ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದ ಮುಖಂಡರು| ಗ್ರಾಪಂ ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದ ಯಮನೂರಪ್ಪ ವಾಲೇಕಾರ್-ಶಾಮೀದಸಾಬ| ಕೇವಲ ಭರವಸೆ ನೀಡುತ್ತಾ ಬಂದ ಬಿಜೆಪಿ ಮುಖಂಡರು|
ಕನಕಗಿರಿ(ಡಿ.14): ತಾಲೂಕಿನ ಹುಲಿಹೈದರ್ ಗ್ರಾಪಂ ವ್ಯಾಪ್ತಿಯ ಕಟ್ಟಾ ಬಿಜೆಪಿಯ ಇಬ್ಬರು ಮುಖಂಡರಿಗೆ ಟಿಕೆಟ್ ತಪ್ಪಿದ್ದಕ್ಕೆ ಶುಕ್ರವಾರ ರಾತ್ರಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಹುಲಿಹೈದರ್ ಗ್ರಾಪಂ ವ್ಯಾಪ್ತಿಯ ಹನುಮನಾಳ ಗ್ರಾಮದ ಯಮನೂರಪ್ಪ ವಾಲೇಕಾರ್ ಹಾಗೂ ಶಾಮೀದಸಾಬ ಈ ಇಬ್ಬರು ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದರು. ಗ್ರಾಪಂ ಚುನಾವಣೆಗೆ ಎಸ್‌ಟಿಗೆ ಮೀಸಲಾಗಿರುವ ಸ್ಥಾನಕ್ಕೆ ಬಿಜೆಪಿಯ ಯಮನೂರಪ್ಪ ವಾಲೇಕಾರ ಹಾಗೂ ಸಾಮಾನ್ಯ ಸ್ಥಾನಕ್ಕೆ ಶಾಮೀದಸಾಬ ಮುಂಚೂಣಿಯಲ್ಲಿದ್ದರು. ಆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯಮನೂರಪ್ಪಗೆ ಪಕ್ಷದಿಂದ ಬೆಂಬಲ ನೀಡುವುದಾಗಿ ಕೆಲ ಮುಖಂಡರು ಹಲವು ತಿಂಗಳಗಳಿಂದ ಭರವಸೆ ನೀಡುತ್ತಾ ಬಂದಿದ್ದರು.
ಪತ್ನಿ, ಮೂವರು ಮಕ್ಕಳೊಂದಿಗೆ ಬೈಕ್‌ನಲ್ಲಿ 400 ಕಿ.ಮೀ. ಸಂಚಾರ
ಸಧ್ಯ ಚುನಾವಣೆ ಬಂದಿರುವುದರಿಂದ ಸ್ಪರ್ಧೆಗಿಳಿಯಲು ಮುಂದಾಗಿದ್ದ ಯಮನೂರಪ್ಪಗೆ ಬಿಜೆಪಿ ಬೆಂಬಲ ನೀಡಲು ನಿರಾಕರಿಸಿದೆ. ಈ ಹಿನ್ನೆಲೆ ಯಮನೂರಪ್ಪ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.