ರಾಯಚೂರು ಜಿಲ್ಲೆಯಲ್ಲಿ ತೀವ್ರ ಬರ: ಕೃಷಿ ಮೇಳ ಮೊಟಕು

By Kannadaprabha News  |  First Published Jan 5, 2024, 10:30 PM IST

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ಡಿಸೆಂಬರ್‌, ಜವನರಿ ಮಾಯೆಯಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳವನ್ನು ಹಮ್ಮಿಕೊಳ್ಳುವ ಸಂಪ್ರದಾಯವು ಆಯೋಜಕರಿಗೆ ಹಾಗೂ ರೈತರಿಗೆ ಸಂಪರ್ಕದ ಕೊಂಡಿಯಾಗಿತ್ತು. ಆದರೆ ಇದೀಗ ಬರ ಘೋಷಣೆಯಾಗಿದ್ದರಿಂದ ಕೃಷಿ ಮೇಳಕ್ಕೆ ಬ್ರೇಕ್‌ ಬಿದ್ದಿರುವುದು ಎಲ್ಲರಲ್ಲಿಯೂ ಬೇಸರವನ್ನುಂಟು ಮಾಡುವಂತೆ ಮಾಡಿದೆ.


ರಾಮಕೃಷ್ಣ ದಾಸರಿ

ರಾಯಚೂರು(ಜ.05): ರೈತರಿಗೆ ಅಗತ್ಯ ಮಾರ್ಗದರ್ಶನ, ಕೃಷಿ ವಿದ್ಯಾರ್ಥಿಗಳಿಗೆ ಜ್ಞಾನ ಪಡೆಯಲು ವೇದಿಕೆ ಹಾಗೂ ಕೃಷಿ ಆಹಾರ-ಉತ್ಪನ್ನಗಳ, ಪರಿಕರಗಳ ವ್ಯಾಪಾರಿಗಳಿಗೆ ಅನುಕೂಲಕರವಾಗಿದ್ದ ಕೃಷಿ ಮೇಳವನ್ನು ತೀವ್ರ ಬರ ಹಿನ್ನೆಲೆಯಲ್ಲಿ ಮೊಟಕುಗೊಳಿಸಲಾಗಿದೆ.

Tap to resize

Latest Videos

undefined

ಸ್ಥಳೀಯ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ ಡಿಸೆಂಬರ್‌, ಜವನರಿ ಮಾಯೆಯಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳವನ್ನು ಹಮ್ಮಿಕೊಳ್ಳುವ ಸಂಪ್ರದಾಯವು ಆಯೋಜಕರಿಗೆ ಹಾಗೂ ರೈತರಿಗೆ ಸಂಪರ್ಕದ ಕೊಂಡಿಯಾಗಿತ್ತು. ಆದರೆ ಇದೀಗ ಬರ ಘೋಷಣೆಯಾಗಿದ್ದರಿಂದ ಕೃಷಿ ಮೇಳಕ್ಕೆ ಬ್ರೇಕ್‌ ಬಿದ್ದಿರುವುದು ಎಲ್ಲರಲ್ಲಿಯೂ ಬೇಸರವನ್ನುಂಟು ಮಾಡುವಂತೆ ಮಾಡಿದೆ.

ಸಾರಿಗೆ ಸಚಿವರೇ ಇಲ್ನೋಡಿ... ನಮ್ಮ ಭದ್ರತೆಗಾಗಿ ಮರಕಮದಿನ್ನಿ ಗ್ರಾಮಕ್ಕೊಂದು ಬಸ್‌ ಬಿಡಿ: ವಿದ್ಯಾರ್ಥಿನಿಯರ ಮನವಿ!

ಟೈಮ್‌ ಸರಿಯಿಲ್ಲ ಕಣ್ರೀ:

ದೇಶ, ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ, ಸದಾ ಪ್ರಕೃತಿಯ ಕೆಂಗಣ್ಣಿಗೆ ತುತ್ತಾಗುತ್ತಲೇ ಇರುವ ಅನ್ನದಾತರ ಸಮಯ ಸರಿಯಿಲ್ಲ ಕಣ್ರೀ ಎನ್ನುವಂತಹ ದುಸ್ಥಿತಿ ನಿರ್ಮಾಣಗೊಂಡಿದೆ. ಕಳೆದ ವರ್ಷ ಆರಂಭದಲ್ಲಿ ಉತ್ತಮವಾಗಿ ಮಳೆ ಸುರಿದು ಭರವಸೆಯನ್ನು ಮೂಡಿಸಿತ್ತು. ಆದರೆ ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ಮಳೆ ರಾಯನ ಮುನಿಸು, ಮಳೆಗಾಲ ಕಳೆದರು ನಿರೀಕ್ಷಿತ ಮಳೆಯಾಗದ ಕಾರಣಕ್ಕೆ ಮುಂಗಾರು ಬೆಳೆಗಳು ಸಂಪೂರ್ಣವಾಗಿ ನಷ್ಟಕ್ಕೀಡಾಗಿ ಅಧಿಕಾರಕ್ಕೆ ಬಂದ ಹೊಸ ಸರ್ಕಾರ ಅನಿವಾರ್ಯವಾಗಿ ಜಿಲ್ಲೆ ಏಳು ತಾಲೂಕುಗಳನ್ನು ಬರ ಘೋಷಣೆ ಮಾಡಿತು. ಹಿಂಗಾರು ಹಂಗಾಮಿನಲ್ಲಿ ಸಹ ರೈತರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು ಇದೇ ವೇಳೆ ಕೃಷಿ ಮೇಳವು ಸಹ ಮೊಟಕುಗೊಂಡಿರುವುದು ಇನ್ನಷ್ಟು ಬೇಸರಕ್ಕೆ ಕಾರಣವಾಗಿದೆ. ಕಳೆದ ವರ್ಷ ಕೃಷಿ ಮೇಳವನ್ನು ನಡೆಸಿದ್ದರು ಸಹ ಕೊರೋನಾ ಹೊಡೆತಕ್ಕೆ ನಲುಗಿದ್ದ ರೈತರು ಮೇಳದಲ್ಲಿ ಪಾಲ್ಗೊಳ್ಳಲು ಅಷ್ಟಾಗಿ ಆಸಕ್ತಿ ತೋರಿರಲಿಲ್ಲ. ಇದೀಗ ಪ್ರಸಕ್ತ ಸಾಲಿನ ಕೃಷಿ ಮೇಳವನ್ನು ಬರ ಹಿನ್ನೆಲೆಯಲ್ಲಿ ರದ್ದು ಪಡಿಸಿರುವುದು ರೈತರ ಸಮಯ ಸರಿಯಿಲ್ಲ ಎನ್ನುವುದನ್ನು ತೋರಿಸಿಕೊಡುವಂತೆ ಮಾಡಿದೆ.

