ಬಳ್ಳಾರಿ ಜಿಲ್ಲಾಡಳಿತದಿಂದ 1ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರು ಡಿಲೀಟ್!

By Suvarna News  |  First Published Mar 20, 2023, 9:20 PM IST

ನಕಲಿ‌  ಮತ್ತು ಎರಡು ಮೂರು ಕಡೆ ಹೆಸರು ಇರೋ ಮತದಾರರ  ಪತ್ತೆ ಹಚ್ಚುವಲ್ಲಿ ಬಳ್ಳಾರಿ ಜಿಲ್ಲಾಡಳಿತ ಭರ್ಜರಿ ಕಾರ್ಯಾಚರಣೆ ಮಾಡಿದೆ. ಹತ್ತಲ್ಲ ಇಪ್ಪತ್ತಲ್ಲ‌ ಬರೋಬ್ಬರಿ ಒಂದು ಲಕ್ಷ ಹದಿನೇಳು ಸಾವಿರ ನಕಲಿ‌ ಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ.


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಮಾ.20): ನಕಲಿ‌  ಮತ್ತು ಎರಡು ಮೂರು ಕಡೆ ಹೆಸರು ಇರೋ ಮತದಾರರ  ಪತ್ತೆ ಹಚ್ಚುವಲ್ಲಿ ಬಳ್ಳಾರಿ ಜಿಲ್ಲಾಡಳಿತ ಭರ್ಜರಿ ಕಾರ್ಯಾಚರಣೆ ಮಾಡಿದೆ. ಹತ್ತಲ್ಲ ಇಪ್ಪತ್ತಲ್ಲ‌ ಬರೋಬ್ಬರಿ ಒಂದು ಲಕ್ಷ ಹದಿನೇಳು ಸಾವಿರ ನಕಲಿ‌ ಮತದಾರರ ಹೆಸರನ್ನು ಡಿಲಿಟ್ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಎರಡು ಮೂರು ಕಡೆ ಹೆಸರು ಸೇರಿಸಿರೋರ ವಿರುದ್ಧ ಭರ್ಜರಿ ಕಾರ್ಯಾಚರಣೆ ಮಾಡಿದ  ಬಳ್ಳಾರಿ ಜಿಲ್ಲಾಡಳಿತ ಮೂರು ನಾಲ್ಕು ಕಡೆ ಹೆಸರಿರೋ ಜೊತೆಗೆ ಇಪ್ಪತ್ತು ಸಾವಿರಕ್ಕೂ ಹೆಚ್ಚು ಸಾವನ್ನಪ್ಪಿದ ವ್ಯಕ್ತಿಗಳ ಹೆಸರನ್ನು ಕೂಡ ಡಿಲಿಟ್ ಮಾಡಲಾಗಿದೆ. ಯಾಕಂದ್ರೆ ಸಾವನ್ನಪ್ಪಿದ ವ್ಯಕ್ತಿಗಳ‌ ಹೆಸರಲ್ಲಿ ಮತದಾನ ಮಾಡೋವವರು ಇದ್ದಾರೆಂದು ಈ ರೀತಿಯಲ್ಲಿ ಕಾರ್ಯಾಚರಣೆ ಮಾಡಲಾಗಿದೆ.

Tap to resize

Latest Videos

undefined

ಮದುವೆಯಾದ ಮಗಳನ್ನು ಕಿಡ್ನಾಪ್‌ ಮಾಡಿದ ಲವರ್‌, ಹುಡುಗನ ಮೂಗು ಕತ್ತರಿಸಿ ಶಿಕ್ಷೆ ನೀಡಿದ ಡೆಡ್ಲಿ

ಹತ್ತು ವರ್ಷಗಳ ಬಳಿಕ‌ ನಡೆದ ಕಾರ್ಯಾಚರಣೆ :
ಸದ್ಯ ಬಳ್ಳಾರಿ ಜಿಲ್ಲೆಯ ಐದು ಕ್ಷೇತ್ರದಲ್ಲಿ 11 ಲಕ್ಷ 33 ಸಾವಿರ ಮತದಾರರಿದ್ದಾರೆ. ಈ ಪೈಕಿ ಬಳ್ಳಾರಿ ಜಿಲ್ಲೆಯ 1 ಲಕ್ಷ 17 ಲಕ್ಷ  ಮತಗಳು ಡಿಲಿಟ್  ಮತ್ತು 33 ಸಾವಿರ ಯುವ ಮತದಾರರ ಸೇರ್ಪಡೆ ಮಾಡಲಾಗಿದೆ. ಆಂಧ್ರದ ಗಡಿ ಭಾಗ  ಮತ್ತು ಕೈಗಾರಿಕೆಗಳು ಹೆಚ್ಚಾಗಿರೋದ್ರಿಂದ ಬಳ್ಳಾರಿಗೆ ವಲಸೆ ಬರೋ ಜನರು ಸಾಮಾನ್ಯವಾಗಿದೆ.  ಹೀಗೆ ಬಂದ ಜನರು ಆಂಧ್ರ ಸೇರಿದಂತೆ ಬೇರೆ ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುತ್ತದೆ. ಇದರ ಜೊತೆಗೆ ರಾಜಕೀಯ ದುರುದ್ದೇಶದ ಲಾಭಕ್ಕಾಗಿ ಎರಡು ಮೂರು ಕಡೆ ಹೆಸರು ಇರೋದು ಕಂಡು ಬಂದ ಹಿನ್ನಲೆ ಇದನ್ನು ಪೋಟೋ ಸಿಮ್ಲಾರಿಟಿ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ಜಿಲ್ಲಾಧಿಕಾರಿ ಪವನ್ ಮಾಲ್ಪಾಟಿ ತಿಳಿಸಿದ್ದಾರೆ. ಹೀಗೆ ಎರಡು ಮೂರು ಕಡೆ ಹೆಸರು ಇರೋರ ಪಟ್ಟಿ ಮಾಡೋ ಮೂಲಕ ಭರ್ಜರಿ ಕಾರ್ಯಾಚರಣೆ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ತೆಗೆಯಲಾಗಿದೆ.

UDUPI: ದೇಶದಲ್ಲಿನ ಮೀನುಗಾರಿಕಾ ವಲಯಕ್ಕೆ ಆದ್ಯತಾವಲಯ ಮಾನ್ಯತೆ

ಪಾರದರ್ಶಕ ಚುನಾವಣೆಗೆ ಕ್ರಮ:
ಬಳ್ಳಾರಿ ಅಂದ್ರೆ ಅಕ್ರಮದ ತವರೂರು ಎನ್ನುವ ಕುಖ್ಯಾತಿ ಇತ್ತು. ಈ ಹಿಂದೆ ತಮ್ಮ ಹೆಸರಲ್ಲಿ ಎರಡು ಮೂರು ವಾರ್ಡ್ ಗಳ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸೋದು ಮತ್ತು ಸಾವನ್ನಪ್ಪಿದವರ ಹೆಸರಲ್ಲಿಯೂ ಮತದಾನ ಮಾಡೋ ಮೂಲಕ ಅಕ್ರಮ ಮತದಾನ ಮಾಡಲಾಗುತ್ತಿತ್ತು. ಆದರೆ  ದಶಕಗಳ ಬಳಿಕ‌ ಮತದಾರರ ಪಟ್ಟಿ ಪರಿಷ್ಕರಣೆ ಮಾಡೋ ಮೂಲಕ ಪಾರದರ್ಶಕ ಚುನಾವಣೆಗೆ ನಾಂದಿ ಹಾಡಲಾಗ್ತಿದೆ.

click me!