ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟು ವೆಂಟಿಲೇಟರ್ ಆಫ್ ಆಗಿ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ವರದಿ: ನರಸಿಂಹ ಮೂರ್ತಿ, ಏಷ್ಯಾನೆಟ್ ಸುವರ್ಣನ್ಯೂಸ್
ಬಳ್ಳಾರಿ (ಸೆ.17): ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಕೈಕೊಟ್ಟು ವೆಂಟಿಲೇಟರ್ ಆಫ್ ಆಗಿ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣವು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಂಡರ್ ಗ್ರೌಂಡ್ ಕೇಬಲ್ ಬ್ಲಾಸ್ ಆದ ಪರಿಣಾಮ ವಿದ್ಯುತ್ ಕೈಕೊಟ್ಟಿತ್ತು ಎನ್ನಲಾಗುತ್ತಿರೋ ಪ್ರಕರಣದಲ್ಲಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಂಡು ವಿಮ್ಸ್ ನಿರ್ದೇಶಕರ ಹೆಸರಿಗೆ ಮಸಿ ಬಳಿಯೋ ಯತ್ನ ನಡೆದಿತ್ತು ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿದೆ. ಈ ಮದ್ಯೆ ಒಂದು ಕಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದ್ರೆ ಮತ್ತೊಂದು ಕಡೆ ನಿನ್ನೆ ಸರ್ಕಾರ ನೇಮಿಸಿದ ತನಿಖಾ ತಂಡ ಘಟನೆಗೆ ಸಂಬಂಧಿಸಿದಂತೆ ವರದಿ ಕೊಟ್ಟಿದೆ ಎನ್ನಲಾಗುತ್ತಿದ್ದು ವರದಿಯಲ್ಲೇನಿದು ಅನ್ನೋ ಕುತೂಹಲ ಎಲ್ಲರನ್ನು ಕಾಡುತ್ತಿದೆ. ಆಡಳಿತ ಪಕ್ಷದ ಮತ್ತು ವಿರೋಧ ಪಕ್ಷದ ಶಾಸಕರ ವಾಗ್ದಾಳಿಯ ಬಳಿಕ ಸ್ಟೋಟಕ ಮಾಹಿತಿ ಹೊರಹಾಕಿದ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ, ರಾಜ್ಯದಲ್ಲಿ ಅಧಿಕಾರಿಗಳು ನೇಮಕಾತಿಯಲ್ಲಿ ಲಾಭಿ ನಡೆಯುತ್ತಿರೋ ಕುರಿತ ಮಾಹಿತಿ ಹೊರಹಾಕಿದ ಶಾಸಕ ಸೋಮಶೇಖರ ರೆಡ್ಡಿ, ಹೆಚ್ಚು ಕಡಿಮೆಯಾದ್ರೇ ನಿರ್ದೇಶಕರೇ ಜೈಲಿಗೆ ಹೋಗ ಬೇಕಾಗುತ್ತದೆ ಎಂದು ಶಾಸಕ ನಾಗೇಂದ್ರ ಆಕ್ರೋಶ. ಕಳೆದ ಮೂರು ದಿನಗಳ ಹಿಂದೆ ಪವರ್ ಕೇಬಲ್ ಕೈಕೊಟ್ಟ ಪರಿಣಾಮ ವಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್ನಲ್ಲಿದ್ದ ಮೂವರು ರೋಗಿಗಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಾಗೇಂದ್ರ ನೇತೃತ್ವದಲ್ಲಿಂದು ಪ್ರತಿಭಟನೆ ಮಾಡಲಾಯಿತು.
