Ramanagara: ಜನ​ಪ್ರ​ತಿ​ನಿ​ಧಿ​ಗಳ ಸಹ​ಕಾರವಿದ್ದರೆ ಆಂಗ್ಲ ಶಾಲೆಗೆ ಶಂಕು: ಶಾಸಕ ಬಾಲಕೃಷ್ಣ

By Kannadaprabha News  |  First Published Jul 1, 2023, 8:24 PM IST

ಚುನಾಯಿತ ಸದಸ್ಯರು ರಾಜಕೀಯ ಬಿಟ್ಟು ಸಹಕಾರ ನೀಡಿದರೆ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸುಸಜ್ಜಿತ ಆಂಗ್ಲ ಶಾಲೆಗಳನ್ನು ಪ್ರಾರಂಭಿಸೋಣ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. 


ರಾಮನಗರ (ಜು.01): ಚುನಾಯಿತ ಸದಸ್ಯರು ರಾಜಕೀಯ ಬಿಟ್ಟು ಸಹಕಾರ ನೀಡಿದರೆ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಸುಸಜ್ಜಿತ ಆಂಗ್ಲ ಶಾಲೆಗಳನ್ನು ಪ್ರಾರಂಭಿಸೋಣ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. ತಾಲೂ​ಕಿನ ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಜ್ಜಾಲ, ಎಸ್‌.ವಿ.ಟಿ ಕಾಲೋನಿ, ಶೇಷಗಿರಿಹಳ್ಳಿ ಕಾಲೋನಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಾರ್ವಜನಿಕ ರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತ​ನಾ​ಡಿದರು. ಮಂಚನಾಯ್ಕನಹಳ್ಳಿ ಗ್ರಾಪಂ ಆದಾಯವುಳ್ಳ ಪಂಚಾಯಿತಿಯಾಗಿದ್ದು, ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ತಲುಪಿಸಲು ಸಮಸ್ಯೆಯಿಲ್ಲ. 

ಆದರೆ ಸಾರ್ವಜನಿಕರಿಂದ ದೂರುಗಳು ಹೆಚ್ಚಾಗಿ ಬರುತ್ತಿರುವುದುನ್ನು ನೋಡಿದರೆ ಅಧಿಕಾರಿ ವರ್ಗದವರಲ್ಲಿ ಏನೋ ಲೋಪವಿದೆ ಎಂದು ಕಾಣುತ್ತದೆ ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದ ಆಗುತ್ತಿರುವ ಸಮಸ್ಯೆಗಳನ್ನು ಪಟ್ಟಿಮಾಡಿ, ಬಜೆಟ್‌ ನಂತರ ಪ್ರತ್ಯೇಕ ಸಭೆ ಕರೆಯುತ್ತೇನೆ. ಕಂದಾಯ ಇ-ಖಾತಾ ಅದಾಲತ್‌ ಯಾವಾಗ ಮಾಡುತ್ತೀರಿ ಎಂದು ಪಿಡಿಒ ಯತೀಶ್‌ ಅವರಿಗೆ ಪ್ರಶ್ನಿಸಿದರು. 

