ಇಡಿ ಕೇಸ್‌ನಿಂದ ಮುಕ್ತಿ ನೀಡುವಂತೆ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ!

By Web Desk  |  First Published Nov 23, 2019, 10:06 AM IST

ಪತ್ರದ ಮೂಲಕ ದುರ್ಗಾ ದೇವಿ ಮುಂದೆ ಅಳಲು ತೋಡಿಕೊಂಡಿರುವ ಡಿಕೆಶಿ|ಯಾದಗಿರಿ ಜಿಲ್ಲೆ ವಡಗೇರಾ ತಾಲೂಕಿನ ಗೋನಾಳ ಗಡೇ ದುರ್ಗಾದೇವಿಗೆ ಪತ್ರ ಬರೆದ ಡಿಕೆಶಿ|ಡಿ ಕೆ ಶಿವಕುಮಾರ್ ಬರೆದಿರುವ ಪತ್ರವಿಟ್ಟು ಪೂಜೆ ಸಲ್ಲಿಸಿದ ಮಂದಿರದ ಪೂಜಾರಿ| 'ಆಲ್ ಕೇಸ್ ಶುಡ್ ಡಿಲೀಟ್ ಅಮ್ಮ' ಎಂದು ಬರೆದಿರು ಪತ್ರ|


ಯಾದಗಿರಿ(ನ.23): ತಿಹಾರ್ ಜೈಲಿನಿಂದ ಹೊರಬಂದ ಮೇಲೆ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಅವರು ಟೆಂಪಲ್ ರನ್ ಆರಂಭಿಸಿದ್ದಾರೆ. ಇದೀಗ ಡಿಕೆಶಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಳ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆಯುವ ಮೂಲಕ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ಗಡೇ ದುರ್ಗಾದೇವಿ ಅರ್ಚಕರಿಗೆ ಪತ್ರ ಕಳುಹಿಸಿಕೊಟ್ಟಿರುವ ಡಿ. ಕೆ. ಶಿವಕುಮಾರ್ ಅವರು, ಕೇಸ್ ನಿಂದ ಮುಕ್ತಿ ಸಿಗುವಂತೆ ದೇವಿಗೆ ಮೊರೆ ಹೋಗಿದ್ದಾರೆ. ಆಲ್ ಕೇಸ್ ಶುಡ್ ಡಿಲೀಟ್ ಎಂದು ತಮ್ಮ ಹಸ್ತಾಕ್ಷರದಲ್ಲೇ ಬರೆದಿರುವ  ಪತ್ರವನ್ನ ರವಾನಿಸಿದ್ದಾರೆ. 

ಪತ್ರವನ್ನ ಪಡೆದ ಮಂದಿರ ಪೂಜಾರಿ ಮಾದೇವಪ್ಪ ದೇವಿ ಮಡಿಲಲ್ಲಿ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಕಳೆದ ವರ್ಷ  ಜನರವರಿ ತಿಂಗಳಿಂದ ನಡೆದ ಜಾತ್ರೆಗೆ ಬರುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಡಿ.ಕೆ. ಶಿವಕುಮಾರ್ ಅವರು  ಬಂದಿರಲಿಲ್ಲ. ಹೀಗಾಗಿ ದೇವಿ ಮುನಿಸಿಕೊಂಡಿದ್ದಾಳೆ ಅನ್ನೋ ಮಾತು ಭಕ್ತ ವಲಯದಲ್ಲಿ ಕೇಳಿ ಬಂದಿತ್ತು. ಹೀಗಾಗಿ ಮಂದಿರ ಅರ್ಚಕ ಮಹಾದೇವಪ್ಪ ಪೂಜಾರಿ ಕೈಯಲ್ಲಿ ಪತ್ರ ಬರೆದು ಕೊಟ್ಟಿರುವ ಡಿಕೆಶಿ, ಮುಂದಿನ ವರ್ಷ ನಡೆಯುವ ಜಾತ್ರೆಗೆ ಬರುವುದಾಗಿ ತಿಳಿಸಿದ್ದಾರೆ. 

click me!