ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಆ.15ರಿಂದ ಆ.21ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಬೆಂಗಳೂರು (ಆ.14): ದೇಶದ 77ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಷನ್ ಲಿ. (ಬಿಎಂಆರ್‌ಸಿಎಲ್) ವತಿಯಿಂದ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಒಂದು ವಾರಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.
ಹೌದು, ದೇಶದ ಸ್ವಾತಂತ್ರ್ಯೋತ್ಸವ ದಿನಾಚರಣೆ ಮತ್ತು ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರತಿವರ್ಷ ವಿಭಿನ್ನವಾದ ಕಾರ್ಯಕ್ರಮಗಳನ್ನು ಬಿಎಂಆರ್‌ಸಿಎಲ್ ಆಯೋಜನೆ ಮಾಡುತ್ತಿದೆ. ಈಗ ನಾಳೆ ನಡೆಯಲಿರುವ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅದರಲ್ಲಿಯೂ ಪ್ರತಿನಿತ್ಯ ಒಂದೊಂದು ಮೆಟ್ರೋ ನಿಲ್ದಾಣಗಳಲ್ಲಿ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.
undefined
ಪೊಲೀಸರ ಕೈಗೆ ಸಿಗದ ಬುದ್ಧಿವಂತ ನಟ ಉಪೇಂದ್ರ: ನೋಟಿಸ್ ನೀಡಿದರೂ ವಿಚಾರಣೆಗೆ ಗೈರು
ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಬಿಎಂಆರ್‌ಸಿಎಲ್, ಆ.15ರಿಂದ ಆ.21ರವರೆಗೆ ಮೆಟ್ರೋ ನಿಲ್ದಾಣಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ನಾಟಕ ಪ್ರದರ್ಶನ, ದೇಶಭಕ್ತಿ ಗೀತೆಗಳ ಗಾಯನ ಹಾಗೂ ಲಾವಣಿ ಪದಗಳನ್ನು ಹಾಡಲಾಗುತ್ತದೆ. ಇನ್ನು ಕಾರ್ಯಕ್ರಮವನ್ನು ನಮ್ಮ ಮೆಟ್ರೋ ಬಣ್ಣದ ಬಳಗ ವತಿಯಿಂದ ನಡೆಸಲಾಗುತ್ತಿದ್ದು, ಒಂದು ಗಂಟೆಯ ಕಾಲ ಮೆಟ್ರೋ ಪ್ರಯಾಣಿಕರು ಮನರಂಜನೆಯನ್ನು ಪಡೆಯಬಹುದಾಗಿದೆ. ಹರ್ಡೇಕರ್ ಮಂಜಪ್ಪ ಜೀವನಾಧಾರಿತ "ಎಲ್ಲಿಗೆ ಬಂತು- ಯಾರಿಗೆ ಬಂತು? ನಾಟಕ ಪ್ರದರ್ಶನ ಮಾಡಲಾಗುತ್ತದೆ. ಲಾವಣಿಪದಗಳು,ದೇಶಭಕ್ತಿಗಳನ್ನು ಹಾಡಲಾಗುತ್ತದೆ.
