ಕೊಡಗಿನಲ್ಲಿ ರೆಡ್ ಅಲರ್ಟ್, ಮುಂದಿನ ಮೂರು ದಿನ ಭಾರೀ ಮಳೆ

Published : Jul 22, 2019, 08:40 PM ISTUpdated : Jul 22, 2019, 08:42 PM IST
ಕೊಡಗಿನಲ್ಲಿ ರೆಡ್ ಅಲರ್ಟ್, ಮುಂದಿನ ಮೂರು ದಿನ ಭಾರೀ ಮಳೆ

ಸಾರಾಂಶ

ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಈ ನಡುವೆ ಕೊಡಗಿನ ಜನರಿಗೆ ಮತ್ತೊಂದು ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಕೊಡಗು[ಜು. 22]  ಕೊಡಗು ಜಿಲ್ಲೆಯಾದ್ಯಂತ  ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ  ಜುಲೈ 22 ರಿಂದ 24 ರವರೆಗೆ ಕೊಡಗಿನಲ್ಲಿ ರೆಡ್ ಅಲರ್ಟ್  ಘೋಷಣೆ ಮಾಡಿದೆ.

ಕೊಡಗಿನ ಮಹಾ ಪ್ರವಾಹಕ್ಕೆ ಕಾರಣ ಪತ್ತೆ

ಮುಂದಿನ ದಿನಗಳಲ್ಲಿ 204.4 ಮಿಮೀ ಮಳೆ ಬೀಳುವ ಸಾಧ್ಯತೆ ಇದೆ. ಸಾರ್ವಜನಿಕರು, ಪ್ರವಾಸಿಗರು ಎಚ್ಚರದಿಂದ ಇರಬೇಕುಎಂದು ತಿಳಿಸಲಾಗಿದೆ.  ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಸೂಚನೆ. ಆರೆಂಜ್ ಅಲರ್ಟ್ ನಡುವೆ ಇದೀಗ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪ್ರಾಕೃತಿಕ ವಿಕೋಪ ಸಮಸ್ಯೆಗಳಿಗೆ ಸಹಾಯವಾಣಿ ಟೋಲ್ ಫ್ರೀ  08272 - 221077 ಸಂಪರ್ಕ ಮಾಡಲು ಕೇಳಿಕೊಳ್ಳಲಾಗಿದೆ.

ಕಳೆದ ವರ್ಷ ಕೊಡಗಿನಲ್ಲಾಗಿದ್ದ ಭೀಕರ ಪ್ರವಾಹ ಅನೇಕ ಜನರ ಬದುಕನ್ನು ಕಸಿದುಕೊಂಡಿತ್ತು. ಇಡೀ ರಾಜ್ಯವೇ ಕೊಡಗು ಜನರ  ನೆರವಿಗೆ ನಿಂತಿತ್ತು.

 

PREV
click me!

Recommended Stories

ಮೈಸೂರು, ಮಂಡ್ಯದಲ್ಲಿ ಬಾಲ್ಯ ವಿವಾಹಕ್ಕೆ ಗಣನೀಯ ಇಳಿಕೆ, ಸರ್ಕಾರದಿಂದ ಸಿಕ್ಕಿತು ನೆಮ್ಮದಿಯ ಸುದ್ದಿ
ಬೆಂಗಳೂರು: ತಿಂಡಿ ಎಸೆದು ಪಾತ್ರೆಯಿಂದ ಹಲ್ಲೆ ಮಾಡಿದ ಪುಂಡರಿಗೆ ಕುದಿಯುವ ಎಣ್ಣೆ ಎರಚಿದ ವ್ಯಾಪಾರಿ!