ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಜೋರ್ಣೋದ್ಧಾರಕ್ಕೆ ಅಗತ್ಯವಾದ ಸಹಾಯ-ಸಹಕಾರವನ್ನು ನೀಡಲಾಗುವುದು ಎಂದ ಸುಧಾ ನಾರಾಯಣ ಮೂರ್ತಿ
ದೇವದುರ್ಗ(ನ.17): ತಾಲೂಕಿನ ಗಬ್ಬೂರು ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಇನ್ಪೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಬುಧವಾರ ಭೇಟಿ ನೀಡಿದರು. ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಸುಧಾಮೂರ್ತಿ ಅವರು ಶ್ರೀಲಕ್ಷ್ಮೇ ವೆಂಟಕೇಶ್ವರ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ, ಗರ್ಭಗುಡಿಯಲ್ಲಿಯೇ ಕೆಲಕಾಲ ಕುಳಿತುಕೊಂಡು ಪ್ರಾರ್ಥನೆಯನ್ನು ಮಾಡಿದರು.
ನಂತರ ಮಾತನಾಡಿದ ಅವರು, ಐತಿಹಾಸಿಕ ಪ್ರಸಿದ್ಧಿಯನ್ನು ಹೊಂದಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಯ ಅಗತ್ಯವಿದ್ದು, ಅದಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರಾಚ್ಯವಸ್ತು-ಪುರಾತತ್ವ ಇಲಾಖೆಯ ಅಧೀನದಲ್ಲಿರುವ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಂಬಂಧಿಸಿದಂತೆ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ಮಾಡಿ ಸೂಕ್ತ ತೀರ್ಮಾಣವನ್ನು ಕೈಗೊಳ್ಳಲಾಗುವುದು. ಗುಡಿ ಜೀರ್ಣೋದ್ಧಾರಕ್ಕಾಗಿ ಇರುವಂತಹ ಸಾಧಕ-ಬಾಧಕಗಳನ್ನು ಪರಿಶೀಲಿಸಿ, ಇಲಾಖೆಯ ಮಾರ್ಗದರ್ಶನ ಮೇರೆಗೆ ಯಾವ ರೀತಿಯಲ್ಲಿ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕು ಎನ್ನುವುದರ ಬಗ್ಗೆ ಚರ್ಚಿಸಲಾಗುವುದು. ಅಷ್ಟೇ ಅಲ್ಲದೇ ಜೋರ್ಣೋದ್ಧಾರಕ್ಕೆ ಅಗತ್ಯವಾದ ಸಹಾಯ-ಸಹಕಾರವನ್ನು ನೀಡಲಾಗುವುದು ಎಂದು ಹೇಳಿದರು.
undefined
ಭಿಡೆ ಯಾರೆಂದೇ ಗೊತ್ತಿರಲಿಲ್ಲ, ಹಿರಿಯರೆಂದು ನಮಸ್ಕರಿಸಿದೆ: ಸುಧಾಮೂರ್ತಿ
ಮಾನ್ವಿಯ ಜಗನ್ನಾಥದಾಸರ ದೇಗುಲಕ್ಕೆ ಸುಧಾಮೂರ್ತಿ ಭೇಟಿ
ಮಾನ್ವಿ: ಪಟ್ಟಣದ ಐತಿಹಾಸಿಕ ಶ್ರೀಜಗನ್ನಾಥ ದಾಸರ ದೇವಸ್ಥಾನಕ್ಕೆ ಇನ್ಪೋಸಿಸ್ ಮುಖ್ಯಸ್ಥೆ ಸುಧಾ ನಾರಾಯಣ ಮೂರ್ತಿ ಭೇಟಿ ನೀಡಿದರು.
ಶ್ರೀಜಗನ್ನಾಥ ದಾಸರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಅರ್ಚಕರಿಂದ ದೇವಸ್ಥಾನದ ಹಿನ್ನೆಲೆ ಬಗ್ಗೆ ಮಾಹಿತಿ ಪಡೆದರು. ಮಠದ ವ್ಯವಸ್ಥಾಪಕ ಪಂಡಿತ ದ್ವಾರಕನಾಥ ಆಚಾರ್ಯ, ಅರ್ಚಕ ರವಿ ಆಚಾರ್ಯ ಇದ್ದರು.