ನಮ್ಮ ಮೆಟ್ರೋ ರೈಲಿನಲ್ಲಿ ಮರಳಿನ ಚೀಲಗಳ ಸಾಗಣೆ: ಬೆಂಗಳೂರು (ಆ.14) : ಬೆನ್ನಿಗಾನಹಳ್ಳಿ ಬಳಿ ಹಾದುಹೋದ ಸೇಲಂ ರೈಲ್ವೆ ಮಾರ್ಗದ ಮೇಲೆ ಅಳವಡಿಸಲಾದ ‘ನಮ್ಮ ಮೆಟ್ರೋ’ ತೆರೆದ ವೆಬ್ ಗರ್ಡರ್ (ಒಡಬ್ಲ್ಯುಜಿ) ಸಾಮರ್ಥ್ಯ ಪರೀಕ್ಷಿಸಲು ಮೆಟ್ರೋ ರೈಲಿನಲ್ಲಿ ಮರಳಿನ ಚೀಲವಿಟ್ಟು ಚಾಲನೆ ಮಾಡಲಾಗುತ್ತಿದೆ. ನಮ್ಮ ಮೆಟ್ರೋ(Namma metro)ದ ‘ನೇರಳೆ’ ಮಾರ್ಗದ ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರ ಮಾರ್ಗ(Baiyappanahalli -KR Pura Road)ದ ನಡುವಿನ ಪ್ರಾಯೋಗಿಕ ಚಾಲನೆ ಮುಂದುವರಿದಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಷ್ಟುಒತ್ತಡ ಹಾಗೂ ತೂಕ ಹೊರಬಹುದು ಎಂಬುದನ್ನು ತಿಳಿದುಕೊಳ್ಳಲು ಮೊದಲ ಬಾರಿ ಪ್ರಾಯೋಗಿಕವಾಗಿ ರೈಲಿನ ಆರು ಬೋಗಿಗಳಲ್ಲಿ ಮರಳು ಚೀಲಗಳನ್ನಿಟ್ಟು (ಶೇಕಡ 100ರಷ್ಟುಪ್ರಯಾಣಿಕರು ಇರುವಷ್ಟುತೂಕ) ಎರಡು ಟ್ರ್ಯಾಕ್‌ನಲ್ಲಿ ಪರೀಕ್ಷೆ ಮಾಡಲಾಗಿದೆ.
Bengaluru: ಕೆಂಗೇರಿ-ಬೈಯಪ್ಪನಹಳ್ಳಿ, ಕೆಆರ್‌ಪುರ-ವೈಟ್‌ಫೀಲ್ಡ್ ಮೆಟ್ರೋ ಸಂಚಾರ ವ್ಯತ್ಯಯ
ಮೆಟ್ರೋ ಮಾರ್ಗದ ಧಾರಣ ಶಕ್ತಿ ಪರೀಕ್ಷೆ: ಇದರಿಂದ ಗರ್ಡರ್ (ಸ್ಲ್ಯಾನ್) ಮೇಲಾಗುವ ಪರಿಣಾಮವೇನು? ಅಂತಾರಾಷ್ಟ್ರೀಯ ಗುಣಮಟ್ಟದ ಮಾರ್ಗಸೂಚಿ ಅನುಸಾರ ಸಂಚಾರದ ವೇಳೆ ಪ್ರಯಾಣಿಕರನ್ನು (ತೂಕವನ್ನು) ತಡೆದುಕೊಳ್ಳುವ ಧಾರಣ ಶಕ್ತಿ ಗರ್ಡರ್‌ಗೆ ಇದೆಯಾ? ಈ ವೇಳೆ ಗರ್ಡರ್‌ನಲ್ಲಿ ಕದಲುವಿಕೆ ಏನಾದರೂ ಉಂಟಾಗುತ್ತದೆಯೆ? ಎಂಬುದು ತಿಳಿದುಕೊಳ್ಳಲಾಗುತ್ತದೆ. ಮುಂದಿನ ಆ.19ರವರೆಗೆ ಈ ಪರೀಕ್ಷೆ ನಡೆಯಲಿದೆ. ಈ ವೇಳೆ ಗರ್ಡರ್ ಕೆಳಭಾಗದಲ್ಲಿ ರೈಲುಗಳು ಕೂಡ ಸಂಚರಿಸಿದ್ದು, ಹೇಳಿಕೊಳ್ಳುವ ಯಾವುದೇ ದೊಡ್ಡ ಮಟ್ಟದ ಸಮಸ್ಯೆಗಳು ಕಂಡಬಂದಿಲ್ಲ. ಆದರೂ ಸಣ್ಣಪುಟ್ಟನ್ಯೂನತೆಗಳನ್ನು ಹಾಗೂ ಅಗತ್ಯವಿರುವ ಬದಲಾವಣೆಗಳನ್ನು ಮಾಡಿಕೊಳ್ಳಲು ಬಿಎಂಆರ್‌ಸಿಎಲ್ ತಾಂತ್ರಿಕ ಎಂಜಿನಿಯರಿಂಗ್ ವಿಭಾಗದಿಂದ ಕ್ರಮ ವಹಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದರು.