'ಕೇಂದ್ರ ಆಕ್ಸಿಜನ್ ಕೊಡದೆ ಇದ್ದರೂ ಕೇಳುವ ಶಕ್ತಿಯಿಲ್ಲದ ಮೂಕಪ್ರೇಕ್ಷಕರು'

By Suvarna News  |  First Published May 6, 2021, 6:14 PM IST

ಕೇಂದ್ರದಿಂದ ಆಕ್ಸಿಜನ್ ಬರುತ್ತಿಲ್ಲ/ ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ/ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪ/ ಕರ್ನಾಟಕಕ್ಕೆ 1471 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯ ಇದೆ. 


ಬೆಂಗಳೂರು(ಮೇ. 06) ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಆಕ್ಸಿಜನ್ ಗೆ ಹಾಹಾಕಾರ ಎದ್ದಿರುವ ಆತಂಕ  ವಿವಿಧ ಜಿಲ್ಲೆಯ ಆಸ್ಪತ್ರೆಗಳಿಂದ ವರದಿಯಾಗುತ್ತಿದೆ. ಚಾಮರಾಜನಗರ ದುರಂತದ ನೋವು ಸಹ ಮಾಸಿಲ್ಲ.

ಇದು ನಿಜಕ್ಕೂ ಆಘಾತಕಾರಿ ಸುದ್ದಿ, ಕರ್ನಾಟಕ ಹೈಕೋರ್ಟ್ ರಾಜ್ಯಕ್ಕೆ 1200  ಮೆಟ್ರಿಕ್ ಟನ್ ಆಕ್ಸಿಜನ್ ನೀಡಬೇಕು ಎಂದು ಕೇಂದ್ರಕ್ಕೆ ನೀಡಿದ್ದ ಸೂಚನೆಯನ್ನು ಪ್ರಶ್ನೆ ಮಾಡಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಆಘಾತ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಬಹರೇನ್ ನಿಂದ  ಬಂದಿಳಿದ ಆಕ್ಸಿಜನ್ ದಾಸ್ತಾನು

ಕರ್ನಾಟಕಕ್ಕೆ 1471 ಮೆಟ್ರಿಕ್ ಟನ್ ಆಕ್ಸಿಜನ್ ಅಗತ್ಯ ಇದೆ. ಆದರೆ ಕೇಂದ್ರ ಸರ್ಕಾರ ನೀಡಲು ಮುಂದಾಗಿರುವುದು 865 ಮೆಟ್ರಿಕ್ ಟನ್.  ಜನ ಆಕ್ಸಿಜನ್ ಕೊರತೆಯಿಂದ ಸಮಸ್ಯೆ ಅನುಭವಿಸುತ್ತಿದ್ದರೆ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಸಂಸದರು ಮೂಕ ಪ್ರೇಕ್ಷಕರಾಗಿ ಕುಳಿತುಕೊಂಡಿದ್ದಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಆಸ್ಪತ್ರೆಗಳು ಜನರನ್ನು ಸುಲಿಗೆ ಮಾಡುತ್ತಿದ್ದು ಸರ್ಕಾರ ಕಣ್ಣು ಮುಚ್ಚಿ  ಕುಳಿತುಕೊಂಡಿದೆ ಎಂದು ಆರೋಪಿಸಿದ್ದಾರೆ.

 

 

Shocked to see the Central Govt moving the SC challenging the Karnataka HC order to supply 1200 MT of Oxygen to the state

Projected demand is 1471 MT but central allocation is only 865 MT

Will CM & BJP MPs remain mute spectators when people are dying of Oxygen shortage?

— DK Shivakumar (@DKShivakumar)
click me!