'ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತು ದುಪ್ಪಟ್ಟು ಹೆಚ್ಚಳ'

Kannadaprabha News   | Asianet News
Published : Dec 14, 2020, 11:27 AM IST
'ಮೋದಿ ಪ್ರಧಾನಿಯಾದ ಬಳಿಕ ಗೋಮಾಂಸ ರಫ್ತು ದುಪ್ಪಟ್ಟು ಹೆಚ್ಚಳ'

ಸಾರಾಂಶ

ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಗೋಮಾಂಸ ರಫ್ತು ಪ್ರಮಾಣ ದುಪ್ಪಟ್ಟಾಗಿದೆ ಎನ್ನಲಾಗಿದೆ. 

ಗುಬ್ಬಿ (ಡಿ.14):  ಗೋಮಾಂಸ ರಫ್ತು ಮಾಡುವ ಕಂಪೆನಿಗಳು ಬಿಜೆಪಿ ಮುಖಂಡರ ಒಡೆತನದಲ್ಲಿವೆ. ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದಿಂದ ಗೋಮಾಂಸ ರಫ್ತು ದ್ವಿಗುಣಗೊಂಡಿರುವುದು ಅಂಕಿಅಂಶದಲ್ಲಿವೆ ಎಂದು ಮಾಜಿ ಶಾಸಕ ಕೆ.ಎನ್‌.ರಾಜಣ್ಣ ಹೇಳಿದರು.

ತಾಲೂಕಿನ ಸುರಿಗೇನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಗೆ ಮುನ್ನ ಮಾತನಾಡಿದ ಅವರು, ಗೋಹತ್ಯೆ ನಿಷೇಧ ಕಾನೂನು ತರುವ ಮುನ್ನ ಅದರ ಆಗುಹೋಗು ಚರ್ಚಿಸಬೇಕಿತ್ತು. ಕೇವಲ ಕಾಪೋರ್‍ರೆಟ್‌ ಸಂಸ್ಥೆಗಳ ಅಧೀನದಲ್ಲಿ ಕೇಂದ್ರ ಸರ್ಕಾರ ನಡೆದಿದೆ. ಎಲ್ಲವೂ ಬಂಡವಾಳಶಾಹಿಗಳ ಕಂಪೆನಿಯದ್ದಾಗಿದೆ. ನಾಲ್ಕನೇ ಅಂಗವಾದ ಮಾಧ್ಯಮ ಸಂಸ್ಥೆಗಳು ಕಾಪೋರ್‍ರೆಟ್‌ ಸಂಸ್ಥೆಗಳು ನಡೆಸಿರುವುದು ಮತ್ತೊಂದು ವಿಪರ್ಯಾಸ ಎನಿಸಿದೆ ಎಂದರು.

ದೇಶದೆಲ್ಲೆಡೆ ಗೋಹತ್ಯೆ ನಿಷೇಧ ಕುರಿತು ಒಂದೇ ಕಾನೂನು ಜಾರಿ ಮಾಡಲಾಗದೆ ಆಯ್ದ ಕೆಲ ರಾಜ್ಯಗಳಲ್ಲಿ ಕಾಯಿದೆ ಜಾರಿಯ ಹಿಂದೆ ಕೂಡಾ ಬಂಡವಾಳಶಾಹಿ ಕಂಪೆನಿಗಳಿವೆ. ಒಟ್ಟಾರೆ ಅನಿಯಮಿತ ಎಮೆರ್ಜೆನ್ಸಿ ದೇಶದಲ್ಲಿ ಕಣ್ಣಿಗೆ ಕಾಣದಂತೆ ಜಾರಿಯಾಗುತ್ತಿದೆ. ವಿರೋಧ ಪಕ್ಷ, ಚುನಾಯಿತ ಪ್ರತಿನಿ​ಗಳ ಚರ್ಚೆಗೆ ಅವಕಾಶವಿಲ್ಲ. ಯಾರೊಬ್ಬರೂ ಇವರ ಆಡಳಿತ ಬಗ್ಗೆ ಮಾತನಾಡುವಂತಿಲ್ಲ ಎಂದು ಕಿಡಿಕಾರಿದರು.

'ಮೋದಿ ಸರ್ಕಾರ ಬಂದ್ಮೇಲೆ ದನದ ಮಾಂಸ ಹೆಚ್ಚಳ, ಬಿಜೆಪಿ ಬೆಂಬಲಿಗರಿಂದಲೇ ರಫ್ತು'

ಮೋದಿ ಅವರ ಸುಳ್ಳು ಆಶ್ವಾಸನೆ ಪಟ್ಟಿಬೆಳೆದಿದೆ. 2 ಕೋಟಿ ಉದ್ಯೋಗ ಸೃಷ್ಟಿಮತ್ತು ಕಪ್ಪುಹಣ ತಂದು ಬಡವರಿಗೆ 15 ಲಕ್ಷ ಹಂಚುವ ಸುಳ್ಳು ಭರವಸೆಗೆ ಜನ ಮರಳಾಗಿದ್ದರು. ಅವರ ನಿಜವಾದ ಬಣ್ಣ ಈಗ ಜನರಿಗೆ ತಿಳಿಯುತ್ತಿದೆ. ಇಂತಹ ಪಕ್ಷಕ್ಕೆ ನಾನು ಹೋಗುವುದಾಗಿ ವದಂತಿ ಹಬ್ಬಿಸಲಾಗಿತ್ತು. ಲೋಕಸಭಾ ಚುನಾವಣೆ ಸಂದರ್ಭ ಕೆಲ ಭಿನ್ನ ವರ್ತನೆ ತೋರಿದ್ದೆ. ಆದರೆ ಕಾಂಗ್ರೆಸ್‌ ಬಿಡುವ ಮಾತು ಆಡಿರಲಿಲ್ಲ ಎಂದರು.

PREV
click me!

Recommended Stories

ಕೊಪ್ಪಳದ ಸರ್ಕಾರಿ ಶಾಲೆಗಳ ಬಿಸಿಯೂಟದಲ್ಲಿ ಹುಳು ಪತ್ತೆ; ಸಚಿವರೇನ್ ನಿದ್ದೆ ಮಾಡ್ತಿದ್ದಾರಾ?
ಬನ್ನೇರುಘಟ್ಟದಲ್ಲಿ ಅಪರೂಪದ ಅತಿಥಿ, ಆಫ್ರಿಕಾದಿಂದ ಆಗಮಿಸಿದ ಕ್ಯಾಪುಚಿನ್ ಕೋತಿಗಳು!