96 ಗ್ರಾಮ​ಗ​ಳಲ್ಲಿ BSNL ನೆಟ್‌​ವರ್ಕ್ ಸಮ​ಸ್ಯೆ: ಕೇಂದ್ರಕ್ಕೆ ಪಟ್ಟಿ

By Kannadaprabha NewsFirst Published Aug 5, 2022, 9:18 AM IST
Highlights
  • ಲೋಕ​ಸಭಾ ಕ್ಷೇತ್ರ​ದಲ್ಲಿ ನೆಟ್‌ವರ್ಕ್ ಬಾಧಿ​ತ ಹಳ್ಳಿಗಳ ಪಟ್ಟಿಕೇಂದ್ರ ಸಚಿವರಿಗೆ ನೀಡಿ​ದ ಸಂಸದ ರಾಘವೇಂದ್ರ
  • ಶಿವ​ಮೊಗ್ಗ ಜಿಲ್ಲೆ 80 ಗ್ರಾಮಗಳು, ಕ್ಷೇತ್ರ ವ್ಯಾಪ್ತಿಗೆ ಸೇರಿ​ದ ಉಡುಪಿ ಜಿಲ್ಲೆ 16 ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ

ಶಿವಮೊಗ್ಗ (ಆ.5) : ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಇಂದಿಗೂ ಬಿಎ​ಸ್ಸೆ​ನ್ನೆಲ್‌ ನೆಟ್‌ವರ್ಕ್ ಸಮಸ್ಯೆ ಜೀವಂತವಾಗಿದೆ. ನೆಟ್‌ವರ್ಕ್ ಎಲ್ಲಿ ಸಿಗುತ್ತೆ ಎಂದು ಕೈಯಲ್ಲಿ ಮೊಬೈಲ್‌ ಹಿಡಿದು ಪರದಾಡುತ್ತಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಲು ಬಿಎಸ್‌ಎನ್‌ಎಲ್‌ ಟವರ್‌ ನಿರ್ಮಿಸಿಕೊಡುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌(Ashwini Vaishnav) ಅವರಿಗೆ ಮನವಿ ಮಾಡಿದ್ದಾರೆ.

ಮಲೆನಾಡು(Malenadu) ಪ್ರದೇಶದಲ್ಲಿರುವ ಮನೆಗಳಿಗೆ ಸಂಪರ್ಕ ಸಾಧನ ಬಳಕೆ ಕಷ್ಟವಾಗಿದೆ. ಅನಾರೋಗ್ಯಪೀಡಿತ, ತುರ್ತು ಸಂದರ್ಭ, ಸಾವು-ನೋವಿನ ಸಂದರ್ಭದಲ್ಲೂ ಮಾಹಿತಿ ರವಾನೆಗೆ ಮೊಬೈಲ್‌(Mobile) ಹಿಡಿದು ಗುಡ್ಡ ಅಥವಾ ಮರಗಳ ಮೇಲೆ, ಮನೆ ಮೇಲೆ ಏರಬೇಕಾದ ಸ್ಥಿತಿ ಉಂಟಾಗಿದೆ ಎಂದು ಬಹುತೇಕ ಗ್ರಾಮಸ್ಥರು ಸಮಸ್ಯೆ ಮುಂದಿಟ್ಟುಕೊಂಡು ಬಗೆಹರಿಹಾರಕ್ಕೆ ಅಧಿಕಾರಿಗಳ ಕಚೇರಿಗೆ ಅಲೆಯುತ್ತಿದ್ದಾರೆ.

ನೆಟ್ವರ್ಕ್ ಇಲ್ಲದಿದ್ದರೂ ಈಗ ಕಾಲ್‌ ಮಾಡ್ಬಹುದು..! ಸೆಟ್ಟಿಂಗ್ಸ್‌ನಲ್ಲಿ ಹೀಗ್ಮಾಡಿ

ಈ ಹಿನ್ನೆಲೆ ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ನೆಟ್‌ವರ್ಕ್ ಸಮಸ್ಯೆ ಇರುವ ಗ್ರಾಮಗಳ ಪಟ್ಟಿಸಹಿತ ಭೇಟಿಯಾಗಿದ್ದರು. ಜಿಲ್ಲೆಯ 80 ಗ್ರಾಮಗಳು ಸೇರಿದಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಇಲ್ಲಿ ಬಿಎಸ್‌ಎಸ್‌ಎನ್‌ಎಲ್‌ ವತಿಯಿಂದ ಟವರ್‌ ನಿರ್ಮಿಸುವಂತೆ ಈ ಸಂದರ್ಭ ಒತ್ತಾಯಿಸಿದರು.

