ರಾಜ್ಯದಲ್ಲಿ ಮೀಸಲಾತಿ ಶೇ. 50ನ್ನು ಮೀರಿದೆ. ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ನೀಡುತ್ತೇವೆ. ಕಾನೂನು ತೊಡಕುಗಳನ್ನು ಬಗೆಹರಿಸುತ್ತೇವೆ ಎಂದ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಅ.10): ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕ. ಕಾಂಗ್ರೆಸ್ ದಲಿತರನ್ನು ಕೇವಲ ವೋಟ್ ಬ್ಯಾಂಕ್‌ಗಳೆಂದು ತಿಳಿದುಕೊಂಡಿತ್ತು. ಹಿಂದುಳಿದದವರ ಕಲ್ಯಾಣವನ್ನು ಸಹ ಮಾಡಲಿಲ್ಲ. ಇದೇ ಕಾರಣಕ್ಕೆ ದಲಿತರ ಸ್ಥಿತಿ ಇಂದಿಗೂ ಹೀನಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವುದರೊಂದಿಗೆ, ಬಿಜೆಪಿ ದೀನ-ದಲಿತರ ಹಾಗೂ ಬಡವರ ಪರವಾದ ಪಕ್ಷ ಎಂದು ಸಾಬೀತು ಮಾಡಿದೆ. ಇದಕ್ಕೆ ಕಾರಣವಾದ ಮುಖ್ಯಮಂತ್ರಿ, ಸಚಿವರು ಹಾಗೂ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ರಾಜ್ಯದಲ್ಲಿ ಮೀಸಲಾತಿ ಶೇ. 50ನ್ನು ಮೀರಿದೆ. ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರದಿಂದ ಸಹಕಾರ ನೀಡುತ್ತೇವೆ. ಕಾನೂನು ತೊಡಕುಗಳನ್ನು ಬಗೆಹರಿಸುತ್ತೇವೆ ಎಂದರು. ವಿಶ್ವಕ್ಕೆ ಅತ್ಯುತ್ತಮ ಮಹಾಕಾವ್ಯ ಕೊಟ್ಟಿರುವುದು ಮಹರ್ಷಿ ವಾಲ್ಮೀಕಿ. ನೈಜ ಘಟನೆಯನ್ನು ರಾಮಾಯಣದಲ್ಲಿ ಚಿತ್ರಿಸಿದ್ದು ವಾಲ್ಮೀಕಿ. ಅವರ ಜಯಂತಿ ಸಂದರ್ಭದಲ್ಲಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ. ಹಾಗಾಗಿ ಇದು ನಿಜಕ್ಕೂ ಐತಿಹಾಸಿಕ ನಿರ್ಧಾರ ಎಂದರು.
undefined
ಸರ್ಕಾರದಿಂದ ಮಹದಾಯಿ ಮೂಲಸ್ವರೂಪವೇ ಬದಲು: ಎನ್.ಎಚ್. ಕೋನರಡ್ಡಿ
ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿವೆ. ಈ ಬಗ್ಗೆಯೂ ಮುಖ್ಯಮಂತ್ರಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರು ಕೊಟ್ಟಿರುವ ಭರವಸೆಯನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.