ಗದಗನಲ್ಲಿ ಸೆ.28ರಿಂದ ಅಗ್ನಿವೀರ ಉಚಿತ ಸೇನಾ ಭರ್ತಿ ತರಬೇತಿ: ಒಂದು ತಿಂಗಳು ಊಟ, ವಸತಿ, ಸಮವಸ್ತ್ರ ಫ್ರೀ!

Sathish Kumar KH   | Kannada Prabha
Published : Sep 20, 2026, 08:54 AM IST
Gadag free agniveer recruitment training

ಸಾರಾಂಶ

ಗದಗ ಜಿಲ್ಲೆಯ ಇಟಗಿ ಗ್ರಾಮದಲ್ಲಿ ವಿಜಯಮಾರ್ಗ ಟ್ರಸ್ಟ್‌ ಮತ್ತು ಅನ್ನದಾನೇಶ್ವರ ಮಠದ ಸಹಯೋಗದಲ್ಲಿ ಸೆಪ್ಟೆಂಬರ್ 28ರಿಂದ ಒಂದು ತಿಂಗಳ ಕಾಲ ಉಚಿತ ಅಗ್ನೀವೀರ ಸೇನಾ ಭರ್ತಿ ತರಬೇತಿ ಆಯೋಜಿಸಲಾಗಿದೆ. ಸೇನೆ ಸೇರಬಯಸುವ ಯುವಕರಿಗೆ ಊಟ, ವಸತಿ ಮತ್ತು ಸಮವಸ್ತ್ರದೊಂದಿಗೆ ದೈಹಿಕ ಹಾಗೂ ಮಾನಸಿಕ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಗದಗ (ಸೆ.20): ವಿಜಯಮಾರ್ಗ ಟ್ರಸ್ಟ್‌ ಇಟಗಿ ಮತ್ತು ಶ್ರೀ ಅನ್ನದಾನೇಶ್ವರ ಸಂಸ್ಥಾನಮಠ ಹಾಲಕೇರಿ-ಇಟಗಿ ಸಹಯೋಗದಲ್ಲಿ ತಾಲೂಕಿನ ಇಟಗಿ ಗ್ರಾಮದ ಅನ್ನದಾನೇಶ್ವರ ಮಠದ ಆವರಣದಲ್ಲಿ ಸೆ.28ರಿಂದ 1 ತಿಂಗಳವರೆಗೆ ಅಗ್ನೀವೀರ ಸೇನಾ ಭರ್ತಿ ತರಬೇತಿ ನೀಡಲಾಗುವುದು ಎಂದು ವಿಜಯಮಾರ್ಗ ಟ್ರಸ್ಟ್‌ ಅಧ್ಯಕ್ಷ ಮಲ್ಲಸರ್ಜಾ ದೇಸಾಯಿ ಹೇಳಿದರು.

ಪಟ್ಟಣದ ಮಾಜಿ ಸೈನಿಕರ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ ಸಭೆಯಲ್ಲಿ ಮಾತನಾಡಿದರು.

ಒಂದು ತಿಂಗಳ ಕಾಲ ತರಬೇತಿ

ದೇಶ ರಕ್ಷಣೆಯಲ್ಲಿ ಯುವ ಶಕ್ತಿ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಸೇನೆ ಸೇರುವ ಮೂಲಕ ದೇಶ ಸೇವೆ ಮಾಡಬಯಸುವ ಯುವಕಕರಿಗೆ ಸೇನಾ ಭರ್ತಿಗೆ ಬೇಕಾದ ದೈಹಿಕ, ಮಾನಸಿಕ ತರಬೇತಿಯನ್ನು ನೀಡುವ ನಿಟ್ಟಿನಲ್ಲಿ ವಿಜಯಮಾರ್ಗ ಟ್ರಸ್ಟ್‌ ವತಿಯಿಂದ ಕಳೆದ ಮೂರುವ ವರ್ಷದಿಂದ ಅರ್ಹ ಯುವಕರಿಗೆ ಉಚಿತವಾಗಿ ತರಬೇತಿ ನೀಡುತ್ತಾ ಬರಲಾಗಿದೆ. ಅದರಂತೆ ಈ ವರ್ಷವೂ ಉಚಿತ ಸೇನಾ ತರಬೇತಿ ನೀಡಲಾಗುವದು. ನಮ್ಮಲ್ಲಿ ತರಬೇತಿ ಪಡೆದ ಅನೇಕ ಯುವಕರು ಈಗಾಗಲೇ ಸೇನೆಗೆ ಸೇರಿದ್ದಾರೆ. ಪೊಲೀಸ್ ಹುದ್ದೆಗೂ ಅರ್ಹತೆ ಪಡೆದಿದ್ದಾರೆ. ಒಂದು ತಿಂಗಳಕಾಲ ತರಬೇತಿಗೆ ಬೇಕಾದ ಸಾಮಗ್ರಿ ವ್ಯವಸ್ಥೆ, ಊಟ, ವಸತಿ ಹಾಗೂ ಸಮವಸ್ತ್ರಗಳನ್ನು ಉಚಿತವಾಗಿ ವ್ಯವಸ್ಥೆ ಮಾಡಲಾಗುವುದು. ಸೇನಾ ಭರ್ತಿ ತರಬೇತಿದಾರ ರವಿ ಶೆಟ್ಟಿ ತಂಡದಿಂದ ತರಬೇತಿ ನೀಡಲಾಗುವುದು. ಯುವಕರು ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾಜಿ ಸೈನಿಕರ ಸಂಘದ ತಾಲೂಕ ಅಧ್ಯಕ್ಷ ಪ್ರಭುಗೌಡ ಪಾಟೀಲ ಮಾತನಾಡಿದರು. ಈ ವೇಳೆ ಮಾಜಿ ಸೈನಿಕರಾದ ಚನ್ನಪ್ಪ ನೆಲಗುಡ್ಡ, ವೀರಯ್ಯ ಹಿರೇಮಠ, ವೀರುಪಾಕ್ಷಪ್ಪ ಬಡಿಗೇರ ಸೇರಿದಂತೆ ಮಾಜಿ ಸೈನಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಕಲಬುರಗಿ ಟು ಬಾಂಗ್ಲಾದೇಶ: 4 ತಿಂಗಳ ಹಿಂದೆ ನಾಪತ್ತೆಯಾದ ಯುವತಿ ಪ್ರಕರಣಕ್ಕೆ ಬಿಗ್‌ಟ್ವಿಸ್ಟ್! ನೆಕ್ಸ್ಟ್ ಜನ್ ಗಾರ್ಮೆಂಟ್ಸ್‌ ನಲ್ಲಿ ಏನು ನಡೀತಿದೆ?
ಕೊಂಕಣ ರೈಲ್ವೆಗೆ ₹7760 ಕೋಟಿ ಥ್ಯಾಂಕ್ಸ್: ಅಂಕೋಲಾ–ಹುಬ್ಬಳ್ಳಿ, ತಾಳಗುಪ್ಪ–ಹೊನ್ನಾವರ ಅನುಷ್ಠಾನ ಮಾಡಿ-ಕಾಗೇರಿ