ಪರ್ಯಾಯ ಕಾರ್ಯಕ್ರಮ:

ಯಾವುದೇ ವರ್ಷ ಕೃಷಿ ಮೇಳ ರದ್ದಾದರು ಅದರ ಬದಲು ಪರ್ಯಾಯ ಕಾರ್ಯಕ್ರಮ ಆಯೋಜನೆ ಮಾಡುವ ಪದ್ಧತಿಯನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯು ರೂಪಿಸಿತ್ತು. ಇದೀಗ ಪ್ರಸಕ್ತ ಸಾಲಿನ ಕೃಷಿ ಮೇಳ ರದ್ದಾಗಿದ್ದರಿಂದ ಬರುವ ಫೆಬ್ರವರಿಯಲ್ಲಿ ಪರ್ಯಾಯ ಕಾರ್ಯಕ್ರಮ ಆಯೋಜಿಸಲು ವಿವಿ ಚಿಂತನೆ ಕೈಗೊಂಡಿದೆ. ಮೂರು ದಿನಗಳ ಕೃಷಿ ಮೇಳ ಬದಲಿಗೆ ಒಂದೆರಡು ದಿನಗಳ ಕಾಲ ಸಿರಿಧಾನ್ಯಗಳ ವಿಶೇಷತೆಯನ್ನು ತಿಳಿಸುವ ಸಿರಿಧಾನ್ಯ ಸಮ್ಮೇಳನ ಹಾಗೂ ಮತ್ಸ್ಯಮೇಳ ಹಮ್ಮಿಕೊಳ್ಳಲು ಮುಂದಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟತೆ ದೊರೆಯಲಿದೆ.

ಎಪಿಎಂಸಿ ಕಾಯ್ದೆ ಅಭಿಪ್ರಾಯ ಸಂಗ್ರಹಿಸಿ ವರದಿ ಸಲ್ಲಿಕೆ: ಸಚಿವ ಶಿವಾನಂದ ಪಾಟೀಲ್

ಪ್ರತಿ ವರ್ಷ ಕೃಷಿ ವಿವಿಯಿಂದ ಹಮ್ಮಿಕೊಳ್ಳುತ್ತಿದ್ದ ಕೃಷಿ ಮೇಳದಿಂದಾಗಿ ರೈತರಿಗೆ ಸಾಕಷ್ಟು ಅನುಕೂಲಗಳಾಗುತ್ತಿದ್ದವು ಇದರ ಜೊತೆಗೆ ರಾಯಚೂರು ನಗರದ ನಿವಾಸಿಗಳಿಗೂ ಸಹ ಮೇಳವು ಒಂದು ಹಬ್ಬವಾಗಿರುತ್ತಿತ್ತು. ಈ ಬಾರಿ ಬರ ಆವರಿಸಿದ್ದರಿಂದ ಕೃಷಿ ಮೇಳವನ್ನು ಮೊಟಕುಗೊಳಿಸಿರುವುದು ಬೇಸರ ಮೂಡಿಸಿದೆ ಎಂದು ರೈತ ಮಲ್ಲಪ್ಪಗೌಡ ಹೇಳಿದ್ದಾರೆ.  

ತೀವ್ರ ಬರ ಆವರಿಸಿದ್ದರಿಂದ ಪ್ರಸಕ್ತ ಕೃಷಿ ಮೇಳವನ್ನು ರದ್ದುಪಡಿಸಿದ್ದು, ಅದಕ್ಕೆ ಬದಲಾಗಿ ಫೆಬ್ರವರಿಯಲ್ಲಿ ಸಿರಿಧಾನ್ಯ ಹಾಗೂ ಮತ್ಸ್ಯ ಮೇಳವನ್ನು ಆಯೋಜಿಸಲಾಗುತ್ತಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಎಂ.ಹನುಮಂತಪ್ಪ ತಿಳಿಸಿದ್ದಾರೆ.  

click me!