ಇಂದಿರಾ ಕ್ಯಾಂಟೀನ್ ಒಂದೊಂದೇ ಮುಚ್ಚುತ್ತಿವೆ; ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲವಾ?

By Kannadaprabha News  |  First Published Feb 24, 2023, 7:27 AM IST

ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂಲಸೌಲಭ್ಯ ಒದಗಿಸಲು ಆಗ್ರಹಿಸಿ ನಗರ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಗುರುವಾರ ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ ಎದುರು ಪ್ರತಿಭಟನೆ ನಡೆಸಿದರು.


ಶಿವಮೊಗ್ಗ (ಫೆ.24) : ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೂಲಸೌಲಭ್ಯ ಒದಗಿಸಲು ಆಗ್ರಹಿಸಿ ನಗರ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್‌ ಮುಖಂಡರು ಗುರುವಾರ ಶಿವಮೊಗ್ಗ ಖಾಸಗಿ ಬಸ್‌ ನಿಲ್ದಾಣ ಹಿಂಭಾಗದಲ್ಲಿರುವ ಇಂದಿರಾ ಕ್ಯಾಂಟೀನ್‌ ಎದುರು ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರ(BJP Government ) ಇಂದಿರಾ ಕ್ಯಾಂಟೀನ್‌(Indira canteen)ಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದೆ. ರಾಜ್ಯದಲ್ಲಿ ಹಲವು ಇಂದಿರಾ ಕ್ಯಾಂಟೀನುಗಳು ಈಗಾ​ಗಲೇ ಮುಚ್ಚಿವೆ. ಇದಕ್ಕೆ ಬಹುಮುಖ್ಯ ಕಾರಣ ಅಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಇರುವುದು, ಶುಚಿತ್ವ ಕಾಪಾಡದೇ ಇರುವುದು, ಗುಣಮಟ್ಟದ ಆಹಾರ ನೀಡದಿರುವುದೇ ಆಗಿದೆ. ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಈ ಕ್ಯಾಂಟೀನುಗಳನ್ನು ಮುಚ್ಚುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

Tap to resize

Latest Videos

ಕಾಂಗ್ರೆಸ್‌ ತಂದ ಯೋಜನೆ ಬಿಜೆಪಿ ಬಂದ್‌ ಮಾಡುತ್ತಿದೆ: ಯು.ಟಿ.ಖಾದರ್‌

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಕನಸಿನ ಯೋಜನೆ ಇದು. ಹಸಿವಿನಿಂದ ಯಾರೂ ನರಳಬಾರದು. ಹಸಿವುಮುಕ್ತ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನುಗಳನ್ನು ತೆರೆದು ಕೇವಲ .5ಕ್ಕೆ ತಿಂಡಿ, .10ಕ್ಕೆ ಊಟ ದೊರೆಯುತ್ತಿತ್ತು. ಇದೊಂದು ದೂರದೃಷ್ಟಿಯೋಜನೆಯಾಗಿತ್ತು. ಬಡವರಿಗೆ ವರದಾನವಾಗಿತ್ತು. ಆದರೆ ರಾಜ್ಯ ಸರ್ಕಾರ ಇಂತಹ ಯೋಜನೆಯನ್ನು ಮುಚ್ಚಿಬಿಡುವ ಹುನ್ನಾರ ನಡೆಸುತ್ತಿದೆ. ಬಡವರ ಅನ್ನವನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ತಕ್ಷಣವೇ ನಗರ ಪಾಲಿಕೆ ಶಿವಮೊಗ್ಗ ನಗರದಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನುಗಳಿಗೆ ಮೂಲಸೌಕರ್ಯ ಒದಗಿಸಬೇಕು. ಕ್ಯಾಂಟೀನುಗಳನ್ನು ಶುಚಿಯಾಗಿಟ್ಟುಕೊಂಡು ಗುಣಮಟ್ಟದ ಆಹಾರವನ್ನು ನಾಗರಿಕರಿಗೆ ನೀಡಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ಚಿಕ್ಕಮಗಳೂರು: ಬಾಗಿಲು ಮುಚ್ಚಿದ ಇಂದಿರಾ ಕ್ಯಾಂಟಿನ್‌: ಸಿಬ್ಬಂದಿಗೆ 6 ತಿಂಗಳಿಂದ ಸಂಬಳ ಇಲ್ಲ!

ಈ ಸಂದರ್ಭ ನಗರ ದಕ್ಷಿಣ ಬ್ಲಾಕ್‌ ಸಮಿತಿ ಅಧ್ಯಕ್ಷ ಕಲೀಂ ಪಾಷಾ, ಹಾಗೂ ಮುಖಂಡರಾದ ಕೆ.ಬಿ.ಪ್ರಸನ್ನಕುಮಾರ್‌, ಎನ್‌.ರಮೇಶ್‌, ಟಿ.ಕೃಷ್ಣಪ್ಪ, ಯೋಗೀಶ್‌, ಕಾಶಿ ವಿಶ್ವನಾಥ್‌, ಸುವರ್ಣಾ ನಾಗರಾಜ್‌, ಎಸ್‌.ಕೆ. ಮರಿಯಪ್ಪ, ವಿಜಯ್‌, ಮಧುಸೂದನ್‌, ರವಿ, ವೈ.ಎಚ್‌.ನಾಗರಾಜ್‌ ಎಸ್‌.ಪಿ. ಶೇಷಾದ್ರಿ, ಸ್ಟೆಲ್ಲಾ ಮಾರ್ಟಿನ್‌, ಅರ್ಚನಾ, ಗ್ಲ್ಯಾಡಿ, ದೀಪಕ್‌ ಸಿಂಗ್‌, ರಾಜಶೇಖರ್‌ ಹಲವರಿದ್ದರು.

click me!