Tap to resize

Latest Videos

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಸಭೆಯಲ್ಲಿ ಶೇಷಗಿರಿಹಳ್ಳಿ ಶಿವಣ್ಣ ಮಾತನಾಡಿ, ಕಾನೂನನ್ನು ಗಾಳಿಗೆ ತೂರಿ ಅಕ್ರಮವಾಗಿ ಖಲೀಲ್‌ ಲೇಔಟ್‌ನಲ್ಲಿ ಸುಮಾರು 200 ಖಾತೆಗಳನ್ನು ಮಾಡಿದ್ದಾರೆ ಎಂದು ಪಿಡಿಓ ವಿರುದ್ದ ಗಂಬೀರ ಆರೋಪ ಮಾಡಿದರು. ಇದಕ್ಕೆ ಸ್ಥಳದಲ್ಲಿಯೇ ಶಾಸಕ ಎಚ್‌.ಸಿ.ಬಾಲಕೃಷ್ಣ ಕಾನೂನು ಬಾಹಿರವಾಗಿ ಖಾತೆಗಳನ್ನು ಮಾಡಿದ್ದರೆ ಕೂಡಲೇ ಎಲ್ಲವನ್ನು ವಜಾ ಮಾಡು ವಂತೆ ತಾಪಂ ಇಓ ಪ್ರದೀಪ್‌ಗೆ ಸೂಚಿಸಿದರು. ಇದೇ ವೇಳೆ ಎಸ್ವಿಟಿ ಕಾಲನಿಯಲ್ಲಿ ಗ್ರಾಪಂನ ವರ್ಗ 1 ರಡಿ 40 ಲಕ್ಷ ರೂ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ತಹಸೀಲ್ದಾರ್‌ ತೇಜಸ್ವಿನಿ, ತಾಪಂ ಇಓ ಪ್ರದೀಪ್‌, ಕೃಷಿ ಇಲಾಖೆಯ ಡಾ.ವನಿತಾ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಬಿಡದಿ ಬ್ಲಾಕ್‌ ಕಾಂಗ್ರೆಸ್‌ ಅದ್ಯಕ್ಷ ಗಾಣಕಲ್‌ ನಟರಾಜು, ಗ್ರಾಪಂ ಅಧ್ಯಕ್ಷ ಸತೀಶ್‌ ಕುಮಾರ್‌ , ಸದಸ್ಯರಾದ ಶಂಕುಕುಮಾರ್‌ , ಶಾಂತರಾಜು, ಪುಷ್ಪ, ರಮ್ಯಧನಂಜಯ್ಯ, ತಾಯಮ್ಮ, ವರಲಕ್ಷ್ಮಿ, ಮುಖಂಡರಾದ ಬ್ಯಾಟಪ್ಪ, ಪುಟ್ಟಣ್ಣ, ಬೆಟ್ಟಸ್ವಾಮಿ, ರಮೇಶ್‌, ಶಿವಣ್ಣ, ನರಸಿಂಹಯ್ಯ, ಅಭಿಷೇಕ, ಮಲ್ಲೇಶ್‌ ಮತ್ತಿತರರು ಹಾಜ​ರಿದ್ದರು.

Ramanagara: ಪಿಡಿ​ಒ​ಗಳ ಸಮಸ್ಯೆ ಸರ್ಕಾ​ರದ ಗಮನಕ್ಕೆ ತರುವೆ: ಶಾಸಕ ಎಚ್‌.ಸಿ.ಬಾಲಕೃಷ್ಣ

ಅನಾವರಣಗೊಂಡ ಸಮಸ್ಯೆಗಳು: ಎಸ್ವಿಟಿ ಕಾಲನಿ ಗಣಪತಿ ದೇವಾಲಯದ ಬಳಿಯಿರುವ ಹೆಜ್ಜಾಲ ಕಡೆ ಹೋಗುವ ಹಳೆ ಸೇತುವೆ ಅಗಲೀಕರಣ ಮಾಡುವುದು, ಆಂಗ್ಲಶಾಲೆ ಪ್ರಾರಂಭ, 94 ಸಿ ಹಕ್ಕುಪತ್ರ, ಇ-ಖಾತಾ ಸಮಸ್ಯೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮರ್ಪಕ ಸರ್ವಿಸ್‌ ರಸ್ತೆ ನಿರ್ಮಿಸಿಲ್ಲ, ಹೆದ್ದಾರಿ ಸರ್ವಿಸ್‌ ರಸ್ತೆ ಪಕ್ಕ ಚರಂಡಿ ನಿರ್ಮಿಸುವುದು, ಬೆಸ್ಕಾಂ ಲೈನ್‌ಮ್ಯಾನ್‌ ಸಾರ್ವಜನಿಕರಿಗೆ ಸ್ಪಂದಿಸುತ್ತಿಲ್ಲ. ದ್ಯಾವಲಿಂಗನಪಾಳ್ಯ, ಹೆಜ್ಜಾಲ ರೈಲ್ವೆ ನಿಲ್ದಾಣದ ಕಡೆ ಹೋಗಲು ಸ್ಕೈ ವಾಕರ್‌ ನಿರ್ಮಾಣ ಮಾಡಬೇಕು. ಶೇಷಗಿರಿಹಳ್ಳಿ ಅಂಡರ್‌ ಪಾಸ್‌ ಓಡಾಡಕ್ಕೆ ಮುಕ್ತಗೊಳಿಸಬೇಕು ಇತ್ಯಾಧಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದರು.

click me!