ಅಯೋಧ್ಯೆ ರಾಮಮಂದಿರ ಉದ್ಘಾಟನೆ: ತುಮಕೂರು ಜಿಲ್ಲೆಯ ಮೂವರು ಸ್ವಾಮೀಜಿಗಳಿಗೆ ಆಹ್ವಾನ!

Published : Jan 06, 2024, 04:14 PM IST
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ತುಮಕೂರು ಜಿಲ್ಲೆಯ ಮೂವರು ಸ್ವಾಮೀಜಿಗಳಿಗೆ ಆಹ್ವಾನ!

ಸಾರಾಂಶ

ಜನವರಿ 22ರಂದು ಉದ್ಘಾಟನೆಯಾಗುತ್ತಿರುವ  ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಮಕೂರಿನ ಮೂವರು ಮಠಾಧೀಶರಿಗೆ ಆಹ್ವಾನ ಬಂದಿದೆ. 

ತುಮಕೂರು (ಜ.06): ಜನವರಿ 22ರಂದು ಉದ್ಘಾಟನೆಯಾಗುತ್ತಿರುವ  ಅಯೋಧ್ಯೆ ಶ್ರೀರಾಮ ಮಂದಿರದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತುಮಕೂರಿನ ಮೂವರು ಮಠಾಧೀಶರಿಗೆ ಆಹ್ವಾನ ಬಂದಿದೆ. ಸಿದ್ದಗಂಗಾ ಮಠ ಸಿದ್ದಲಿಂಗ ಸ್ವಾಮೀಜಿ, ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರ ಬಸವ ಸ್ವಾಮೀಜಿ ಹಾಗೂ  ಗುಬ್ಬಿ ತಾಲೂಕಿನ ಗೊಲ್ಲಹಳ್ಳಿ ಯ ಸಿದ್ದಲಿಂಗೇಶ್ವರ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಗೆ ಆಹ್ವಾನ ಬಂದಿದೆ.

ಶ್ರೀರಾಮ ವಿಗ್ರಹದ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.‌ ಮಠಗಳಿಗೆ ಜನ್ಮಭೂಮಿ ತೀರ್ಥ ಕ್ಷೇತ್ರದ ಹೆಸರಿನಲ್ಲಿ ಬಂದ ಆಹ್ವಾನ ಪತ್ರಕೆ ಅಂಚೆ ಮೂಲಕ‌ ತಲುಪಿದೆ. ಆದರೆ 21ನೇ ತಾರೀಕು ಸಿದ್ದಗಂಗಾ ಮಠದಲ್ಲಿ ಶಿವೈಕ್ಯ ಶಿವಕುಮಾರಸ್ವಾಮೀಜಿಗಳ   5ನೇ  ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವಿರುವುದರಿಂದ ಸಿದ್ದಲಿಂಗಸ್ವಾಮೀಜಿಗಳು ಅಯೋಧ್ಯೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ, ಉಳಿದಂತೆ ಬೆಳ್ಳಾವಿ ಕಾರದ ಮಠದ ವೀರಭದ್ರ ಸ್ವಾಮೀಜಿ ಹಾಗೂ  ಗುಬ್ಬಿ ಗೊಲ್ಲಹಳ್ಳಿ ಸಿದ್ದಲಿಂಗೇಶ್ವರ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ ಅಯೋಧ್ಯೆಗೆ ತೆರಳಲಿದ್ದಾರೆ.

ದಲಿತರ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಿದ ಪೇಜಾವರ ಶ್ರೀ: ಇಲ್ಲಿನ ರಾಣಿ ಬಗೀಚ್ ಪ್ರದೇಶದ ದಲಿತರ ಮನೆಗಳಿಗೆ ತೆರಳಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಯೋಧ್ಯೆಯಿಂದ ಬಂದಿರುವ ಮಂತ್ರಾಕ್ಷತೆ ವಿತರಿಸಿದರು. ರಾಮಮಂದಿರ ಉದ್ಘಾಟನೆಗೆ ದೇಶ ಸಾಕ್ಷಿಯಾಗಲಿದೆ. ಎಲ್ಲೆಡೆ ಭಕ್ತಿಯ ವಾತಾವರಣ ನಿರ್ಮಾಣವಾಗಿದೆ. ನೂರಾರು ವರ್ಷಗಳ ಕನಸು ಈಗ ನನಸಾಗುತ್ತಿದೆ. ಎಲ್ಲರೂ ಈ ಶುಭ ಘಳಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಭದ್ರಾ ಎಡದಂಡ ನಾಲೆಗೆ ಜ.10, ಬಲದಂಡ ನಾಲೆಗೆ ಜ.20 ರಿಂದ ನೀರು: ಸಚಿವ ಮಧು ಬಂಗಾರಪ್ಪ

ಪಾದ ಪೂಜೆ: ಇದೇ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮಾಜಿ ಉಪ ಮೇಯರ್ ಗೋಪಾಲ ಘಟಕಾಂಬಳೆ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಗೋಪಾಲ ಘಟಕಾಂಬಳೆ ಪರಿವಾರದ ಸದಸ್ಯರು ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು. ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಪೂಜೆಯಾದ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಭಕ್ತರಿಗೆ ನೀಡಿದರು. ರಾಮಮಂದಿರ ದೇಶದ ಅಸ್ಮಿತೆ ಹೆಚ್ಚಿಸಿದೆ. ನಮ್ಮತನ ಇಮ್ಮಡಿಗೊಳಿಸಿದೆ. ದೇಶದ ಜನ ಪರಸ್ಪರ ಸೌಹಾರ್ದತೆಯಿಂದ ಇರುವಂತಾಗಬೇಕು. ಹಿಂದು ಧರ್ಮದ ಹಿರಿಮೆ ಹೆಚ್ಚಬೇಕು ಎಂದು ಹೇಳಿದರು.

PREV
Read more Articles on
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!