ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಐಟಿ ದಾಳಿಗೂ, ರಾಜಸ್ತಾನ ಚುನಾವಣೆಗೂ ಲಿಂಕ್!

By Gowthami K  |  First Published Oct 12, 2023, 9:16 AM IST

ಬೆಂಗಳೂರಿನಲ್ಲಿ ಬೆಳ್ಳಂ ಬೆಳ್ಳಗ್ಗೆ ಐಟಿ ದಾಳಿ ನಡೆದಿದೆ. ನಗರದ 15 ಕಡೆ ಐಟಿ ರೇಡ್ ನಡೆದಿದ್ದು, ಉದ್ಯಮಿಗಳು ಹಾಗೂ ಜ್ಯುವೆಲರಿ ಶಾಪ್‌ ಮೇಲೆ ಐಟಿ ದಾಳಿಯಾಗಿದೆ.


ಬೆಂಗಳೂರು (ಅ.12): ಬೆಂಗಳೂರಿನಲ್ಲಿ ಬೆಳ್ಳಂ ಬೆಳ್ಳಗ್ಗೆ ಐಟಿ ದಾಳಿ ನಡೆದಿದೆ. ನಗರದ 15 ಕಡೆ ಐಟಿ ರೇಡ್ ನಡೆದಿದ್ದು, ಉದ್ಯಮಿಗಳು ಹಾಗೂ ಜ್ಯುವೆಲರಿ ಶಾಪ್‌ ಮೇಲೆ ಐಟಿ ದಾಳಿಯಾಗಿದೆ. ಸರ್ಜಾಪುರ ಬಳಿಯ ಮುಳ್ಳೂರು , ಆರ್ ಎಂ.ವಿ ಎಕ್ಸ್ಟೆನ್ಷನ್ , ಬಿಇಎಲ್ ಸರ್ಕಲ್ , ಮಲ್ಲೇಶ್ವರಂ, ಡಾಲರ್ಸ್ ಕಾಲೋನಿ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ದಾಳಿಯಾಗಿದೆ.

ತೆರಿಗೆ ವಂಚಕರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಮತ್ತಿಕೆರೆ, ಡಾರ್ಲಸ್ಸ್ ಕಾಲೋನಿ ಸೇರಿದಂತೆ ಹಲವೆಡೆ ದಾಳಿಯಾಗಿದೆ. ಬೆಳ್ಳಂಬೆಳಗ್ಗೆ ಏಕಕಾಲಕ್ಕೆ ಈ ದಾಳಿ ನಡೆದಿದೆ. ರಾಜಸ್ತಾನದ ಚುನಾವಣೆಗೂ ಬೆಂಗಳೂರು ಐಟಿ ದಾಳಿಗೂ ಸಂಬಂಧ ಇದೆ ಎಂದು ತಿಳಿದು ಬಂದಿದೆ. ರಾಜಸ್ತಾನ ಮೂಲದವರು ಬೆಂಗಳೂರಿನಲ್ಲಿ  ಬಂಗಾರ ಸೇರಿ ಇತರ ಉದ್ಯಮದಲ್ಲಿ ತೊಡಗಿದ್ದಾರೆ. ಹೀಗಾಗಿ ಹವಾಲ ಹಣದ ರವಾನೆಯಾಗುವ ಬಗ್ಗೆ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.

Latest Videos

undefined

ಬೆಂಗಳೂರು ಕಂಬಳಕ್ಕೆ ಸರ್ಕಾರದಿಂದ 1 ಕೋಟಿ ಸಹಾಯಧನ:

ಕಳೆದ ವಾರ ತೆರಿಗೆ ವಂಚಿಸಿದ್ದ ಚಿನ್ನದ ವ್ಯಾಪಾರಿಗಳನ್ನ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಿತ್ತು. ದಾಳಿ ವೇಳೆ ಹಲವಾರು ದಾಖಲಾತಿ ಪತ್ತೆ ಹಿನ್ನೆಲೆ ದಾಳಿ ವೇಳೆ ಸಿಕ್ಕ ದಾಖಲಾತಿಗಳ ಆಧಾರದ ಮೇಲೆ ಮತ್ತೆ ಇಂದು ದಾಳಿ ನಡೆದಿದೆ. ಸರ್ಜಾಪುರ  ರಸ್ತೆ. ಮಲ್ಲೇಶ್ವರ. ಸದಾಶಿವ ನಗರ ಸೇರಿ ಹಲವಾರು ಕಡೆ ಐಟಿ ದಾಳಿ ನಡೆಸಿದೆ.

ಮಂಡ್ಯ ಸ್ಪರ್ಧೆ ಸದ್ಯಕ್ಕೆ ಸಸ್ಪೆನ್ಸ್‌, ಥ್ರಿಲ್ಲರ್: ಸಂಸದೆ ಸುಮಲತಾ

ಕಾಫಿ ಬೋರ್ಡ್ ನಿರ್ದೇಶಕ ಚಂದ್ರಶೇಖರ್  ಮನೆ ಮೇಲೂ ದಾಳಿ ನಡೆದಿದ್ದು,  ಮತ್ತಿಕೆರೆ ಬಳಿ  ಇರೋ ಚಂದ್ರಶೇಖರ್ ಮನೆ ಶೋಧ ನಡೆಸಲಾಗುತ್ತಿದೆ. ಆರು ಮಂದಿ ಐಟಿ ಅಧಿಕಾರಿಗಳು ಚಂದ್ರಶೇಖರ್ ಮನೆಯಲ್ಲಿ ಶೋಧ ನಡೆಸುತ್ತಿದ್ದಾರೆ. ಬೆಳಗ್ಗಿನ ಜಾವ 5 ಗಂಟೆಯಿಂದಲೇ ರೇಡ್ ಆರಂಭಿಸಿರುವ ಅಧಿಕಾರಿಗಳು. ಇತ್ತೀಚೆಗಷ್ಟೇ ಹೊಸ ಬಾಡಿಗೆ ಮನೆಗೆ  ಬಂದಿದ್ದ ಬಿಲ್ಡರ್ ಚಂದ್ರಶೇಖರ್. 

click me!