ಹೆಚ್ಚಿನ ಭಕ್ತರು ಆಗಮಿಸುವುದರಿಂದ ವಸತಿ ಗೃಹದ ಸಮಸ್ಯೆಯಿದೆ. ಇದನ್ನರಿತ ಸ್ಥಳೀಯರು ಗ್ರಾ.ಪಂ ಹಾಗೂ ಮಲೆ ಮಹದೇಶ್ವರ ಪ್ರಾಧಿಕಾರ ಅನುಮತಿಯಿಲ್ಲದೇ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಗಿದ್ದಾರೆ. ಲಾಡ್ಜ್ ಗಳ ನಿರ್ಮಿಸಿ ಬಾಡಿಗೆ ಕೊಡಲೂ ಮುಂದಾಗಿದ್ದಾರೆ. ಮಹದೇಶ್ವರ ಬೆಟ್ಟ ಇದರಿಂದ ಸಂಪೂರ್ಣ ಕಾಂಕ್ರೀಟ್ ಕರಣವಾಗ್ತಿದೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ.
ವರದಿ - ಪುಟ್ಟರಾಜು.ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ
ಚಾಮರಾಜನಗರ(ಜ.06): ಇದು ಭಕ್ತರ ಆರಾಧ್ಯ ಸನ್ನಿಧಿ. ದೇವರ ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನವಷ್ಟೇ ಸುತ್ತಮುತ್ತಲಿನ ಪರಿಸರ ಭಕ್ತರ ಮನಸೂರೆಗೊಳ್ಳುತ್ತೆ. ಆದ್ರೆ ಇದೀಗಾ ಈ ಹಸಿರಿನಿಂದ ಕೂಡಿದ್ದ ಬೆಟ್ಟ ಕಾಂಕ್ರೀಟ್ ಕರಣವಾಗ್ತಿದೆ ಎಂಬ ಆರೋಪವಿದೆ. ಅನುಮತಿಯಿಲ್ಲದೇ ಕಟ್ಟಡ, ಲಾಡ್ಜ್ ಗಳು ತಲೆ ಎತ್ತುತ್ತಿದ್ರು ಕೂಡ ಗ್ರಾ.ಪಂ. ಹಾಗೂ ಪ್ರಾಧಿಕಾರ ಕಣ್ಣಿದ್ದು ಕುರುಡಾಗಿದ್ದಾರೆಂಬ ಆರೋಪ ಮಾಡ್ತಿದ್ದಾರೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..
undefined
ಇದು ಇತಿಹಾಸ ಪ್ರಸಿದ್ಧ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಸನ್ನಿಧಿ. ಒಂದು ವರ್ಷದಲ್ಲೆ ಮೂರು ಬಾರಿ ರಥೋತ್ಸವ ನಡೆಯುವ ಪುಣ್ಯ ಕ್ಷೇತ್ರ. ಶಿವರಾತ್ರಿ, ಯುಗಾದಿ ಹಾಗು ದೀಪಾವಳಿ ಹಬ್ಬಗಳಲ್ಲಿ ಮೂರು ಬಾರಿ ರಥೋತ್ಸವ ನಡೆಯಲಿದ್ದು ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಪ್ರತಿ ದಿನ ರಾಜ್ಯ ಹಾಗು ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಬರುತ್ತಿದ್ದು ಉಳಿದು ಕೊಳ್ಳಲೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಈಗಾಗ್ಲೇ ವಸತಿ ಗೃಹಗಳ ವ್ಯವಸ್ಥೆ ಮಾಡಿದ್ದಾರೆ.
