ಶಾಸಕ ಸ್ಥಾನವನ್ನು ಕಳೆದುಕೊಳ್ಳುತ್ತಾರಾ ಮಾಜಿ ಸಚಿವ ಎಚ್.ಡಿ.ರೇವಣ್ಣ?

By Kannadaprabha NewsFirst Published Sep 12, 2019, 1:37 PM IST
Highlights

ರೇವಣ್ಣ ವಿರುದ್ಧ ಕಳೆದ ಲೋಕಸಭಾ ಚುನಾವಣೆ ವೇಳೆ ಮತಗಟ್ಟೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಇದ್ದರು ಎನ್ನುವ ಆರೋಪ ಎದುರಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲು ದೂರುದಾರರೋರ್ವರು ಆಗ್ರಹಿಸಿದ್ದಾರೆ. 

ಹಾಸನ [ಸೆ.12]: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ದೇವರಾಜೇಗೌಡ ಎಂಬುವವರು ಆಗ್ರಹಿಸಿದ್ದಾರೆ

ಈ ಹಿಂದೆ ನಡೆದ ಲೋಕಸಭಾ ಚುನಾವಣೆ ಮತದಾನದ ವೇಳೆ 26 ನಿಮಿಷಗಳ ಕಾಲ ಮತಗಟ್ಟೆಯಲ್ಲೇ ಇದ್ದರು ಎಂದು ದೇವರಾಜೇಗೌಡ ದೂರು ನೀಡಿದ್ದು, ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.

ಈ ಬಗ್ಗೆ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದ್ದು, ಯಾಕೆ ಕ್ರಮ ಕೈಗೊಳ್ಳಿದ್ದವೆಂದು ಕೇಂದ್ರ ಚುನಾವಣಾ ಆಯೋಗದ ಬಳಿ ಪ್ರಶ್ನೆ ಮಾಡಿದಾಗ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದ್ದಾಗಿ ತಿಳಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಆಗಿಲ್ಲ .ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದ್ದಾಗಿ ಕೇಂದ್ರ ಚುನಾವಣಾ ಆಯೋಗ ಆದೇಶ ಪತ್ರವನ್ನೂ ನೀಡಿದ್ದರು. ಅದನ್ನು ತಂದು ರಾಜ್ಯ ಚುನಾವಣಾ ಆಯೋಗದಲ್ಲಿ ವಿಚಾರಿಸಿದಾಗ ಅಲ್ಲಿಂದ ಜಿಲ್ಲಾ ಚುನಾವಣಾ ಆಯೋಗಕ್ಕೆ ಕಳಿಸಿದ್ದರು.

ಆದರೆ ಅಧಿಕಾರಿ ಅಕ್ರಂ ಪಾಷಾ ಬೇಕೆಂದೇ ದಾಖಲೆಗಳನ್ನು ಕಳಿಸಿಕೊಡದೇ ಮುಚ್ಚಿಟ್ಟದರು. ಇದೀಗ ಹೆಚ್ಚುವರು ಜಿಲ್ಲಾಧಿಕಾರಿಯವರನ್ನು ಕರೆಸಿ ಚುನಾವಣಾ ಆಯೋಗಕ್ಕೆ ಫೈಲ್ ಮತ್ತೆ ಕಳುಹಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ವಿಶ್ವಾಸವಿದೆ ಎಂದು ದೂರುದಾರ ರಾಜೇಗೌಡ ಹೇಳಿದರು.  

click me!