಗ ಬಯಲುಸೀಮೆ ಜಿಲ್ಲೆಗಳಾದ ಹಾಸನ, ತುಮಕೂರುಗಳಲ್ಲೂ ಕಂಡುಬಂದಿದೆ. 

ಹಾಸನದ ಪ್ರಸಿದ್ಧ ಬೇಲೂರು ಚೆನ್ನಕೇಶವ ದೇವಾಲಯ, ತುಮಕೂರು ಜಿಲ್ಲೆಯ ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯ, ಶಿವಮೊಗ್ಗ ಜಿಲ್ಲೆಯ ಸಾಗರದ ಮಹಾಗಣಪತಿ, ದೇವಸ್ಥಾನದ(Temples) ಜಾತ್ರೆಗಳಲ್ಲಿ(Fair) ವ್ಯಾಪಾರ ಮಳಿಗೆಗಳನ್ನು ಹಿಂದೂ(Hindu) ಸಮಾಜದ ವ್ಯಾಪಾರಿಗಳಿಗೆ ಮಾತ್ರ ನೀಡುವಂತೆ ಒತ್ತಾಯಿಸಲಾಗಿದ್ದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಬಳಿಯ ಆದಿ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡುವುದಿಲ್ಲ ಎಂಬ ಒಕ್ಕಣೆಯಿರುವ ಬ್ಯಾನರ್‌ ಅಳವಡಿಸಲಾಗಿದೆ.

ಮತ್ತೆ 4 ಕಡೆ ವಿರೋಧ:

ಗುರುವಾರ ಮತ್ತೆ ಮೂರು ಕಡೆಗಳಲ್ಲಿ ಹಿಂದೂಯೇತರಿಗೆ ಅವಕಾಶ ಕಲ್ಪಿಸಬಾರದೆಂದು ಹಿಂದೂಪರ ಸಂಘಟನೆಗಳು ಮನವಿ ಸಲ್ಲಿಸಿವೆ. ಏಪ್ರಿಲ್‌ 13 ಮತ್ತು 14ರಂದು ನಡೆಯಲಿರುವ ವಿಶ್ವಪ್ರಸಿದ್ಧ ಬೇಲೂರು ಚನ್ನಕೇಶವ ದೇವಸ್ಥಾನದ ರಥೋತ್ಸವದಲ್ಲಿ ಹಿಂದೂಯೇತರರು ವ್ಯಾಪಾರ ನಡೆಸುವುದನ್ನು ನಿರ್ಬಂಧಿಸುವಂತೆ ವಿಶ್ವ ಹಿಂದೂ ಪರಿಷತ್‌ನ(Vishwa Hindu Parishad) ಪದಾಧಿಕಾರಿಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿದ್ದಾರೆ. ಹಿಜಾಬ್‌ ತೀರ್ಪಿನ ಹೈಕೋರ್ಟ್‌(High Court) ಆದೇಶವನ್ನು ​ಧಿಕ್ಕರಿಸಿ ಮುಸ್ಲಿಮರು ಅಂಗಡಿಗಳನ್ನು ಬಂದ್‌ ಮಾಡಿದ್ದರು. ಅದ್ದರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳಲ್ಲಿ ಯಾವುದೇ ಜಾತ್ರೆಗಳಲ್ಲಿ ವ್ಯಾಪಾರ ವಹಿವಾಟು ನಡೆಸದಂತೆ ನಿರ್ಬಂಧಿಸಬೇಕು ಎಂದು ಮನವಿ ಮಾಡಿದ್ದಾರೆ.
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