ಬೆಂಗಳೂರು & ಬೀದರ್ ನಡುವೆ 4 ವಿಶೇಷ ರೈಲುಗಳು; ಯಾವೆಲ್ಲಾ ನಿಲ್ದಾಣಗಳಲ್ಲಿ ನಿಲುಗಡೆ?

Published : Oct 11, 2026, 07:37 AM IST
Indian Railways

ಸಾರಾಂಶ

ದಸರಾ ಹಬ್ಬದ ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ವಿಶೇಷ ರೈಲುಗಳು ಸಂಚರಿಸಲಿವೆ. ಈ ರೈಲುಗಳು ಅಕ್ಟೋಬರ್ 10, 16 ಮತ್ತು 17 ರಂದು ಕಾರ್ಯಾಚರಣೆ ನಡೆಸಲಿದ್ದು, ವಿವಿಧ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿವೆ

ಬೆಂಗಳೂರು: ಪ್ರಯಾಣಿಕರ ಬೇಡಿಕೆ ಮತ್ತು ಹೆಚ್ಚುವರಿ ದಟ್ಟಣೆ ನಿಭಾಯಿಸುವ ಸಲುವಾಗಿ ರೈಲ್ವೆಯು ಸೋಲಾಪುರ ವಿಭಾಗದ ನಿಲ್ದಾಣಗಳ ಮೂಲಕ ಬೆಂಗಳೂರು ಕಾಂಟ್ ಮತ್ತು ಬೀದರ್ ನಡುವೆ 4 ದಸರಾ ವಿಶೇಷ ರೈಲು ಸಂಚಾರ ನಡೆಸಲಿದೆ ಎಂದು ಸೇಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಸಂಖ್ಯೆ 06589

ರೈಲು ಸಂಖ್ಯೆ 06589 ಬೆಂಗಳೂರು ಕಾಂಟ್-ಬೀದರ್ ವಿಶೇಷ ರೈಲು ಬೆಂಗಳೂರು ಕಾಂಟ್‌ನಿಂದ ಅ.16ರಂದು ರಾತ್ರಿ 11ಕ್ಕೆ ಹೊರಟು, ಮರುದಿನ ಮಧ್ಯಾಹ್ನ 02:15ಕ್ಕೆ ಬೀದರ್ ತಲುಪಲಿದೆ.

ರೈಲು ಸಂಖ್ಯೆ 06590

ರೈಲು ಸಂಖ್ಯೆ 06590 ಬೀದರ್-ಬೆಂಗಳೂರು ಕಾಂಟ್ ವಿಶೇಷ ರೈಲು ಬೀದರ್‌ನಿಂದ ಅ.10ರಂದು ಹಾಗೂ ಅ.17ರಂದು ಸಂಜೆ 04ಕ್ಕೆ ಹೊರಟು, ಮರುದಿನ ಬೆಳಗ್ಗೆ 09:45ಕ್ಕೆ ಬೆಂಗಳೂರು ಕಾಂಟ್ ತಲುಪಲಿದೆ.

ನಿಲುಗಡೆಗಳು: ಹುಮ್ನಾಬಾದ್, ಕಲಬುರಗಿ, ಶಹಾಬಾದ್, ವಾಡಿ, ಯಾದಗಿರಿ, ಕೃಷ್ಣಾ, ರಾಯಚೂರು, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್, ಅನಂತಪುರ, ಧರ್ಮಾವರಂ, ಹಿಂದೂಪುರ ಮತ್ತು ಯಲಹಂಕಗಳಲ್ಲಿ ರೈಲು ನಿಲುಗಡೆಯಾಗಲಿವೆ.

ರೈಲಿನ ಸಂಯೋಜನೆ

1 ಎಸಿ-II ಟೈರ್, 3 ಎಸಿ-III ಟೈರ್, 10 ಸ್ಲೀಪರ್‌ ಕ್ಲಾಸ್, 3 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳ ಸಹಿತ ಒಟ್ಟು 19 ಐಸಿಎಫ್ ಕೋಚ್‌ಗಳು ಇರಲಿವೆ. ವಿಶೇಷ ದರದಲ್ಲಿ ಸಂಚರಿಸುವ ಈ ವಿಶೇಷ ರೈಲುಗಳಿಗೆ ಮೀಸಲಾತಿಯನ್ನು ಎಲ್ಲ ಗಣಕೀಕೃತ ಮೀಸಲಾತಿ ಕೇಂದ್ರಗಳಲ್ಲಿ ಮತ್ತು www.irctc.co.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಮೀಸಲಾತಿ ರಹಿತ ಕೋಚ್‌ಗಳ ಬುಕಿಂಗನ್ನು ನಿಲ್ದಾಣಗಳ ಬುಕಿಂಗ್ ಕೌಂಟರ್‌ಗಳು ಮತ್ತು ''''RailOne'''' ಆ್ಯಪ್ ಮೂಲಕವೂ ಮಾಡಬಹುದು.

ಈ ವಿಶೇಷ ರೈಲುಗಳು ನಿಲುಗಡೆಗೊಳ್ಳುವ ಸ್ಥಳಗಳು ಮತ್ತು ಸಮಯದ ವಿವರಗಳಿಗಾಗಿ www.enquiry.indianrail.gov.in ಜಾಲತಾಣಕ್ಕೆ ಭೇಟಿ ನೀಡಬಹುದು ಅಥವಾ RailOne ಆ್ಯಪ್, NTES ಆ್ಯಪನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Read more Articles on
click me!

Recommended Stories

ಕೆ-ಸೆಟ್ ಪರೀಕ್ಷೆ ಇಂದು: ಯಾವ ದಾಖಲೆ ಕಡ್ಡಾಯ? ಯಾವ ನಿಯಮ ಪಾಲಿಸಬೇಕು? ಈ 5 ವಿಷಯ ಮರೆಯಬೇಡಿ!
ಬೇಡ್ತಿ–ಅಘನಾಶಿನಿ ಯೋಜನೆಗೆ ಭಾರೀ ವಿರೋಧ; ಬೆಂಗಳೂರಲ್ಲಿ ಬೃಹತ್ ಧರಣಿ, ಅಂಗೀಕಾರವಾದ 11 ನಿರ್ಣಯಗಳೇನು?