ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ ಒಡೆತನದ ಖಾಸಗಿ ಬ್ಯಾಂಕ್ ಮೇಲೆ ಗೋವಾ ವಲಯದ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ದಿನ ಶೋಧ ಕಾರ್ಯ ನಡೆದಿದೆ.
ಬೆಳಗಾವಿ (ಏ.1): ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ ಒಡೆತನದ ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಮೇಲೆ ಮಾರ್ಚ್ 31ರಂದು ಐಟಿ ದಾಳಿ ನಡೆದಿದ್ದು, ರಾತ್ರಿವರೆಗೂ ಶೋಧ ಕಾರ್ಯ ಮುಂದುರೆದಿತ್ತು. ಇಂದು ಕೂಡ ಗೋವಾ ವಲಯದ ಐಟಿ ಅಧಿಕಾರಿಗಳಿಂದ ತಪಾಸಣೆ ಮುಂದುವರೆದಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ದಲ್ಲಿರುವ ಸಹಕಾರಿ ಬ್ಯಾಂಕ್ ನಲ್ಲಿ ಸ್ಥಳೀಯ ಪೊಲೀಸರ ನೆರವು ಪಡೆದು ಸುಮಾರು 15 ಜನ ಅಧಿಕಾರಿಗಳಿಂದ ಎರಡನೇ ದಿನವೂ ತಪಾಸಣೆ ನಡೆದಿದೆ. ಲಾಕರ್ ಹೊಂದಿರುವ ಗ್ರಾಹಕರ ಬಗ್ಗೆ ವಿಚಾರಣೆ ನಡೆದಿದೆ.
ಕಿತ್ತೂರು ರಾಣಿ ಚೆನ್ನಮ್ಮ ಅರ್ಬನ್ ಕ್ರೆಡಿಟ್ ಸೌಹಾರ್ದ ಕ್ರೆಡಿಟ್ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಿ.ಎಸ್. ಸಾಧುನವರ, ಪುತ್ರ ಕಿರಣ್ ಸಾಧುನವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಬ್ಯಾಂಕಿಗೆ ಕರೆಯಿಸಿ ಎರಡು ಗಂಟೆಗಳಿಂದ ಗೋವಾ ವಲಯದ ಐಟಿ ಅಧಿಕಾರಿಗಳು ಕಠಿಣ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. 262 ಗ್ರಾಹಕರು ಬ್ಯಾಂಕ್‌ನಲ್ಲಿ ಹೊಂದಿರುವ ಲಾಕರ್‌ಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಸಂಜೆವರೆಗೂ ಐಟಿ ಅಧಿಕಾರಿಗಳು ವಿಚಾರಣೆ ಮುಂದುವರೆದಿದೆ.
ಮಾಡಾಳು ವಿರುಪಾಕ್ಷಪ್ಪ ಮನೆಯಲ್ಲಿ ಸಿಕ್ಕಿದ್ದು ಚುನಾವಣಾ ಹಣ!
ವಿಎಸ್ ಸಾಧುನವರ್ ಅವರು ಬೆಳಗಾವಿ ಜಿಲ್ಲಾ ಕಾಂಗ್ರೆಸ್ ನಾಯಕರಾಗಿದ್ದು, 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆಯಿಂದ ಸ್ಪರ್ಧಿಸಿದ್ದಾರೆ. ಆದರೆ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸುರೇಶ್ ಅಂಗಡಿ ವಿರುದ್ಧ 2 ಲಕ್ಷ ಮತಗಳ ಭಾರಿ ಅಂತರದಿಂದ ಪರಾಭವಗೊಂಡರು. ವರದಿಗಳ ಪ್ರಕಾರ, ಅವರು ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿಯ ಮಂಡಳಿಯ ಸದಸ್ಯರೂ ಆಗಿದ್ದಾರೆ.
ರೈತರ ಮೇಲೆ ದಾಳಿ ಮಾಡಿದ ಅಧಿಕಾರಿಗಳ ವಜಾ ಆಗ್ರಹ
ಹಲವು ಕಡೆ ಐಟಿ ಇಲಾಖೆ ದಾಳಿ
ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರು ನಗರದಲ್ಲಿ ಆದಾಯ ತೆರಿಗೆ ಇಲಾಖೆ ಹಲವು ಬಾರಿ ದಾಳಿ ನಡೆಸಿದೆ. ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಶೋಭಾ ಡೆವಲಪರ್ಸ್ ಮೇಲೂ ಮಾರ್ಚ್‌ನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೆಂಗಳೂರು ಮತ್ತು ಚೆನ್ನೈನ 50 ಕ್ಕೂ ಹೆಚ್ಚು ಐಟಿ ಅಧಿಕಾರಿಗಳು ಈ ದಾಳಿ ನಡೆಸಿ ಕಂಪನಿಯ ನಗದು ಖಾತೆಗಳು ಮತ್ತು ಸಂಬಂಧಿತ ದಾಖಲೆಗಳನ್ನು ತನಿಖೆ ಮಾಡಿದ್ದಾರೆ.