ಶೂನ್ಯ ಬಡ್ಡಿ ದರ ಸಾಲ ಸೌಲಭ್ಯ ಹೆಚ್ಚಳ: ಸಚಿವ ಚಲುವರಾಯಸ್ವಾಮಿ

By Kannadaprabha News  |  First Published Aug 3, 2023, 8:12 PM IST

ಗ್ರಾಮೀಣ ಪ್ರದೇಶದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಸಹಕಾರ ಸಂಘಗಳ ಮೂಲಕ ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಸಿಗುತ್ತಿದ್ದ 3 ಲಕ್ಷ ರು. ವರೆಗಿನ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ಕಾಂಗ್ರೆಸ್‌ ಸರ್ಕಾರ 5 ಲಕ್ಷ ರು.ಗೆ ಹೆಚ್ಚಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.
 


ನಾಗಮಂಗಲ (ಆ.03): ಗ್ರಾಮೀಣ ಪ್ರದೇಶದ ರೈತರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿ ಸಹಕಾರ ಸಂಘಗಳ ಮೂಲಕ ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಸಿಗುತ್ತಿದ್ದ 3 ಲಕ್ಷ ರು. ವರೆಗಿನ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವನ್ನು ಕಾಂಗ್ರೆಸ್‌ ಸರ್ಕಾರ 5 ಲಕ್ಷ ರು.ಗೆ ಹೆಚ್ಚಿಸಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ತಿಳಿಸಿದರು.

ತಾಲೂಕಿನ ಬಿಂಡೇನಹಳ್ಳಿಯಲ್ಲಿ ದೇವಲಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಶಾಖಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ರಾಜ್ಯದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ಹಲವು ಜನಪರ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಂದಿದೆ. ಸಹಕಾರ ಸಂಘಗಳ ಮೂಲಕ ಸಿಗುವ ಸವಲತ್ತುಗಳನ್ನು ಪಡೆದು ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದರು.

Tap to resize

Latest Videos

ಕಸ್ತೂರಿ ರಂಗನ್ ವರದಿ ಬಫರ್ ಝೋನ್ ವಿರುದ್ಧ ಪ್ರತಿಭಟನೆಗೆ ರಾಜ್ಯ ರೈತ ಸಂಘ ಸಜ್ಜು

ಸಹಕಾರ ಸಂಘಗಳಲ್ಲಿ ರೈತರು ಕೃಷಿ ಚಟುವಟಿಕೆಗಾಗಿ ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರು. ವರೆಗೂ ಸಾಲ ಪಡೆಯಬಹುದು. ಮುಂದಿನ ದಿನಗಳಲ್ಲಿ ಶೇ.3ರ ಬಡ್ಡಿದರದಲ್ಲಿ 15 ಲಕ್ಷ ರು. ವರೆಗೂ ಸಹ ಸಾಲ ಪಡೆಯಬಹುದು. ಈ ಎರಡೂ ಪ್ರಯೋಜನಗಳಿಂದ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಸರ್ಕಾರ ಅಧಿಕಾರಕ್ಕೆ ಬಂದಿರುವುದರಿಂದ ಮಾತ್ರ ಈ ಯೋಜನೆ ಜಾರಿಯಾಗುತ್ತಿದೆ. ಇದನ್ನು ಎಲ್ಲ ರೈತರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು. ಇದಕ್ಕೂ ಮುನ್ನ ಗ್ರಾಮದ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ಕೊಟ್ಟಸಚಿವ ಚಲುವರಾಯಸ್ವಾಮಿ ವಿಶೇಷ ಪೂಜೆ ನೆರವೇರಿಸಿದರು. ನೂತನ ಶಾಖಾ ಕಟ್ಟಡ ಉದ್ಘಾಟನೆ ಬಳಿಕ ಸಚಿವರನ್ನು ಸಂಘದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಬಿಂಡೇನಹಳ್ಳಿ ಜಯರಾಮು, ಉಪಾಧ್ಯಕ್ಷೆ ಯಶೋಧಮ್ಮ, ಚಲುವರಾಯಸ್ವಾಮಿ ಪುತ್ರ ಸಚ್ಚಿನ್‌, ಮುಖಂಡರಾದ ಸುನಿಲ… ಲಕ್ಷ್ಮಿಕಾಂತ್‌, ಉದಯಕಿರಣ್‌, ಜಿಪಂ ಮಾಜಿ ಸದಸ್ಯ ಎಂ.ಹುಚ್ಚೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎನ್‌.ಜೆ.ರಾಜೇಶ್‌, ಸಂಘದ ನಿರ್ದೇಶಕರಾದ ಕೆ.ಬಜ್ಜೇಗೌಡ, ಈಶ್ವರಯ್ಯ, ಡಿ.ಟಿ.ಶ್ರೀನಿವಾಸ್‌, ಡಿ.ಕೆ.ಸುರೇಶ್‌, ಎಚ್‌.ಎನ್‌.ನರಸಿಂಹಮೂರ್ತಿ, ಹೇಮಾವತಿ ಬೆಟ್ಟೇಗೌಡ, ತಿಬ್ಬನಹಳ್ಳಿ ರಮೇಶ್‌, ಎ.ಆರ್‌.ಗೋವಿಂದರಾಜು, ಕೆ.ಆರ್‌.ರಾಮಪ್ಪ, ಸಿಇಓ ಡಿ.ವಿ.ನಾಗರಾಜು, ಮದ್ದೇನಹಟ್ಟಿಪ್ರಕಾಶ್‌ ಸೇರಿದಂತೆ ನೂರಾರುಮಂದಿ ಗ್ರಾಮಸ್ಥರಿದ್ದರು.

