ಹಿಂದೂಗಳು ಸಂಘಟನೆಯಾಗದಿದ್ದರೆ ಧರ್ಮಕ್ಕೇ ಅಪಾಯ: ಪ್ರಮೋದ್‌ ಮುತಾಲಿಕ್‌

By Govindaraj S  |  First Published Nov 25, 2022, 12:20 AM IST

ಈ ಹಿಂದೂ ದೇಶದಲ್ಲಿ ಹಿಂದೂಗಳು ಸಂಘಟನೆಯಾಗಿ ಹಿಂದೂ ಧರ್ಮದ ಉಳಿವು ಮತ್ತು ಗೋಮಾತೆ ರಕ್ಷಣೆಗೆ ಹೋರಾಡದಿದ್ದರೆ ಹಿಂದೂ ಧರ್ಮಕ್ಕೆ ಆಪಾಯ ಉಂಟಾಗಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು.


ಚಾಮರಾಜನಗರ (ನ.25): ಈ ಹಿಂದೂ ದೇಶದಲ್ಲಿ ಹಿಂದೂಗಳು ಸಂಘಟನೆಯಾಗಿ ಹಿಂದೂ ಧರ್ಮದ ಉಳಿವು ಮತ್ತು ಗೋಮಾತೆ ರಕ್ಷಣೆಗೆ ಹೋರಾಡದಿದ್ದರೆ ಹಿಂದೂ ಧರ್ಮಕ್ಕೆ ಆಪಾಯ ಉಂಟಾಗಲಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಹೇಳಿದರು. ನಗರದ ಸರ್ಕಾರಿ ಪಾಲಿಟೆಕ್ನಿಕ್‌ ಎದುರು ಅಜಾದ್‌ ಹಿಂದೂ ಸೇನೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಲಯ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಹಿಂದೂ ಸಂಘಟನೆ ಎಂದಾಕ್ಷಣ ವಿಘ್ನಗಳು ನೂರಾರು ಅವುಗಳನ್ನು ಮೆಟ್ಟಿನಿಂತು ಸಂಘಟನೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದರು.

ಜಗತ್ತಿನಲ್ಲಿ ಹಿಂದೂಗಳಿಗೆ ಇರುವ ಏಕೈಕ ದೇಶವಾಗಿರುವ ಭಾರತದಲ್ಲಿ ನಾಲ್ಕು ದುಷ್ಟಶಕ್ತಿಗಳಾದ ಇಸ್ಲಾಮಿಕ್‌ ಶಕ್ತಿ, ಕ್ರಿಶ್ಚಿಯನ್‌ ಮಿಷನರಿಗಳು, ನಾಸ್ತಿಕವಾದಿಗಳು ಭ್ರಷ್ಟರಾಜಕಾರಣಿಗಳು ಇವರು ತಮ್ಮದೇ ರೀತಿಯಲ್ಲಿ ಹಿಂದೂ ಧರ್ಮದ ಉಳಿವಿಗೆ ಅಡ್ಡಿಪಡಿಸುತ್ತಾ ನೂರಾರು ವಿಘ್ನಗಳನ್ನು ಒಡ್ಡುತ್ತಿದ್ದಾರೆ, ಇವರ ವಿರುದ್ಧ ಅಜಾದ್‌ ಹಿಂದೂ ಸೇನೆಯಂತಹ ಹತ್ತಾರು ಹಿಂದೂ ಸಂಘಟನೆಗಳು ಸಂಘಟಿತರಾಗಲೇಬೇಕು ಎಂದರು. ಶಾರಿಕ್‌ ಹಿಂದೂ ವೇಷದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಸಜ್ಜಾಗುತ್ತಿದ್ದ ಎಂದರೆ ನಮ್ಮ ಭ್ರಷ್ಟವ್ಯವಸ್ಥೆ ಮತ್ತು ಮತಕೋಸ್ಕರ ತುಷ್ಟೀಕರಣ ಯಾವ ರೀತಿ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಹಿಂದೂ ಧರ್ಮದ ಸಂಘಟನೆಗೆ ವಿಘ್ನ ಮಾಡುವವರೇ ನೀವು ನಿಮ್ಮ ಮಕ್ಕಳು ಈ ದೇಶದಲ್ಲೇ ಇರಬೇಕು ಎಂಬುದನ್ನು ಅರಿತುಕೊಳ್ಳಿ ಎಂದರು.

