ಕಸ ವಿಲೇವಾರಿ ವಿಚಾರದಲ್ಲೂ ಪಾಲಿಟಿಕ್ಸ್: ಬೊಂಬೆನಗರಿ ಚನ್ನಪಟ್ಟಣದಲ್ಲಿ ಎದುರಾಯ್ತು ಕಸದ ಸಮಸ್ಯೆ!

By Govindaraj S  |  First Published Feb 9, 2023, 8:05 PM IST

ಚುನಾವಣೆ ಸಮೀಪಿಸುತ್ತಿದ್ದಂತೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ನಾಯಕರ ವಾಕ್ಸಮರ, ಕಾಮಗಾರಿ ಶಂಕುಸ್ಥಾಪನೆ ವಿಚಾರದಲ್ಲಿ ಜಟಾಪಟಿ, ಗಲಾಟೆ-ಗದ್ದಲ ನಡೆಯುತ್ತಲೇ ಇದೆ. ಇದೀಗ ನಗರದ ಕಸ ವಿಲೇವಾರಿ ಮಾಡುವ ವಿಚಾರದಲ್ಲೂ ಪಾಲಿಟಿಕ್ಸ್ ಎಂಟ್ರಿ ಆಗಿದ್ದು, ಕಳೆದ ಹತ್ತು ದಿನಗಳಿಂದ ನಗರದಲ್ಲಿ ಕಸ ವಿಲೇವಾರಿ ಆಗಿಲ್ಲ.


ವರದಿ: ಜಗದೀಶ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ಚನ್ನಪಟ್ಟಣ (ಫೆ.09): ಚುನಾವಣೆ ಸಮೀಪಿಸುತ್ತಿದ್ದಂತೆ ಬೊಂಬೆನಗರಿ ಚನ್ನಪಟ್ಟಣದಲ್ಲಿ ನಾಯಕರ ವಾಕ್ಸಮರ, ಕಾಮಗಾರಿ ಶಂಕುಸ್ಥಾಪನೆ ವಿಚಾರದಲ್ಲಿ ಜಟಾಪಟಿ, ಗಲಾಟೆ-ಗದ್ದಲ ನಡೆಯುತ್ತಲೇ ಇದೆ. ಇದೀಗ ನಗರದ ಕಸ ವಿಲೇವಾರಿ ಮಾಡುವ ವಿಚಾರದಲ್ಲೂ ಪಾಲಿಟಿಕ್ಸ್ ಎಂಟ್ರಿ ಆಗಿದ್ದು, ಕಳೆದ ಹತ್ತು ದಿನಗಳಿಂದ ನಗರದಲ್ಲಿ ಕಸ ವಿಲೇವಾರಿ ಆಗಿಲ್ಲ. ನಗರಸಭೆ ಅಧ್ಯಕ್ಷ ಹಾಗೂ ಪೌರಾಯುಕ್ತರ ಮುಸುಕಿನ ಮುದ್ದಾಟಕ್ಕೆ ಚಂದದ ನಗರ ಗಬ್ಬೆದ್ದು ನಾರುತ್ತಿದೆ. ಈ ಮಧ್ಯೆ ಮಾಜಿ ಸಚಿವರ ಒತ್ತಡಕ್ಕೆ ಮಣಿದು, ಕುಮಾರಸ್ವಾಮಿ ಅವರಿಗೆ ಮಸಿ ಬಳಿಯಲು ಕಸ ವಿಲೇವಾರಿ ಮಾಡುತ್ತಿದ್ದವೆಂದು ನಗರಸಭೆ ಅಧ್ಯಕ್ಷರು, ಪೌರಾಯುಕ್ತರ ವಿರುದ್ದ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ಇಬ್ಬರು ಮದಗಜಗಳ ಕಾಳಗದಲ್ಲಿ ಚಂದದನಗರ, ಗಬ್ಬು ನಾರುತ್ತಿದೆ.