ಜನರನ್ನು ಲಂಚಕ್ಕಾಗಿ ಪೀಡಿಸುತ್ತಿರಲ್ಲ, ನಿಮಗೆ ಮರ್ಯಾದೆ ಇದೆಯೇ: ಅಧಿಕಾರಿಗಳಿಗೆ ಶಾಸಕಿ ರೂಪಕಲಾ ತರಾಟೆ

ಬೇರೆ ಪಕ್ಷಗಳ ಬಗ್ಗೆ ಯೋಚಿಸಬಾರದು: ಜಾರಿಗೊಳಿಸುತ್ತಿರುವ ಐದು ಗ್ಯಾರಂಟಿ ಯೋಜನೆಗಳಿಗೆ 2024ರ ಮಾಚ್‌ರ್‍ ವೇಳೆಗೆ 35 ಸಾವಿರ ಕೋಟಿ ಹಣವನ್ನು ಸರ್ಕಾರ ಭರಿಸುತ್ತಿದೆ. ನಂತರ ಪ್ರತಿ ವರ್ಷ 52 ಸಾವಿರ ಕೋಟಿ ಹಣ ರಾಜ್ಯದ ಜನರಿಗೆ ತಲುಪಲಿದೆ. ಈ ಐದು ಯೋಜನೆಗಳಿಂದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಂದಲ್ಲೊಂದು ರೂಪದಲ್ಲಿ ಕನಿಷ್ಠ 5ರಿಂದ 6 ಸಾವಿರ ಹಣ ತಲುಪುತ್ತದೆ. ಇಷ್ಟೊಂದು ಕಾರ್ಯಕ್ರಮಗಳನ್ನು ಕೊಟ್ಟಿರುವ ಕಾಂಗ್ರೆಸ್‌ ಪಕ್ಷದ ಬಗ್ಗೆ ಜನರು ಕೃತಜ್ಞರಾಗಿ ಮುಂದಿನ ದಿನಗಳಲ್ಲಿ ಎದುರಾಗುವ ತಾಪಂ, ಜಿಪಂ, ಲೋಕಸಭಾ ಚುನಾವಣೆ ಸೇರಿದಂತೆ ಯಾವುದೇ ಸಂದರ್ಭದಲ್ಲಿಯೂ ಸಹ ಕಾಂಗ್ರೆಸ್‌ ಪಕ್ಷವನ್ನು ಬಿಟ್ಟು ಬೇರೆ ಪಕ್ಷಗಳ ಕಡೆ ಜನರು ಯೋಚಿಸಬಾರದು ಎಂದು ಚಲುವರಾಯಸ್ವಾಮಿ ಮನವಿ ಮಾಡಿದರು.

click me!