Koppal: ಕುಕನೂರಿನ ಶಾಲೆಯಲ್ಲಿ ಟೀಚರ್ಸ್ ಬಂದಿಲ್ಲ ಅಂದ್ರೆ ಅಡುಗೆಯವರೇ ಪ್ರಭಾರಿ ಶಿಕ್ಷಕರು

Published : Feb 08, 2026, 01:38 PM IST
kukkunuru School

ಸಾರಾಂಶ

ಆಶ್ರಯ ಕಾಲನಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ತೀವ್ರ ಕೊರತೆಯಿಂದಾಗಿ, ಇಬ್ಬರು ಶಿಕ್ಷಕರೂ ಗೈರಾದಾಗ ಶಾಲೆಯ ಅಡುಗೆಯವರೇ ಮಕ್ಕಳಿಗೆ ಪ್ರಾರ್ಥನೆ ಮಾಡಿಸಿದ ಘಟನೆ ನಡೆದಿದೆ. ಶಿಕ್ಷಕರ ಈ ನಿರಂತರ ಗೈರುಹಾಜರಿ ಮತ್ತು ನಿರ್ಲಕ್ಷ್ಯದಿಂದಾಗಿ ಪಾಲಕರು ಶಾಲೆಯ ಮೇಲಿನ ಭರವಸೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ಕುಕನೂರು: ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕರಿಲ್ಲದ ಕಾರಣ ಅಡುಗೆಯವರೇ ಮಕ್ಕಳಿಗೆ ಶನಿವಾರ ಪ್ರಾರ್ಥನೆ ಮಾಡಿಸಿದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 8 ಗಂಟೆಗೆ ಶಾಲಾರಂಭ. ಈ ಶಾಲೆಯಲ್ಲಿ ಒಂದರಿಂದ ಐದನೇ ತರಗತಿ ಜರುಗುತ್ತವೆ. ಈ ಐದು ತರಗತಿಗಳಿಗೆ ಇಬ್ಬರೇ ಶಿಕ್ಷಕರು. ಈ ಇಬ್ಬರೂ ಇಲ್ಲದಿದ್ದರೆ ಅಡುಗೆಯವರೇ ಪ್ರಭಾರಿ ಶಿಕ್ಷಕರಾಗುತ್ತಾರೆ.

ಹೌದು. ಕುಕನೂರು ಪಟ್ಟಣದ ರಾಯರಡ್ಡಿ ಆಶ್ರಯ ಕಾಲನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶಾಲೆ ಮುಖ್ಯ ಶಿಕ್ಷಕ ನಿಂಗಪ್ಪ ಹೖದ್ರಿ ಏನಾದರೂ ಕಚೇರಿ ಕೆಲಸ ಇದ್ದರೆ ಇನ್ನೊಬ್ಬ ಶಿಕ್ಷಕ ಲಕ್ಷಪ್ಪ ಅವರ ಮೇಲೆ ಒಂದರಿಂದ ಐದನೇ ತರಗತಿ ಜರುಗಬೇಕು. ಈ ಇನ್ನೊಬ್ಬ ಸಹ ಶಿಕ್ಷಕ ಸಹ ಕೈ ಕೊಟ್ಟರೆ ಶಾಲೆಗೆ ಅಡುಗೆಯವರೇ ಮುಖ್ಯ ಹಾಗು ಸಹ ಶಿಕ್ಷಕರ ಸ್ಥಾನದಲ್ಲಿರುವ ಅನಿವಾರ್ಯತೆ ಉಂಟಾಗಿದೆ.

ಮಾಹಿತಿ ತಿಳಿಸದೇ ಶಾಲೆಗೆ ಗೈರಾಗುವ ಶಿಕ್ಷಕರು

ಸರ್ಕಾರಿ ಶಾಲೆಗಳೆಂದರೇ ಮೂಗು ಮೂರಿಯುವ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳಸಬೇಕೆಂಬ ಮಾತುಗಳು ಕೆಲ ಶಿಕ್ಷಕರ ಗೈರು ಹಾಗು ಶಿಕ್ಷಕರ ಕೊರತೆಗಳಿಂದ ಹಾಗು ಶಿಕ್ಷಕರ ನಿರ್ಲಕ್ಷ್ಯ ಬೋಧನೆಯಿಂದ ಹಿಂದುಳಿಯುತ್ತಿವೆ. ಅದಕ್ಕೆ ಈ ಸರ್ಕಾರಿ ಶಾಲೆ ಸಹ ನಿದರ್ಶನವಾಗಿದೆ ಎನ್ನುತ್ತಾರೆ ಪಾಲಕ ಪರಸಪ್ಪ ಪೋಳಾದ.