ಚಾಮರಾಜನಗರ: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ, ಆರೋಪಿ ಬಂಧನ
ಆದ್ರೆ ಹೆಚ್ಚಿನ ಭಕ್ತರು ಆಗಮಿಸುವುದರಿಂದ ವಸತಿ ಗೃಹದ ಸಮಸ್ಯೆಯಿದೆ. ಇದನ್ನರಿತ ಸ್ಥಳೀಯರು ಗ್ರಾ.ಪಂ ಹಾಗೂ ಮಲೆ ಮಹದೇಶ್ವರ ಪ್ರಾಧಿಕಾರ ಅನುಮತಿಯಿಲ್ಲದೇ ಅಕ್ರಮವಾಗಿ ಕಟ್ಟಡ ನಿರ್ಮಿಸಲು ಮುಂದಗಿದ್ದಾರೆ. ಲಾಡ್ಜ್ ಗಳ ನಿರ್ಮಿಸಿ ಬಾಡಿಗೆ ಕೊಡಲೂ ಮುಂದಾಗಿದ್ದಾರೆ. ಮಹದೇಶ್ವರ ಬೆಟ್ಟ ಇದರಿಂದ ಸಂಪೂರ್ಣ ಕಾಂಕ್ರೀಟ್ ಕರಣವಾಗ್ತಿದೆ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಜೊತೆಗೆ ಸುಂದರವಾದ ಪರಿಸರವೂ ಕೂಡ ಕಣ್ಮರೆಯಾಗ್ತಿದೆ. ಅಧಿಕಾರಿಗಳು ಅನುಮತಿಯಿಲ್ಲದೇ ಅಕ್ರಮವಾಗಿ ತಲೆ ಎತ್ತುತ್ತಿರುವ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ ಹಾಕಲೂ ಮನವಿ ಮಾಡ್ತಿದ್ದಾರೆ.
ಇನ್ನೂ ಹಿಂದೆಯೇ ಇಲ್ಲಿ ಗ್ರಾ.ಪಂ.ನಿಂದ 21 ಕ್ಕೂ ಹೆಚ್ಚು ಖಾಸಗೀ ವಸತಿ ಗೃಹಗಳಿಗೆ ಗ್ರಾ.ಪಂ. ನಿಂದ ಅನುಮತಿ ಕೊಟ್ಟಿದ್ದಾರೆ. ಆದ್ರೆ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮವಾಗಿ ಅನುಮತಿ ಇಲ್ಲದೇ ಖಾಸಗಿ ವಸತಿ ಗೃಹಗಳು ಕಾರ್ಯನಿರ್ವಹಿಸ್ತಿವೆ. ಭಕ್ತಾಧಿಗಳು ಇಂತಹ ಕಡೆ ರೂಮ್ ಕೂಡ ಪಡೆಯುತ್ತಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ಕೊಟ್ಟ ವೇಳೆ ಖಾಸಗಿ ವಸತಿ ಗೃಹಗಳಿಗೆ ರೀನಿವಲ್ ಹಾಗೂ ಹೊಸದಾಗಿ ಅನುಮತಿ ಕೊಡದಂತೆ ತಾಕೀತು ಮಾಡಿ ಹೋಗಿದ್ದಾರೆ. ಆದ್ರೂ ಕೂಡ ಕಟ್ಟಡ ನಿರ್ಮಾಣ ಕಾರ್ಯ ನಡೀತಲೇ ಇದೆ. ಈ ಬಗ್ಗೆ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಕೇಳಿದ್ರೆ ಪ್ರಾಧಿಕಾರದ ಆಸ್ತಿ ಎಷ್ಟಿದೆ ಅಂತಾ ಇನ್ನೂ ನಿರ್ಧಾರವಾಗಿಲ್ಲ. ಪ್ರಾಧಿಕಾರಕ್ಕೆ 200 ಎಕರೆ ಜಾಗವಿದೆ.ಅದನ್ನು ನಿರ್ದಿಷ್ಟವಾಗಿ ಗುರುತಿಸಿಕೊಟ್ಟಿಲ್ಲ. ಇದರಿಂದ ಕೆಲವರು ಕಟ್ಟಡ ಕಟ್ಟಿಕೊಳ್ಳುತ್ತಿದ್ದಾರೆ. ಸರ್ವೇ ನಡೆಸಿ ಪ್ರಾಧಿಕಾರದ ಆಸ್ತಿ ಎಲ್ಲಿದೆ ಅಂತಾ ಗುರುತಿಸಬೇಕಾಗಿದೆ ಅಂತಾರೆ.
ಒಟ್ನಲ್ಲಿ ಮಾದಪ್ಪನ ಬೀಡು ಕಾಂಕ್ರೀಟ್ ಕರಣವಾಗ್ತಿದೆ.ಏಳು ಮಲೆಯ ಒಡೆಯನ ಸುತ್ತಲಿನ ಪರಿಸರ ಕಟ್ಟಡಗಳಿಂದ ಆವೃತ್ತವಾಗ್ತಿದೆ. ಪರಿಸರ ಉಳಿಸುವ ಜೊತೆಗೆ ಕಾಂಕ್ರೀಟ್ ಕರಣವಾಗುವುದನ್ನು ತಪ್ಪಿಸುವಂತೆ ಮನವಿ ಮಾಡಿಕೊಳ್ತಿದ್ದಾರೆ.