ಸಂಸದರ ಮನವಿಯಲ್ಲಿ ಏನಿದೆ?:

ಜಿಲ್ಲೆಯ 96 ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಇದೆ. ದಟ್ಟಅರಣ್ಯ ಮತ್ತು ಗುಡ್ಡಗಾಡು ಪ್ರದೇಶಗಳಿಂದ ಸುತ್ತುವರಿದ ಕಾರಣ, ಈ ಗ್ರಾಮಗಳಲ್ಲಿ ಮೊಬೈಲ್‌ ನೆಟ್‌ವರ್ಕ್ ಸಮಸ್ಯೆ ಉಂಟಾಗಿದೆ. ಈ ಗ್ರಾಮಗಳಲ್ಲಿ ನೆಟ್‌ವರ್ಕ್ ಒದಗಿಸಿದರೆ ಜನರಿಗೆ ಅನುಕೂಲ ಉಂಟಾಗಲಿದೆ. ಜಿಲ್ಲೆಯ ಶೇ.40ರಷ್ಟುಗ್ರಾಮ ಪಂಚಾಯಿತಿಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಸಮರ್ಪಕವಾಗಿಲ್ಲ. ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಗ್ರಾಮಗಳ ಪಟ್ಟಿಹಸ್ತಾಂತರ:

ಜಿಲ್ಲೆಯ 80 ಗ್ರಾಮಗಳು, ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಉಡುಪಿ ಜಿಲ್ಲೆಯ 16 ಗ್ರಾಮಗಳಲ್ಲಿ ನೆಟ್‌ವರ್ಕ್ ಸಮಸ್ಯೆ ಇದೆ. ಈ ಗ್ರಾಮಗಳ ಪಟ್ಟಿಯನ್ನು ದೂರ ಸಂಪರ್ಕ ಸಚಿವರಿಗೆ ಸಂಸದ ರಾಘವೇಂದ್ರ ಹಸ್ತಾಂತರ ಮಾಡಿದರು. ಸಮಸ್ಯೆ ಇರುವ ಕಡೆ ಕೂಡಲೇ ಮೊಬೈಲ್‌ ನೆಟ್‌ವರ್ಕ್ ಒದಗಿಸುವಂತೆ ಸಂಸದ ರಾಘವೇಂದ್ರ ಮನವಿ ಮಾಡಿದ್ದಾರೆ. ಇದಕ್ಕೆ ಸಚಿವ ಅಶ್ವಿನಿ ವೈಷ್ಣವ್‌ ಪೂರಕವಾಗಿ ಸ್ಪಂದಿಸಿದ್ದಾರೆ.

ಸಂಸದರ ಪಟ್ಟಿರುವ ನೆಟ್‌ವರ್ಕ್ ಸಮಸ್ಯೆ ಗ್ರಾಮಗಳು

ಹೊಸನಗರ ತಾಲೂಕು: ಅಂದಗೊಳಿ, ಬಸವಾಪುರ, ಬೇಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ…, ಗುಬ್ಬಿಗ, ಗುಡೋಡಿ, ಹಳೆ ತೋಟ, ಹೊಳಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ…, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದ ಕೊಪ್ಪ, ಉಳ್ತಿಗ.

ಸಾಗರ ತಾಲೂಕು: ಬಾಳಿಗೆ, ಬರುವೆ, ಬೊಬ್ಬಿಗೆ, ಬ್ರಾಹ್ಮಣ ಇಳಕಳಲೆ, ಚದರವಳ್ಳಿ, ಚಿಮ್ಲೆ, ಹೆದಾತ್ರಿ, ಹೊನಗಲ್ಲು, ಕಗರಸು, ಕಲ್ಲೂರು, ಕನಪಗಾರು, ಕಣ್ಣೂರು, ಕಾರಣಿ, ಕಟ್ಟಿನಕಾರು, ಕಿರುವಾಸೆ, ಕೊಪ್ಪರಿಗೆ, ಮಾಳೂರು, ಮರಾಟಿ, ಮುಳ್ಳಕೆರೆ, ಮುಪ್ಪಾನೆ, ನಾಡಕೆಪ್ಪಿಗೆ, ನೆಲಹರಿ, ಶಿರಗಳಲೆ ಅವಡೆ, ತಳಗೋಡು, ಉರುಳಗಲ್ಲು, ವಾಲೂರು.

BSNL ಗ್ರಾಹಕರಿಗೆ ಬಿಗ್ ಶಾಕ್, 3 ಪ್ರೀಪೇಯ್ಡ್‌ ಪ್ಲಾನ್‌ಗಳಲ್ಲಿ ಬದಲಾವಣೆ!

ಶಿವಮೊಗ್ಗ ತಾಲೂಕು: ಚಿತ್ರಶೆಟ್ಟಿಹಳ್ಳಿ, ಕೋಣೆ ಹೊಸೂರು, ಕುಡಗಲ ಮನೆ, ಮಲೆ ಶಂಕರ, ಶೆಟ್ಟಿಹಳ್ಳಿ, ಸಿದ್ದಮ್ಮಾಜಿ ಹೊಸೂರು.

ತೀರ್ಥಹಳ್ಳಿ ತಾಲೂಕು: ಅಲಸೆ, ಬಸವನಗದ್ದೆ, ಬೊಮ್ಮನಹಳ್ಳಿ, ಚಕ್ಕೊಡಬೈಲು, ಗರಗ, ಹೆಗಲತ್ತಿ, ಹಿರೇಬೈಲು, ಹುರುಳಿ, ಕಿಕ್ಕೇರಿ, ಕೊಂಬಿನಕೈ, ನೇರಲಮನೆ, ಶುಂಠಿಹಕ್ಲು, ಟೆಂಕಬೈಲು, ತೋಟದಕೊಪ್ಪ, ಯೋಗಿಮಳಲಿ.

click me!