ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆ ಹಗರಣ, ಐಡಿಬಿಐ ಬ್ಯಾಂಕ್‌ ಉದ್ಯೋಗಿ ಅರೆಸ್ಟ್‌

By Girish GoudarFirst Published Jul 19, 2024, 4:37 PM IST
Highlights

ಐಡಿಬಿಐ ಬ್ಯಾಂಕ್‌ನಲ್ಲಿನ 3 ಖಾತೆಗಳಿಂದ 2 ಕೋಟಿ 43 ಲಕ್ಷ ಹಣವನ್ನ ಇಲಾಖೆಯ ಡಿಡಿ, ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಸಿಬ್ಬಂದಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು. ಜುಲೈ 2 ರಂದು ಇಲಾಖೆಯ ಡಿಡಿ ಗೋಪಾಲ್ ಹಿತ್ತಲಮನಿ ಗಮನಕ್ಕೆ ಬಂದಾಗ, ಜುಲೈ 11 ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು: ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ 

ಬಾಗಲಕೋಟೆ(ಜು.19): ಬಾಗಲಕೋಟೆ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಡಿಬಿಐ ಬ್ಯಾಂಕ್‌ ಉದ್ಯೋಗಿಯನ್ನ ಪೊಲೀಸರು ಬಂಧಿಸಿದ್ದಾರೆ.  ಐಡಿಬಿಐ ಬ್ಯಾಂಕ್‌ನ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಾಗರ್ ಬಂಧಿತ ಆರೋಪಿಯಾಗಿದ್ದಾನೆ. ಸೂರಜ್ ಸಾಗರ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಸೂರಜ್ ಸಾಗರ್ ಪೊಲೀಸರಿಗೆ ಶರಣಾಗಿದ್ದಾನೆ.  

ಇಂದು(ಶುಕ್ರವಾರ) ನಗರದಲ್ಲಿ ಮಾಹಿತಿ ನೀಡಿದ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಅವರು, ಐಡಿಬಿಐ ಬ್ಯಾಂಕ್‌ನಲ್ಲಿನ 3 ಖಾತೆಗಳಿಂದ 2 ಕೋಟಿ 43 ಲಕ್ಷ ಹಣವನ್ನ ಇಲಾಖೆಯ ಡಿಡಿ, ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷರಿಗೆ ಗೊತ್ತಿಲ್ಲದಂತೆ ಬ್ಯಾಂಕ್ ಸಿಬ್ಬಂದಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದರು. ಜುಲೈ 2 ರಂದು ಇಲಾಖೆಯ ಡಿಡಿ ಗೋಪಾಲ್ ಹಿತ್ತಲಮನಿ ಗಮನಕ್ಕೆ ಬಂದಾಗ, ಜುಲೈ 11 ರಂದು ಸಿಇಎನ್ ಪೊಲೀಸ್ ಠಾಣೆಯಲ್ಲಿ, ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ದೂರು ನೀಡಿದ್ದರು ಎಂದು ತಿಳಿಸಿದ್ದಾರೆ. 

Latest Videos

ಕಾರ್ಮಿಕ ಇಲಾಖೆಯಲ್ಲೂ ಅಕ್ರಮ : ಹೊರಗುತ್ತಿಗೆ ನೌಕರನೇ ₹2.83 ಕೋಟಿ ವಂಚಿಸಿದ ಪ್ರಕರಣ ಬೆಳಕಿಗೆ

ದೂರು ಆಧರಿಸಿ ಪೊಲೀಸ್ರು ತನಿಖೆ ಆರಂಭಿಸಿ, ಬ್ಯಾಂಕ್ ಸಿಬ್ಬಂದಿಯನ್ನ ವಿಚಾರಣೆ ನಡೆಸಿದ್ದರು.  ಇವತ್ತು ಐಡಿಬಿಐ ಬ್ಯಾಂಕ್‌ನ ಸೇಲ್ಸ್ ಎಕ್ಸಕ್ಯೂಟಿವ್ ಸೂರಜ್ ಸಾಗರ್‌ನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

click me!