ಸೇನೆಗೆ ಸೇರುವವರಿಗೆ ಸುವರ್ಣಾವಕಾಶ, ನೇಮಕಾತಿ ರ‍್ಯಾಲಿ​ ಯಾವಾಗ, ಎಲ್ಲಿ..?

By Kannadaprabha News  |  First Published Mar 3, 2020, 11:01 AM IST

ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏ.4 ರಿಂದ 14ರವರೆಗೆ ಸೇನಾ ನೇಮಕಾತಿ ರ‍್ಯಾಲಿ​ಯನ್ನು ಹಮ್ಮಿಕೊಳ್ಳಲಾಗಿದೆ. ಸೇನೆಯಲ್ಲಿ ಮೊದಲ ತಿಂಗಳಲ್ಲೇ 38 ಸಾವಿರ ರು. ಗಳ ವೇತನದ ಜೊತೆಗೆ ಹಲವು ರಿಯಾಯತಿ ಸೌಲಭ್ಯಗಳನ್ನು ನೀಡಲಾಗುತ್ತದೆ.


ಉಡು​ಪಿ(ಮಾ.03): ಸೇನೆಗೆ ಸೇರಿ ದೇಶ ಸೇವೆ ಮಾಡುವುದು ಗೌರವದ ವಿಚಾರ. ಉಡುಪಿ ಜಿಲ್ಲೆಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಏ.4 ರಿಂದ 14ರವರೆಗೆ ಸೇನಾ ನೇಮಕಾತಿ ರ‍್ಯಾಲಿ​ಯನ್ನು ಹಮ್ಮಿಕೊಳ್ಳಲಾಗಿದ್ದು, ಈ ರ‍್ಯಾಲಿ​ಯಲ್ಲಿ ಜಿಲ್ಲೆಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಪರ ಜಿಲ್ಲಾಧಿಕಾರಿ, ನಿವೃತ್ತ ಸೇನಾಧಿಕಾರಿ ಸದಾಶಿವ ಪ್ರಭು ಹೇಳಿದ್ದಾರೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ‍್ಯಾಲಿ​ಯ ಪೂರ್ವ​ಭಾವಿ ಸಭೆ​ಯಲ್ಲಿ ಅವರು ರಾರ‍ಯಲಿಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ.

Latest Videos

undefined

ಪುತ್ತೂರಲ್ಲಿ ಒಂದೂ​ವರೆ ತಾಸು ನಿರಂತರ ಮಳೆ

ಉಡುಪಿಯಲ್ಲಿ ಉಡುಪಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ಉಡುಪಿ, ದ.ಕನ್ನಡ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ತರುಣರಿಗೆ ಸೇನಾ ನೇಮಕಾತಿ ರ‍್ಯಾಲಿ​ ನಡೆಯಲಿದೆ.

ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾ.20ರವರೆಗೆ ಅವಕಾಶವಿದ್ದು, ಇದುವರೆಗೂ 15 ಸಾವಿರ ಯುವಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ ಇದರಲ್ಲಿ ಹೊರ ಜಿಲ್ಲಾ ಅಭ್ಯರ್ಥಿಗಳ ಸಂಖ್ಯೆಯೇ ಹೆಚ್ಚಿದ್ದು, ಉಡುಪಿ ಜಿಲ್ಲೆಯ ಯುವಕರ ಭಾಗವಹಿಸುವಿಕೆ ಕಡಿಮೆ ಇದೆ. ಆದ್ದರಿಂದ ಜಿಲ್ಲೆಯ ಜನರು ಹೆಚ್ಚಿನ ಆಸಕ್ತಿ ತೋರಿಸಬೇಕು. ಸೇನೆಯಲ್ಲಿ ಮೊದಲ ತಿಂಗಳಲ್ಲೇ 38 ಸಾವಿರ ರು. ಗಳ ವೇತನದ ಜೊತೆಗೆ ಹಲವು ರಿಯಾಯತಿ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದಿದ್ದಾರೆ.

