ಸ್ವಾತಂತ್ರ್ಯೋತ್ಸವ ಅಮೃತ ಮಹೋ​ತ್ಸ​ವ: ಗೌರ​ವ​ಧ​ನ ಮೀಸ​ಲು

By Kannadaprabha News  |  First Published Aug 5, 2022, 9:47 AM IST

ಶಿರಾಳಕೊಪ್ಪ ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋ​ತ್ಸವ ಅಮೃತ ಮಹೋತ್ಸವ ಆಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಬೇಕು ಎಂಬ ಹಿನ್ನೆಲೆಯಲ್ಲಿ ವಿವಿಧ ಇಲಾಖೆ, ಶಿಕ್ಷಣ ಸಂಸ್ಥೆ, ಬ್ಯಾಂಕ್‌ ಸೇರಿದಂತೆ ಪ್ರಮುಖರ ಸಭೆ ನಡೆಸಲಾಯಿತು.


ಶಿರಾಳಕೊಪ್ಪ (ಆ.5) : ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯೋ​ತ್ಸವ ಅಮೃತ ಮಹೋತ್ಸವ ಆಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಬೇಕು ಎಂಬ ಹಿನ್ನೆಲೆಯಲ್ಲಿ ವಿವಿಧ ಇಲಾಖೆ, ಶಿಕ್ಷಣ ಸಂಸ್ಥೆ, ಬ್ಯಾಂಕ್‌ ಸೇರಿದಂತೆ ಪ್ರಮುಖರ ಸಭೆ ನಡೆಸಲಾಯಿತು. ಪುರಸಭೆ ಯಡಿಯೂರಪ್ಪ ಸಭಾಭವನದಲ್ಲಿ ಗುರುವಾರ ಮಂಜುಳಾ ಟಿ.ರಾಜು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿಯ 75ನೇ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಯಾವ ರೀತಿ ಆಚರಿಸಬೇಕು ಎಂಬ ಬಗ್ಗೆ ಸುದೀರ್ಘ ಚಚೆÜರ್‍ ನಡೆಸಿ, ಪ್ರತಿಯೊಂದು ಇಲಾಖೆ ಮತ್ತು ಶಿಕ್ಷಣ ಸಂಸ್ಥೆ ಆಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸಬೇಕು ಎಂದು ತೀರ್ಮಾನಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಹೇಮಂತ ಮಾತನಾಡಿ, ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಪುರಸಭೆಗೆ ಮಾತ್ರ ಸೀಮಿತ ಎಂದು ತಿಳಿಯದೇ ಪ್ರತಿಯೊಂದು ಇಲಾಖೆ ಕೈ ಜೋಡಿಸಿದಾಗ ಹಬ್ಬದ ವಾತಾವರಣ ನಿರ್ಮಿಸಲು ಸಾಧ್ಯ. ಆದ್ದರಿಂದ ತಾವೆಲ್ಲರೂ ತನುಮನ ಧನಗಳಿಂದ ಸಹಕಾರ ನೀಡಿಬೇಕು ಎಂದು ಮನವಿ ಮಾಡಿದರು.

Tap to resize

Latest Videos

ಅಮೃತ ಮಹೋತ್ಸವಕ್ಕೆ ‘ಆಜಾದಿ ಉಪಗ್ರಹ’..!

ಪುರಸಭೆ ಸದಸ್ಯ ಟಿ.ರಾಜು ಮಾತನಾಡಿ, 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಪುರಸಭೆ ವ್ಯಾಪ್ತಿಯಲ್ಲಿ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರಭಾತ್‌ ಪೇರಿ ಆಗಮಿಸುವ ರಾಜಬೀದಿಯಲ್ಲಿ ತಳಿರು ತೋರಣ, ಬಾಳೆಕಂಬ, ದೀಪದ ಅಲಂಕಾರವನ್ನು ಮಾಡಬೇಕು. ಉತ್ತಮವಾಗಿ ಪೆರೇಡ್‌ ಜೊತೆಗೆ ಶಾಲಾ ಮಕ್ಕಳು ದೇಶ ಭಕ್ತರ ವೇಷಭೂಷಣ ಹಾಕಿಕೊಂಡು ನಡೆಸುವ ಶಾಲೆಗಳಿಗೆ ಬಹುಮಾನ ಕೊಡುವುದಾಗಿ ಪುರಸಭೆ ಘೋಷಿಸಿದೆ. ಅಮೃತ ಮಹೋತ್ಸವ ಆಚರಣೆ ಮಾಡದ ಯಾವುದೇ ಕಚೇರಿ, ಶಾಲೆಗಳ ಪೋಟೋ ತೆಗೆಸಿ ಅವುಗಳನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುವುದು ಎಂದರು.

ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ಕಡಿಮೆ ಇರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಆರ್ಥಿಕ ಸಹಾಯ ಮಾಡಬೇಕು ಎಂದು ತಿಳಿಸಿ, ತಮ್ಮ ಮತ್ತು ಅವರ ಪತ್ನಿ ಮಂಜುಳಾ ಅವರ 4 ತಿಂಗಳ ಗೌರವಧನವನ್ನು ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಕೊಡುತ್ತಿರುವುದಾಗಿ ತಿಳಿಸಿದರು. ಪುರಸಭೆ ಅಧ್ಯಕ್ಷರು ಹಾಗೂ ಅವರ ಪತಿ ರಾಜು ತಮ್ಮ ಗೌರವಧನವನ್ನೂ ಕೊಡು​ವುದಾಗಿ ತಿಳಿಸಿದರು. ಆಗ ಪುರಸಭೆ ಉಪಾಧ್ಯಕ್ಷೆ, ಸ್ಥಾಯಿ ಸಮಿತಿ ಅಧ್ಯಕ್ಷರಾದಿಯಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು, ಧನಸಹಾಯ ಮಾಡಿ ಸಹಕಾರ ನೀಡಿದರು.

ಭಾರತ ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಉದ್ದೇಶವಿದೆ: ಅಮಿತ್ ಶಾ

ಅಮೃತ ಮಹೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧ, ದೇಶಭಕ್ತಿ ಗೀತೆಗಳ ಸ್ಪರ್ಧೆ ಹಾಗೂ ಸ್ವಾತಂತ್ರ್ಯ ಮಹೋತ್ಸವಕ್ಕೆ ಸಂಬಂಧಿಸಿದಂತೆ ಚಿತ್ರಸ್ಪರ್ಧೆ ಏರ್ಪಡಿಸಿ ಸ್ವಾತಂತ್ರ್ಯ ದಿನದಂದು ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಹಾಗೆಯೇ ಪ್ರತಿಯೊಂದು ಶಾಲೆ ಮಕ್ಕಳಿಗೆ ಸಿಹಿ ಹಂಚಲಾಗುವುದು ಎಂದು ಮುಖ್ಯಾಧಿಕಾರಿ ಹೇಳಿದರು. ವೇದಿಕೆ ಮೇಲೆ ಉಪಾಧ್ಯಕ್ಷೆ ವಿಜಯಲಕ್ಷ್ಮೇ ಲೋಕೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್‌, ಕೆಎಸ್‌ಡಿಎಲ್‌ ನಿರ್ದೇಶಕಿ ನಿವೇದಿತಾ ರಾಜು, ಮುಖ್ಯಾಧಿಕಾರಿ ಹೇಮಂತ ಉಪಸ್ಥಿತರಿದ್ದರು.

click me!