ಹುಣಸೂರಲ್ಲಿ JDSಗೆ ಇನ್ನೊಂದು ಹಿನ್ನಡೆ, ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್‌ಗೆ

Published : Nov 23, 2019, 10:41 AM IST
ಹುಣಸೂರಲ್ಲಿ JDSಗೆ ಇನ್ನೊಂದು ಹಿನ್ನಡೆ, ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್‌ಗೆ

ಸಾರಾಂಶ

ಉಪಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿದೆಗರಿದ್ದು, ಹುಣಸೂರಿಲ್ಲಿ ಜೆಡಿಎಸ್‌ಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಜೆಡಿಎಸ್‌ನ ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್ ಸೇರಿದ್ದಾರೆ.

ಮೈಸೂರು(ನ.23): ಉಪಚುನಾವಣೆ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆಗಳು ಗರಿದೆಗರಿದ್ದು, ಹುಣಸೂರಿಲ್ಲಿ ಜೆಡಿಎಸ್‌ಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಜೆಡಿಎಸ್‌ನ ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್ ಸೇರಿದ್ದಾರೆ.

ಹುಣಸೂರು ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ್ತೊಂದು ಹಿನ್ನಡೆ ಎದುರಾಗಿದ್ದು ಹುಣಸೂರು ಪ್ರಭಾವಿ ಮುಸ್ಲಿಂ ಮುಖಂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಜೆಡಿಎಸ್ ಮುಖಂಡ, ಮಾಜಿ ನಗರಸಭೆ ಸದಸ್ಯ ಹಝರತ್ಝಾನ್ ಕಳೆದ ರಾತ್ರಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಉಪಚುನಾವಣೆ: ಬೀಗರ ಔತಣದ ನೆಪದಲ್ಲಿ 6 ಸಾವಿರ ಜನಕ್ಕೆ ಬಾಡೂಟ

ಸುದ್ದಿ ತಿಳಿದು ರಾತ್ರಿ ಹಝರತ್ಝಾನ್ ಮನೆಗೆ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದು, ಹಝರತ್ಝಾನ್ ಪ್ರಜ್ವಲ್ ರೇವಣ್ಣ ಭೇಟಿಗೆ ಸಿಕ್ಕಿಲ್ಲ. 35 ವರ್ಷಗಳಿಂದ ಜೆಡಿಎಸ್‌ನಿಂದ ಪುರಸಭೆ ಸದಸ್ಯರಾಗಿದ್ದ ಹಝರತ್ಝಾನ್ ಕಾಂಗ್ರೆಸ್‌ಗೆ ಸೇರಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿದೆ.

ಪ್ರಭಾವಿ ಮುಖಂಡ ಜೆಡಿಎಸ್ ಬಿಟ್ಟಿದ್ದಕ್ಕೆ ಜೆಡಿಎಸ್‌ನಲ್ಲಿ ತಳಮಳ ಆರಂಭವಾಗಿದೆ. ಇಂದು ಸಂಜೆ ಹಝರತ್ಝಾನ್ ಜೊತೆ ಪ್ರಜ್ವಲ್ ಮಾತುಕತೆಗೆ ಸಮಯ ನಿಗದಿಪಡಿಸಲಾಗಿದೆ.

ಉಪ ಚುನಾವಣೆಗೆ ಮಿಷನ್‌-3 ಯಂತ್ರ ಸಿದ್ಧ

PREV
click me!

Recommended Stories

ಉಳಿ ಪೆಟ್ಟು ಬಿದ್ದಾಗಲಷ್ಟೇ ಶಿಲೆಆಗುತ್ತದೆ ಕಲ್ಲು: ಡಿಕೆ ಹಿತನುಡಿ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು