Chikkamagaluru: ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಶ್ರೀಗಂಧ ಬೆಳೆಗಾರರಿಂದ ರಕ್ತದ ಚಳವಳಿ

By Suvarna News  |  First Published Mar 30, 2022, 4:32 PM IST

ಶ್ರೀಗಂಧದ ಬೆಳೆಗೆ ಸೂಕ್ತ ಪರಿಹಾರ ನೀಡಿವಂತೆ ಆಗ್ರಹಿಸಿ ಶ್ರೀಗಂಧ ಬೆಳೆಗಾರರ ಪ್ರತಿಭಟನೆ 30ನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ರೈತರು ರಕ್ತದ ಚಳುವಳಿ ನಡೆಸಿದ್ದಾರೆ.


ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.30): ಶ್ರೀಗಂಧದ ಬೆಳೆಗೆ ಸೂಕ್ತ ಪರಿಹಾರ ನೀಡಿವಂತೆ ಆಗ್ರಹಿಸಿ ಶ್ರೀಗಂಧ ಬೆಳೆಗಾರರ (Sandalwood Growers) ಪ್ರತಿಭಟನೆ 30ನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ರೈತರು ರಕ್ತದ ಚಳುವಳಿ (Blood Campaign) ನಡೆಸಿದ್ದಾರೆ. 30 ದಿನಗಳಿಂದ ನಡೆಯುತ್ತಿರುವ ಶ್ರೀಗಂಧ ಬೆಳೆಗಾರರ ಪ್ರತಿಭಟನೆ (Protest) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ.ಈ ಕಾಮಗಾರಿಯಿಂದ  ಶ್ರೀಗಂಧ ಬೆಳೆದ ಬೆಳೆಗಾರರ ಪರಿಸ್ಥಿತಿ ಅತಂತ್ರವಾಗಿದೆ. ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ 22 ರೈತರು (Farmers) ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನ ಬೆಳೆದಿದ್ದರು. 

Latest Videos

undefined

ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಮಿಯನ್ನ ವಶಪಡಿಸಿಕೊಳ್ಳಲು ಮುಂದಾಗಿದ್ದರು. ಆದರೆ, ರೈತರು ಸೂಕ್ತ ಪರಿಹಾರ ನೀಡಿ ಎಂದು ಕಳೆದ ಎರಡ್ಮೂರು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಸರ್ಕಾರ ಒಂದು ಶ್ರೀಗಂಧದ ಗಿಡಕ್ಕೆ ಕೇವಲ 420 ರೂಪಾಯಿಯನ್ನ ನಿಗಧಿ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ರೈತರು ಕಳೆದ 30 ದಿನದಿಂದ ತಮ್ಮ ಜಮೀನಿನಲ್ಲಿ ಪ್ರತಿಭಟನೆನಡೆಸುತ್ತಿದ್ದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

Chikkamagaluru: ಶ್ರೀಗಂಧಕ್ಕಿಲ್ಲ ಮನ್ನಣೆ: ರೈತರ ಪ್ರತಿಭಟನೆಗೆ ಕ್ಯಾರೇ ಎನ್ನದ ಅಧಿಕಾರಿಗಳು..!

ಹೈಕೋರ್ಟ್ ಆದೇಶಕ್ಕೆ ಬೆಲೆ ನೀಡಿದ ಅಧಿಕಾರಿಗಳು ವಿರುದ್ದ ರಕ್ತದಲ್ಲಿ ಮನವಿ ಪತ್ರದ ಬರೆದ ಬೆಳೆಗಾರರು: ಹೈಕೋರ್ಟಿನ (High Court) ಸಿಂಗಲ್ ಬೆಂಚ್ ಒಂದು ವರ್ಷದ ಹಿಂದೆಯೇ ಒಂದು ಮರಕ್ಕೆ 2 ಲಕ್ಷದ 44 ಸಾವಿರ ನೀಡಿ ಎಂದು ಆದೇಶಿಸಿದೆ, ದ್ವಿಸದಸ್ಯ ಪೀಠ ಮೂರು ತಿಂಗಳ ಹಿಂದೆ 2 ಲಕ್ಷದ 44 ಸಾವಿರ ನೀಡುವಂತೆ ಆದೇಶಿಸಿದೆ. ಆದರೆ, ಸರ್ಕಾರ ಹಾಗೂ ಅಧಿಕಾರಿಗಳು ಹೈಕೋರ್ಟ್ ಆದೇಶವನ್ನ ಉಲ್ಲಂಘಿಸಿ ಒಂದು ಗಿಡಕ್ಕೆ ಕೇವಲ 420 ರೂಪಾಯಿ ನೀಡಿದ್ದಾರೆ. ಈ ಹಣ ಒಂದು ಸಣ್ಣ ಗಿಡ ತರಲು ಆಗುವುದಿಲ್ಲ ಎಂದು ಧರಣಿ ನಡೆಸುತ್ತಿದ್ದಾರೆ. 30 ದಿನಗಳಿಂದ ಪ್ರತಿಭಟಿಸುತ್ತಿರುವ ರೈತರು ಸರ್ಕಾರದ ವಿರುದ್ಧ ರಕ್ತದ ಚಳವಳಿ ನಡೆಸಿದ್ದಾರೆ. ಸರ್ಕಾರಕ್ಕೆ ಶ್ರೀಗಂಧ ಬೆಳೆಗಾರರು ರಕ್ತದಲ್ಲಿ ಮನವಿ ಪತ್ರ ಬರೆಯುವ ಆಕ್ರೋಶವನ್ನು ಹೊರಹಾಕಿದ್ದಾರೆ. 