ಶಾಲೆ ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರು ಯಾವುದೇ ರಜೆಯ ಪಡೆದಿರುವ ಮಾಹಿತಿ ತಿಳಿಸದೇ ಶಾಲೆಗೆ ಗೈರಾಗುತ್ತಾರೆ.

ಇದು ರೂಢಿ ಆಗ್ಬೀಟ್ಟಿದೆ ಅಂತಾರೆ ಶಿಕ್ಷಕರು

ಹೇಗಾದರೂ ತಡವಾಗಿ ಶಾಲೆಗೆ ಹೋದರೆ ಅಡುಗೆಯವರು ಶಾಲಾ ಮಕ್ಕಳನ್ನು ನೋಡಿಕೊಳ್ಳುತ್ತಾರೆ. ಕಚೇರಿ ಕೆಲಸ ಎಂದು ಜಾರಿಕೊಳ್ಳಬಹುದು ಎಂಬ ರೂಢಿ ಇಲ್ಲಿನ ಶಿಕ್ಷಕರಿಗಾಗಿದೆ ಎನ್ನುತ್ತಾರೆ ಸ್ಥಳೀಯರು. ಒಮ್ಮೊಮ್ಮೆ ಮುಖ್ಯ ಶಿಕ್ಷಕ ಇಲ್ಲದಿದ್ದರೆ ಸಹ ಶಿಕ್ಷಕರಾದರೂ ಇರಬೇಕು. ಅವರು ಇಲ್ಲದಿರುವುದು ಪಾಲಕರಲ್ಲಿ ಶಿಕ್ಷಕರ ಬಗ್ಗೆ ಭರವಸೆ ಮರೆಸಿದೆ.

ಇದನ್ನೂ ಓದಿ: ಇಸ್ಪೀಟ್ ಜೂಜು ಆಡಬೇಕೆ? ಕನಕಗಿರಿಗೆ ಬನ್ನಿ!

ಶಾಲೆಯಲ್ಲಿ ಶಿಕ್ಷಕರು ಇಲ್ಲದಿರುವ ಮಾಹಿತಿ ಬಂದಿದೆ. ಬೇರೆ ಶಾಲೆ ಶಿಕ್ಷಕರನ್ನು ಹೋಗಲು ಹೇಳಿದ್ದೇನೆ. ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಯಲಬುರ್ಗಾದ ಬಿಇಒ, ಅಶೋಕ ಗೌಡರು ಹೇಳುತ್ತಾರೆ.

ಬೇರೆ ಗ್ರಾಮದಲ್ಲಿ ಉತ್ತಮ ಎಸ್‌ಡಿಎಂಸಿ ಸಭೆ ಇದ್ದ ಕಾರಣ ಮುಖ್ಯ ಶಿಕ್ಷಕ ತೆರಳಿದ್ದು, ಸಹ ಶಿಕ್ಷಕ ಸಮಯಕ್ಕೆ ಬಾರದ ಕಾರಣ ಬೇರೆ ಶಾಲೆಯ ಶಿಕ್ಷಕರನ್ನು ಶಾಲೆಗೆ ಹೋಗಲು ತಿಳಿಸಲಾಗಿದೆ ಎಂದು ಪೀರಸಾಬ್ ದಫೇದಾರ ಹೇಳುತ್ತಾರೆ.

ಇದನ್ನೂ ಓದಿ: ಕಂಪ್ಲಿ–ಗಂಗಾವತಿ ಸೇತುವೆ ನಿರ್ಮಾಣಕ್ಕೆ ಮಣ್ಣು ಪರೀಕ್ಷೆ

PREV
Read more Articles on
click me!

Recommended Stories

Karnataka Politics: ಯಾವ ಯತೀಂದ್ರನೂ ಇಂಪಾರ್ಟೆಂಟ್ ಅಲ್ಲ, ಹೈಕಮಾಂಡ್ ಏನು ಹೇಳುತ್ತೋ ಅದೇ ಫೈನಲ್: ಎಂಬಿ ಪಾಟೀಲ್
ರಾಜನಹಳ್ಳಿಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ವಾಲ್ಮೀಕಿ ಜಾತ್ರೆ: ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