ರಾಮನಗರದ ಅಕ್ರಮ ಶಿಲುಬೆ ತೆರವುಗೊಳಿಸಿದ ಜಿಲ್ಲಾಡಳಿತ

By Suvarna NewsFirst Published Jun 23, 2020, 11:22 AM IST
Highlights

ರಾಮನಗರ ತಾಲೂಕಿನ ಗೊಲ್ಲರಚೆನ್ನಯ್ಯ ದೊಡ್ಡಿ ಬಳಿಯ ಹಾರನಗುಡ್ಡದ ವಿವಾದಿತ ಶಿಲುಬೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಹಿಂದು ಜಾಗರಣ ವೇದಿಕೆ  ನಡೆಸಿದ ಹೋರಾಟ ಹಾಗೂ ಹಾಕಲಾಗಿದ್ದ PIL ಪರಿಣಾಮವಾಗಿ ಇಂದು ತಹಶಿಲ್ದಾರರ ನೇತ್ರತ್ವದಲ್ಲಿ ಬೆಳಿಗ್ಗಿನ ಸಮಯದಲ್ಲಿ ಕೋರ್ಟ್ ಆದೇಶದ ಮೇರೆಗೆ ತೆರವುಗಳಿಸಲಾಯಿತು.

ಬೆಂಗಳೂರು(ಜೂ.23): ರಾಮನಗರ ತಾಲೂಕಿನ ಗೊಲ್ಲರಚೆನ್ನಯ್ಯ ದೊಡ್ಡಿ ಬಳಿಯ ಹಾರನಗುಡ್ಡದ ವಿವಾದಿತ ಶಿಲುಬೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ಹಿಂದು ಜಾಗರಣ ವೇದಿಕೆ  ನಡೆಸಿದ ಹೋರಾಟ ಹಾಗೂ ಹಾಕಲಾಗಿದ್ದ PIL ಪರಿಣಾಮವಾಗಿ ಇಂದು ತಹಶಿಲ್ದಾರರ ನೇತ್ರತ್ವದಲ್ಲಿ ಬೆಳಿಗ್ಗಿನ ಸಮಯದಲ್ಲಿ ಕೋರ್ಟ್ ಆದೇಶದ ಮೇರೆಗೆ ತೆರವುಗಳಿಸಲಾಯಿತು.

ಸೆಬಾಸ್ಟಿಯನ್ ರಾಣಿ ಎಂಬ ಕ್ರಿಶ್ಚಿಯನ್ ಮಹಿಳೆ ಅಕ್ರಮವಾಗಿ ಸುಮಾರು 15 ಅಡಿಗೂ ಹೆಚ್ಚು ಎತ್ತರದ ಶಿಲುಬೆಯನ್ನು ಹಾಗೂ ಮೇರಿ ವಿಗ್ರಹವನ್ನು ನಿರ್ಮಾಣ ಮಾಡಿ ಗೋಮಾಳದ ಸ್ವತ್ತನ್ನು ಕಬಳಿಸಲು ಮುಂದಾಗಿದ್ದು, ಅದನ್ನು ತೆರವುಗೊಳಿಸುವಂತೆ ಹಿಂದೂ ಜಾಗರಣ ವೇದಿಕೆ 25-02-2020ರಂದು ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆಯನ್ನು ಮಾಡಿ ರಾಮನಗರ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿತ್ತು.

5 ತಿಂಗಳ ಮಗು ಸೇರಿ ಒಂದೇ ಮನೆಯ ನಾಲ್ವರಿಗೆ ಕೊರೋನಾ..!

ಆದರೂ ಸಹ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗದಿದ್ದಾಗ ಹಿಂಜಾವೇ ಜಿಲ್ಲಾಧ್ಯಕ್ಷರಾದ ಗಜೇಂದ್ರ ಸಿಂಗ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವಕೀಲ ಸುರೇಶ.ಆರ್ ಹಾಗೂ ಜಿಲ್ಲಾ ಕಾರ್ಯದರ್ಶಿಯಾದ ಅರುಣ್ ಸಿಂಗ್ ರವರು  ಉಚ್ಚ ನ್ಯಾಯಾಲಯದಲ್ಲಿ  WP No: 6333/2020 (PIL) ರಂತೆ ರಿಟ್ ಅರ್ಜಿಯನ್ನು ಸಲ್ಲಿಸಿದ್ದರು.

ಮಾನ್ಯ ನ್ಯಾಯಾಧೀಶರು ಸದರಿ ಪ್ರಕರಣದ ಸಂಬಂಧ ಎದುರುದಾರರು ಛಿಮಾರಿ ಹಾಕಿದ್ದರು. ಅದರ ಪರಿಣಾಮವಾಗಿ ಜಿಲ್ಲಾಡಳಿತ ಇಂದು ಬೆಳ್ಳಂಬೆಳಗ್ಗೆಯೇ ಕಾರ್ಯಾಚರಣೆ ನಡೆಸಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸಿದೆ.

click me!