ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದವನಿಗೆ ಧರ್ಮದೇಟು
ಗೋಮಾಂಸ ಮಾರಾಟಕ್ಕೆ ಯತ್ನಿಸುತ್ತಿದ್ದ ಅಸ್ಸಾಂ ಮೂಲದ ವ್ಯಕ್ತಿ
ಮೂಡಿಗೆರೆ ಸಮೀಪದ ಮುದ್ರೆಮನೆ ಎಸ್ಟೇಟ್ ಬಳಿ ಘಟನೆ
ಚಿಕ್ಕಮಗಳೂರು (ಜ.29): ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಭಜರಂಗದಳ ಕಾರ್ಯಕರ್ತರು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆಮುನೆ ಎಸ್ಟೇಟ್ ಬಳಿ ನಡೆದಿದೆ.
ಮೂಡಿಗೆರೆ ತಾಲೂಕಿನ ಕಾಫಿತೋಟಗಳಿಗೆ ಕೂಲಿ ಅರಿಸಿ ಬಂದಿರುವ ಅಸ್ಸಾಂ ಮೂಲದ ವ್ಯಕ್ತಿ ಸಿಮೆಂಟ್ ಚೀಲದಲ್ಲಿ ಗೋಮಾಂಸವನ್ನ ತುಂಬಿಕೊಂಡು ಬೈಕಿನಲ್ಲಿ ಮಾರಾಟಕ್ಕೆ ಕೊಂಡೊಯುತ್ತಿದ್ದನು. ವಿಷಯ ತಿಳಿದ ಭಜರಂಗಳ ಕಾರ್ಯಕರ್ತರು ದಾಳಿ ನಡೆಸಿ ಚೀಲವನ್ನ ನೋಡಿದಾಗ ಗೋಮಾಂಸ ಇರುವುದು ಗೊತ್ತಾಗಿದೆ. ಕೂಡಲೇ ಆತನನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಗೋಣಿಬೀಡು ಪಿ.ಎಸ್.ಐ. ಬಂಧಿತನನ್ನ ವಶಕ್ಕೆ ಪಡೆದಿದ್ದಾರೆ.
Shivamogga: ಶಿವಮೊಗ್ಗದಲ್ಲಿ ಅಕ್ರಮ ದನದ ಮಾಂಸದ ದಂಧೆ ನಡೆಸಿದ 'ಕೈ' ಕಾರ್ಪೋರೇಟರ್
ಇತ್ತೀಚೆಗಷ್ಟೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಡಬಗೆರೆ ಬಳಿಯೂ ಅಸ್ಸಾಂ ಮೂಲದ ಕಾರ್ಮಿಕರು ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಮಾರಾಟಕ್ಕೆ ಯತ್ನಿಸುವಾಗ ಸಿಕ್ಕಿಬಿದ್ದಿದ್ದರು. ಜಿಲ್ಲೆಯಲ್ಲಿ ಈ ರೀತಿಯ ಸಾಕಷ್ಟು ಪ್ರಕರಣಗಳಿವೆ. ಆದರೆ, ಭಜರಂಗದಳ ಕಾರ್ಯಕರ್ತರು ಇವರು ಅಸ್ಸಾಂನವರಲ್ಲ. ಅಕ್ರಮ ಬಾಂಗ್ಲಾ ವಸಲಿಗರು ಎಂದು ಆರೋಪಿಸುತ್ತಿದ್ದಾರೆ.