ರಕ್ತದಲ್ಲಿ ಬರೆದ ಮನವಿ ಪತ್ರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಶ್ರೀಗಂಧ ಬೆಳೆಗಾರರು ಸಲ್ಲಿಸಿದ್ದು, ಕಳೆದ 30 ದಿನಗಳಿಂದ ಅನಿರ್ದಿಷ್ಟಾವದಿ ಧರಣಿಯನ್ನು ತರೀಕರೆಯ ಹಳಿಯೂರು ಗ್ರಾಮದಲ್ಲಿ ಶ್ರೀಗಂಧ ಬೆಳೆಗಾರರು ನಡೆಸುತ್ತಿದ್ದಾರೆ. 22 ರೈತರ ಕುಟುಂಬದಿಂದ ಕಳೆದ 30 ದಿನಗಳಿಂದ ಈ ಪ್ರತಿಭಟನೆ ನಡೆಯುತ್ತಿದ್ದು, ಉಪವಾಸ ಸತ್ಯಾಗ್ರಹ, ಅರೆಬೆತ್ತಲೆ ಪ್ರತಿಭಟನೆಯನ್ನು ನಡೆಸಿದ್ದರು. 62 ಕೋಟಿ ಪರಿಹಾರದ ಜಾಗದಲ್ಲಿ ಎರಡೂವರೆ ಲಕ್ಷ ಪರಿಹಾರ ನೀಡುತ್ತಿದ್ದು, ಇದು ತುಂಬಾ ಅನ್ಯಾಯ ಎಂದು ಸರ್ಕಾರಕ್ಕೆ ರಕ್ತದಲ್ಲಿ ಪತ್ರವನ್ನು ಶ್ರೀಗಂಧದ ಬೆಳೆಗಾರರು ಬರೆದಿದ್ದಾರೆ. 

ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ ಕರ್ತವ್ಯಕ್ಕೆ ಚಕ್ಕರ್...ದಿ ಕಾಶ್ಮೀರ್ ಫೈಲ್ಸ್ ಸಿನಿಮಾಕ್ಕೆ ಹಾಜರ್

ಸೀರೆಂಜ್‌ನಲ್ಲಿ ರಕ್ತ ತೆಗೆದು ಸರ್ಕಾರಕ್ಕೆ ರಕ್ತದಲ್ಲೇ ಮನವಿ ಬರೆದಿದ್ದು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಕಳೆದೊಂದು ತಿಂಗಳಿನಿಂದ ಶ್ರೀಗಂಧ ಬೆಳಗಾರರು ಪ್ರತಿಭಟನೆ ನಡೆಸುತ್ತಿದ್ದು, ಹೈಕೋರ್ಟ್ ನಿರ್ದೇಶನದಂತೆ ಪರಿಹಾರ ನೀಡಲು ಒತ್ತಾಯವನ್ನು ರೈತರು ಮಾಡುತ್ತಿದ್ದು, 22 ರೈತರಿಗೆ 62 ಕೋಟಿ ಪರಿಹಾರ ಬರಬೇಕು.ಆದರೆ ಸರ್ಕಾರ ಎರಡೂವರೆ ಲಕ್ಷ ಪರಿಹಾರ ನೀಡುತ್ತಿದೆ. ಈಗ ಘಟನೆಗೆ ಸಂಬಂಧಪಟ್ಟಂತೆ, ಕಳೆದೊಂದು ವಾರದಿಂದ ಅರೆಬೆತ್ತಲೆ ಪ್ರತಿಭಟನೆ  ರೈತರು ನಡೆಸುತ್ತಿದರು. ಒಟ್ಟಾರೆ ಶ್ರೀಗಂಧ ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ವಿಭ್ನಿನ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಇತ್ತ ಮುಖ ಹಾಕದೇ ಇರುವುದು ಮಾತ್ರ ವಿಪರ್ಯಾಸವೇ ಸರಿ.

click me!