Tap to resize

Latest Videos

undefined

Datta Peetha Row: ವಿವಾದ ಬಗೆಹರಿಸದ ಬಿಜೆಪಿ ಸರ್ಕಾರ: ಪ್ರಮೋದ್‌ ಮುತಾಲಿಕ್‌ ಆಕ್ರೋಶ

ಕಾಂಗ್ರೆಸ್‌ ಕಸದ ಬುಟ್ಟಿಗೆ: ಗೋ ಮಾತೆಯ ಶಾಪದಿಂದಾಗಿ 60 ವರ್ಷ ಈ ದೇಶವನ್ನಾಳಿದ ಹಿಂದೂ ಧರ್ಮದ ಸಂಘಟನೆಗೆ ಅಡ್ಡಿಪಡಿಸಿದ ಕಾಂಗ್ರೆಸ್‌ ಪಕ್ಷ ಇಂದು ಕಸದ ಬುಟ್ಟಿಗೆ ಸೇರುತ್ತಿದೆ. ಒಂದು ಕಿ.ಮೀ. ನಡೆಯದ ರಾಹುಲ್‌ ಗಾಂಧಿ ಪಕ್ಷದ ಉಳಿವಿಗಾಗಿ ಸಾವಿರಾರು ಕಿ.ಮಿ. ಪಾದಯಾತ್ರೆ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು. ಒಂದು ಹಿಂದೂ ದೇಶದಲ್ಲಿ ರಾಮಮಂದಿರ ಕಟ್ಟಬೇಕಾದರೆ 500 ವರ್ಷ ಬೇಕಾಯಿತು, ಕಾಶ್ಮೀರದಲ್ಲಿ 75 ಸಾವಿರ ಹಿಂದೂಗಳ ವಲಸೆಗೆ ಕಾರಣವಾಗಿದ್ದ 370ನೇ ವಿಧಿಯನ್ನು ರದ್ದು ಪಡಿಸಲು ನರೇಂದ್ರಮೋದಿಯಂತಹ ದೇಶಪ್ರೇಮಿ ಪ್ರಧಾನಿ ಬರಬೇಕಾಯಿತು, ದೇಶಕ್ಕಾಗಿ 18 ಗಂಟೆ ದುಡಿಯುವ ಇಂತಹ ಪ್ರಧಾನಿಯನ್ನು ನಾವು ಬೆಂಬಲಿಸಬೇಕಾಗಿದೆ ಎಂದರು.

ಅನ್ನ ನೀಡುವ ರೈತರಿಗೆ ಬೆನ್ನೆಲುಬಾಗಿರುವ ಗೋ ವಂಶವನ್ನು ರಕ್ಷಣೆ ಮಾಡಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಹಿಂದೂ ಸಂಘಟನೆಯ ಕಾರ್ಯಕರ್ತನ ಮೇಲಿದೆ ಇದಕ್ಕಾಗಿ ಸಂಘಟಿತರಾಗಿ, ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ತಂದಿದ್ದರೂ ಅದು ವಿಧಾನಸೌಧ ಮತ್ತು ಆದೇಶದಲಷ್ಟೇ ಇದೆ. ವೈಜ್ಞಾನಿಕ ರೀತಿಯಲ್ಲಿ ಕಸಾಯಿ ಖಾನೆಗಳಿಗೆ ಗೋವುಗಳು ಹೋಗುತ್ತಿವೆ. ತಡೆಯಲು ಹೋದವರ ಮೇಲೆಯೇ ದೂರು ದಾಖಲಾಗುತ್ತಿದೆ ಇದಕ್ಕೆ ನಮ್ಮ ಭ್ರಷ್ಟವ್ಯವಸ್ಥೆಯೇ ಕಾರಣ ಎಂದರು. ದೇಶವನ್ನು ಇಸ್ಲಾಮೀಕರಣ ಮಾಡುವ ಯತ್ನದಲ್ಲಿ ಇರುವ ದುಷ್ಟಶಕ್ತಿ ಒಂದೆಡೆ, ಒಳಗೊಳಗೆ ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಳಿಸುತ್ತಿರುವ ದುಷ್ಟಶಕ್ತಿ ಇನ್ನೊಂದೆಡೆ, ಇಂತಹವರಿಗೆ ಬೆಂಬಲವಾಗಿ ಬುದ್ಧಿಜೀವಿಗಳೆಂದು ಬುದ್ದಿಗೇಡಿ ಕೆಲಸ ಮಾಡುತ್ತಿರುವ ನಾಸ್ತಿಕರು.

ಟಿಪ್ಪು ಜಯಂತಿಗೆ ಅವಕಾಶ ಕೊಟ್ಟರೆ ಸಂಘರ್ಷ ನಿಶ್ಚಿತ: ಪ್ರಮೋದ್‌ ಮುತಾಲಿಕ್‌

ತಮ್ಮ ಹಿತಗೋಸ್ಕರ ಇರುವ ಭ್ರಷ್ಟ ರಾಜಕಾರಣಿಗಳು ಇವರ ವಿರುದ್ಧ ನಾವು ಸಂಘಟಿತರಾಗಿ ಹೋರಾಡೋಣ, ಮಠಾಧಿಪತಿಗಳು ಒಂದಾಗಿ ಮತಾಂತರ ಮಾಡುವುದನ್ನು ತಡೆಯಬೇಕು ಎಂದು ಮನವಿ ಮಾಡಿದರು. ವಾಟಾಳು ಮಠದ ಸಿದ್ದಲಿಂಗಶಿವಚಾರ್ಯಸ್ವಾಮೀಜಿ ಆಶೀರ್ವಚನ ನೀಡಿ ನಮ್ಮ ಧರ್ಮ ಸಂಸ್ಕೃತಿ ಉಳಿವಿಗಾಗಿ ಸಂಘಟಿರಾಗಿ ಎಂದರು. ಮಂಗಲದ 88 ಗಡಿಕಟ್ಟೆಮನೆ ಪೀಠದ ಮಂಜುನಾಥಸ್ವಾಮಿ, ಹಿರಿಯ ಮುಖಂಡರಾದ ಗಣೇಶ್‌ದೀಕ್ಷಿತ್‌ ಉಪಸ್ಥಿತರಿದ್ದರು. ಅಜಾದ್‌ ಹಿಂದೂ ಸೇನೆಯ ಅಧ್ಯಕ್ಷ ಪೃಥ್ವಿರಾಜ್‌ ಪ್ರಾಸ್ತಾವಿಸಿದರು, ಸೇನೆಯ ಪದಾ​ಕಾರಿಗಳು ಇದ್ದರು.

click me!