* ಅಚ್ಚರಿಗೆ ಕಾರಣವಾಗಿದ್ದ ಒಂಟಿ ಕಾಲಿನೊಂದಿಗೆ ಜನಿಸಿದ್ದ ಮಗು
* ಶಿಶುವಿನ ಬೆಳವಣಿಗೆಯಲ್ಲಿ ಕೊರತೆಯಿಂದ ಜನಿಸಿ ಬಳಿಕ ಮೃತಪಟ್ಟ ಶಿಶು
* ಒಂಟಿ ಕಾಲಿರುವ ಜನ್ಮ ನೀಡಿದ್ದ ಹುಸೇನಬಿ ನದಾಫ್
ಹುಬ್ಬಳ್ಳಿ(ಜೂ.21): ಕಿಮ್ಸ್ ಪ್ರಸೂತಿ ಕೇಂದ್ರದಲ್ಲಿ ಒಂಟಿ ಕಾಲಿನ ಜನಿಸಿ, ಕೆಲವೇ ಗಂಟೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ನಡೆದಿದ್ದು ಅಚ್ಚರಿಗೆ ಕಾರಣವಾಯಿತು.
ಹಳೇ ಹುಬ್ಬಳ್ಳಿ ಸದರಸೋಫಾ ನಿವಾಸಿ ಹುಸೇನಬಿ ನದಾಫ್ ಅವರು ಕಿಮ್ಸ್‌ಗೆ ದಾಖಲಾಗಿದ್ದರು. ನೋವು ಹೆಚ್ಚಾದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಶಿಶುವನ್ನು ಹೊರತೆಗೆದಿದ್ದಾರೆ.
ಶಿಶು ಕದ್ದು 15 ಲಕ್ಷಕ್ಕೆ ಮಾರಿದ್ದ ವೈದ್ಯೆ ವರ್ಷದ ಬಳಿಕ ಅರೆಸ್ಟ್ : ಸಿಕ್ಕಿ ಬಿದ್ದದ್ದು ಹೇಗೆ..?
ಮಗು ಒಂಟಿ ಕಾಲಿನದ್ದಾಗಿದ್ದು, ಮೂರು ಗಂಟೆಯಲ್ಲಿಯೇ ಮೃತಪಟ್ಟಿದೆ. ಶಿಶುವಿನ ಬೆಳವಣಿಗೆಯಲ್ಲಿ ಕೊರತೆಯಾಗಿದ್ದ ಕಾರಣಕ್ಕೆ ಈ ರೀತಿಯಲ್ಲಿ ಜನಿಸಿ ಬಳಿಕ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.