ಕಲ್ಲಂಗಡಿ ಹಣ್ಣಲ್ಲಿ ಮೋದಿ, ಅಭಿನಂದನ್, ಹೂಗಳಲ್ಲಿ ಮೂಡಿದ ಅಕ್ಟೋಪಸ್

ಉಡುಪಿಯ ಸೇನಾ ರಾರ‍ಯಲಿ​ಯಲ್ಲಿ ಕನಿಷ್ಠ 30 ಸಾವಿರ ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ. 17-23 ವರ್ಷ ಒಳಗಿನ ಅವಿವಾಹಿತ ಯುವಕರಿಗೆ ಸೋಲ್ಜರ್‌ ಜನರಲ್‌ ಡ್ಯೂಟಿ (ಆಲ್‌ ಆರ್ಮ್ಸ), ಸೋಲ್ಜರ್‌ ಟೆಕ್ನಿಕಲ್, ಸೋಲ್ಜರ್‌ ಟೆಕ್‌ ನರ್ಸಿಂಗ್‌ ಅಸಿಸ್ಟೆಂಟ್‌/ ನರ್ಸಿಂಗ್‌ ಸಹಾಯಕ ಪಶುವೈದ್ಯ, ಸೋಲ್ಜರ್‌ ಕ್ಲರ್ಕ್/ ಸ್ಟೋರ್‌ ಕೀಪರ್‌ ಟೆಕ್ನಿಕಲ್‌ (ಆಲ್‌ ಆರ್ಮ್ಸ), 10 ನೇ ತರಗತಿ ಪಾಸ್‌ ಆದವರಿಗೆ ಸೋಲ್ಜರ್‌ ಟ್ರೇಡ್ಸ್ಮನ್‌ (ಆಲ್‌ ಆರ್ಮ್ಸ), ಮತ್ತು 8 ನೇ ತರಗತಿ ಪಾಸ್‌ ಆದವರಿಗೆ ಸೋಲ್ಜರ್‌ ಟೇಡ್ನ್ಮನ್‌ (ಆಲ್‌ ಆರ್ಮ್ಸ) ಹುದ್ದೆಗಳು ಲಭ್ಯ ಇವೆ.

http://www.joinindianarmy.nic.in ಹೆಸರು ನೋಂದಾಯಿಸಬಹುದಾಗಿದ್ದು. ನೋಂದಾಯಿಸಿದ ಅಭ್ಯರ್ಥಿಗಳಿಗೆ ಮಾತ್ರ ರಾರ‍ಯಲಿ​ಯಲ್ಲಿ ಭಾಗವಹಿಸಲು ಅವಕಾಶ ಇದೆ. ರ‍್ಯಾಲಿ​​ಯಲ್ಲಿ ಭಾಗವಹಿಸಲು ಅಡ್ಮಿಟ್‌ ಕಾರ್ಡ್‌ ಕಡ್ಡಾಯವಾಗಿದ್ದು, ನೊಂದಾಯಿಸಿಕೊಂಡವರು ಮಾ.24 ರಂದು ಕಾರ್ಡ್‌ ಡೌನ್‌​ಲೋಡ್‌ ಮಾಡಿಕೊಳ್ಳಬಹುದು ಎಂದು ಸೇನಾ ನೇಮಕಾತಿಯ ನಿರ್ದೇಶಕ ಕರ್ನಲ್‌ ಫಿರ್ಧೋಶ್‌ ಪಿ. ದುಬಾಶ್‌ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ‘ಫ್ರೀ ಕಾಶ್ಮೀರ’ ಗೋಡೆ ಬರಹ!

ಎಎಸ್ಪಿ ಕುಮಾರ್‌ಚಂದ್ರ, ಮಂಗಳೂರಿನ ಸೈನಿಕ ಕಲ್ಯಾಣ ಇಲಾಖೆಯ ಬಿ.ಆರ್‌. ಶೆಟ್ಟಿ, ಕ್ರೀಡಾ ಮತ್ತು ಯುವ ಜನ ಸಬಲೀಕರಣ ಇಲಾಖೆಯ ಸಹ ನಿರ್ದೇಶಕ ಡಾ. ರೋಶನ್‌ ಕುಮಾರ್‌ ಶೆಟ್ಟಿ, ನಗರ ಸಭೆ ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌, ಜಿಲ್ಲಾ ಸರ್ಜನ್‌ ಡಾ. ಮಧುಸೂಧನ್‌ ನಾಯಕ್‌, ಸೇನಾ ಆರ್‌ಎಂಒ ಕರ್ನಲ್‌ ಮನೀಶ್‌ ಇದ್ದ​ರು.

click me!