Tap to resize

Latest Videos

ಹೌದು! ಬೊಂಬೆನಗರಿ ಚನ್ನಪಟ್ಟಣ. ಮುದ್ದಾದ ಬೊಂಬೆಗಳಿಗೆ ವಿಶ್ವಮಟ್ಟದಲ್ಲಿ ಖ್ಯಾತಿಗಳಿಸಿದೆ. ಅಷ್ಟೇ ಅಲ್ಲದೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಪ್ರತಿನಿಧಿಸುವ ಕ್ಷೇತ್ರ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರನ್ನ ಐದು ಬಾರಿ ವಿಧಾನಸಭೆಗೆ ಕಳುಹಿಸಿರುವ ನಗರ. ಆದರೆ ಇದೇ ಚನ್ನಪಟ್ಟಣ ನಗರ ಕಳೆದ ಹತ್ತು ದಿನಗಳಿಂದ ಗಬ್ಬೆದ್ದು ನಾರುತ್ತಿದೆ. ಚಂದದ ನಗರದ ಟಾಯಿಸ್ ಸಿಟಿ ಇದೀಗ ಗಾರ್ಬೆಜ್ ಸಿಟಿಯಾಗಿ ಮಾರ್ಪಟ್ಟಿದೆ. ನಗರದ ಜನರು ಮೂಗು ಮುಚ್ಚಿಕೊಂಡು ರಸ್ತೆಯಲ್ಲಿ ತಿರುಗಾಡುವ ಪರಿಸ್ಥಿತಿ. ಕಸವನ್ನ ವಿಲೇವಾರಿ ಮಾಡಲು ಸೂಕ್ತ ಜಾಗ ಸಿಗದೇ ಹಿನ್ನೆಲೆಯಲ್ಲಿ ಹತ್ತು ದಿನಗಳಿಂದ ಕಸವನ್ನ ವಿಲೇವಾರಿ ಮಾಡಿಲ್ಲ. 

ಯಕ್ಷಗಾನ ಸಮ್ಮೇಳನಕ್ಕೆ ಆಗಮಿಸುವ ಸರ್ವರಿಗೂ ಮೂಲಸೌಕರ್ಯ ಕೊರತೆಯಾಗದಂತೆ ಕ್ರಮ ವಹಿಸಿ: ಸಚಿವ ಸುನೀಲ್ ಕುಮಾರ್

ಇದೇ ವಿಚಾರವನ್ನ ಇಟ್ಟುಕೊಂಡು ಬಿಜೆಪಿ ಕಾರ್ಯಕರ್ತರು, ನಗರಸಭೆಯ ಚುಕ್ಕಾಣಿ ಹಿಡಿದಿರುವ ಜೆಡಿಎಸ್ ಹಾಗೂ ಸ್ಥಳೀಯ ಶಾಸಕ ಕುಮಾರಸ್ವಾಮಿ ವಿರುದ್ದ ಕೂಡ ನಗರಸಭೆ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಈ ಮಧ್ಯೆ ಈ ವಿಚಾರ ರಾಜಕೀಯವಾಗಿ ತಿರುಗಿಕೊಂಡಿದ್ದು, ಕುಮಾರಸ್ವಾಮಿ ಅವರಿಗೆ ಚುತಿ ತರಲು ಬಿಜೆಪಿ ಎಮ್ ಎಲ್ ಸಿ ಸಿಪಿ ಯೋಗೇಶ್ವರ್, ಷಡ್ಯಂತ್ರ ಮಾಡಿ, ನಗರಸಭೆ ಪೌರಾಯುಕ್ತರ ಮೇಲೆ ಒತ್ತಡ ತಂದು ಕಸ ವಿಲೇವಾರಿ ಮಾಡದಂತೆ ಮಾಡಿದ್ದಾರೆ ಎಂದು ನಗರಸಭೆ ಅಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ. ಅಂದಹಾಗೆ ಚನ್ನಪಟ್ಟಣ ನಗರ ವ್ಯಾಪ್ತಿಯ ಕಸವನ್ನ ವೈಜ್ಷಾನಿಕವಾಗಿ ವಿಲೇವಾರಿ ಮಾಡಲು ಇದುವರೆಗೂ ಯಾವುದೇ ಜಾಗವಿಲ್ಲ. 

