ಅಡಕೆ ಉದ್ಯಮಿ ಕಿಮ್ಮನೆ ಮನೆ, ಕಚೇರಿ ಮೇಲೆ ಐಟಿ ದಾಳಿ

By Kannadaprabha News  |  First Published Dec 13, 2020, 8:33 AM IST

ಕಿಮ್ಮನೆ ಅವರ ನಿವಾಸ ಹಾಗೂ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ನಡೆದಿದೆ. 


ಶಿವಮೊಗ್ಗ(ಡಿ.13): ನಗರದ ಪ್ರಮುಖ ಅಡಕೆ ಉದ್ಯಮಿ ಕಿಮ್ಮನೆ ಜಯರಾಮ್‌ ನಿವಾಸ ಮತ್ತು ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ನಗರದ ಪ್ರಮುಖ ಅಡಿಕೆ ವರ್ತಕರೂ ಆಗಿರುವ ಕಿಮ್ಮನೆ ಜಯರಾಮ್‌ ರಿಯಲ್‌ ಎಸ್ಟೇಟ್‌ ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. 

Tap to resize

Latest Videos

ಇತ್ತೀಚೆಗೆ ಮಲೆನಾಡಿನಲ್ಲೇ ಮೊದಲ ಗಾಲ್ಫ್ ಕ್ಲಬ್‌ ಮತ್ತು ರೆಸಾರ್ಟ್‌ ಆರಂಭಿಸಿದ್ದರು. ಗಾಲ್ಫ್ ಕ್ಲಬ್‌ ಅನ್ನು ಇತ್ತೀಚಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿದ್ದರು. 

ಚೆಟ್ಟಿನಾಡು ಸಿಮೆಂಟ್ ಕಾರ್ಖಾನೆಗೆ IT ಶಾಕ್ ...

 ಉದ್ಯಮಿ ಕಿಮ್ಮನೆ ಜಯರಾಂ ನಿವಾಸ ಮತ್ತು ಕಚೇರಿ ಮೇಲೆ ಐಟಿ ದಾಳಿ ನಡೆದಿದ್ದು, ಮಂಗಳೂರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವಿಧ ತಂಡಗಳಲ್ಲಿ ಆಗಮಿಸಿ ದಾಖಲಾತಿಗಳ ಪರಿಶೀಲನೆ ನಡೆಸಿ, ಅಗತ್ಯ ಮಾಹಿತಿ ಕಲೆಹಾಕಿ ತೆರಳಿದ್ದಾರೆ ಎಂದು ತಿಳಿದು ಬಂದಿದೆ.

click me!