ಈ ಹಿಂದೆ ಗುರುತಿಸಲಾಗಿದ್ದ ಜಾಗದಲ್ಲಿ ಕಸವಿಲೇವಾರಿಗೆ ಜನರ ವಿರೋಧ ವ್ಯಕ್ತಪಡಿಸಿದ್ರು. ಹೀಗಾಗಿ ಕಳೆದ ಹಲವು ವರ್ಷಗಳಿಂದ ಕೆಲ ರೈತರ ಒಪ್ಪಿಗೆ ಪಡೆದು ಅವರ ಜಮೀನಿನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಆದರೆ ಕಳೆದ ಹತ್ತು ದಿನಗಳಿಂದ ಕಸವನ್ನ ವಿಲೇವಾರಿ ಮಾಡಿಲ್ಲ. ಕೆಲ ರೈತರು ಒಪ್ಪಿಲ್ಲ ಎಂಬ ವಾದ ನಗರಸಭೆ ಅಧಿಕಾರಿಗಳದ್ದು. ಜೊತೆಗೆ ನಗರಸಭೆ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಸಹಾ ಕಸವನ್ನ ವಿಲೇವಾರಿ ಮಾಡಲು ಆಗಿಲ್ಲ. ಆದರೆ ಕಸ ವಿಲೇವಾರಿ ಮಾಡದ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ ಎಂಬ ಚರ್ಚೆ ಮಾತ್ರ ಚನ್ನಪಟ್ಟಣದಲ್ಲಿ ಜೋರಾಗಿ ನಡೆಯುತ್ತಿದೆ. 

ಏರ್ಪೋರ್ಟ್ ಪ್ರಯಾಣಿಕರೇ ಈ ಸ್ಟೋರಿ ಓದಲೇಬೇಕು: ಫೆಬ್ರವರಿ 17ರವರೆಗೆ ಏರ್ ಶೋ ಹಿನ್ನೆಲೆ ಸಂಚಾರ ದಟ್ಟಣೆ

ಇನ್ನು ಈ ಬಗ್ಗೆ ನಗರಸಭೆ ಪೌರಾಯುಕ್ತರನ್ನ ಕೇಳಿದ್ರೆ, ನನ್ನ ಮೇಲೆ ಯಾವುದೇ ರಾಜಕೀಯ ವ್ಯಕ್ತಿಗಳು ಒತ್ತಡ ಹೇರಿಲ್ಲ. ಯಾವ ರೀತಿಯಲ್ಲಿ ಅಧ್ಯಕ್ಷರು ಹೇಳಿದ್ದಾರೋ ಗೊತ್ತಿಲ್ಲ. ಕಸದ ಸಮಸ್ಯೆ ಬಗ್ಗೆ ಒಂದು ದಿನವೂ ಕೂಡ ಮಾತನಾಡಿಲ್ಲ. ಒಂದು ಕರೆ ಕೂಡ ಮಾಡಿಲ್ಲ ಎನ್ನುತ್ತಿದ್ದಾರೆ. ಇನ್ನು ಇದೇ ವಿಚಾರದಲ್ಲಿ ಮಾಜಿ ಸಿಎಂ ಹೆಚ್ ಡಿ ಕೆ ವಿರುದ್ದ, ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಸಹಾ ವಾಗ್ದಾಳಿ ನಡೆಸಿದ್ದು, ಕಸದ ಸಮಸ್ಯೆ ಬಗೆಹರಿಸುವುದು ಶಾಸಕರ ಕೆಲಸ. ನಾವೇನಾದರೂ ಕೆಲಸ ಮಾಡಲು ಹೋದರೇ ಕುಮಾರಸ್ವಾಮಿ ಅಡ್ಡಗಾಲು ಹಾಕುತ್ತಾರೆ. ಜನ ಅನುಭವಿಸಬೇಕು ಅಷ್ಟೇ ಅನ್ನುತ್ತಿದ್ದಾರೆ. ಒಟ್ಟಾರೆ ಅಧಿಕಾರಿಗಳು ಹಾಗು ಜನಪ್ರತಿನಿಧಿಗಳ ಪ್ರತಿಷ್ಠೆಗೆ ಕಸ ವಿಲೇವಾರಿ ಆಗದೇ ನಗರದ ಜನ ತೊಂದರೆ ಅನುಭವಿಸುತ್ತಿದ್ದಾರೆ.

click me!