undefined
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸೇರಿದಂತೆ ವಿಮ್ಸ್ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ಮಾಡೋ ಮೂಲಕ ಘಟನೆಯನ್ನು ಖಂಡಿಸಿದ್ರು. ಸರ್ಕಾರ ಮತ್ತು ನಿರ್ದೇಶಕರ ಕಾರ್ಯವೈಖರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ನಾಗೇಂದ್ರ ನಿರ್ಲಕ್ಷ್ಯದಿಂದಲೇ ಈ ಸಾವು ನಡೆದಿದೆ. ಸರ್ಕಾರ ಐದಲ್ಲ ಐವತ್ತು ಲಕ್ಷ ಪರಿಹಾರ ಕೊಡಬೇಕೆಂದ್ರು. ಇನ್ನೂ ಇದಕ್ಕೆ ಧ್ವನಿಗೂಡಿಸಿದಂತೆ ಮಾತನಾಡಿದ ಆಡಳಿತಾರೂಢ ಶಾಸಕ ಸೋಮಶೇಖರ ರೆಡ್ಡಿ ನಿರ್ದೇಶಕರ ನೇಮಕಾತಿ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ರು. ಗಂಗಾಧರ ಗೌಡ ಅವರನ್ನು ಬೇಡವೆಂದ್ರು ನೇಮಕ ಮಾಡಲಾಗಿದೆ ಎಂದ್ರು.
Ballari ವಿಮ್ಸ್‌ನಲ್ಲಿ ಮುಂದುವರೆದ ಮರಣ ಮೃದಂಗ! ಸತ್ತಿದ್ದು ಎರಡೋ? ನಾಲ್ಕೋ?
ಒಂದು ಕಡೆ ಆಡಳಿತ ಮತ್ತೊಂದು ಕಡೆ ವಿರೋಧ ಪಕ್ಷದ ಶಾಸಕರಿಂದ ವಾಗ್ದಾಳಿ:
ಇನ್ನೂ ತೀವ್ರ ಒತ್ತಡದಲ್ಲಿರೋ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಸ್ಟೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ಕಳೆದ ತಿಂಗಳು ನೇಮಕಾತಿಯಾದ ಬಳಿಕ ನನ್ನ ವಿರುದ್ಧ ಕ್ಯಾಂಪಸ್ನಲ್ಲಿಯೇ ಷಡ್ಯಂತ್ರ ನಡೆಯುತ್ತಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡ ದಿನ ಕೆಲವರು ಪೋನ್ ನಲ್ಲಿ ಮಾತನಾಡಿದ್ದಾರೆ. ಆ ಆಡಿಯೋ ಸಂಗ್ರಹಿಸುತ್ತಿರುವೆ. ವಿಮ್ಸ್ ಆಸ್ಪತ್ರೆ ಮತ್ತು ನನ್ನ ವಯಕ್ತಿಕ ಹೆಸರು ಕೆಡಿಸಲು ವಿದ್ಯುತ್ ಸಂಪರ್ಕ ಕಡಿತಗೊಂಡಿರೋ ವಿಷಯದ ಲಾಭ ಮಾಡಿಕೊಂಡಿದ್ದಾರೆ. ಈ ಕುರಿತು ಸಾಕ್ಷಿ ಕಲೆ ಹಾಕಿ ಎಫ್ ಐಆರ್ ದಾಖಲು ಮಾಡಿ ಕಾನೂನು ಹೋರಾಟ ಮಾಡುವೆ ಎಂದಿದ್ದಾರೆ.
ಬಳ್ಳಾರಿ ವಿಮ್ಸ್ ರೋಗಿಗಳ ಸಾವು ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್:ನಿರ್ದೇಶಕರ ಮೇಲಿನ ಸಿಟ್ಟಿಗೆ ಕರೆಂಟ್ ಕಟ್!
ಮನೆಯೊಂದು ಮೂರು ಬಾಗಿಲು
ಒಟ್ಟಾರೇ ಮನೆಯೊಂದು ಮೂರು ಬಾಗಿಲು ಎನ್ನುವಂತಿರೋ ವಿಮ್ಸ್ ನಲ್ಲಿ, ಯಾರಿಗೊಪ್ಪಿಸಿದ ಕೆಲಸ ಅವರು ಮಾಡದ ಹಿನ್ನೆಲೆ ಮತ್ತು ಎಲ್ಲವನ್ನು ನಿರ್ದೇಶಕರ ಮೇಲೆ ಹಾಕಲಾಗ್ತಿದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದ್ರೇ, ವಿಮ್ಸ್ ನ ಒಳ ರಾಜಕೀಯಕ್ಕೆ ಮೂರು ಜೀವಗಳು ಬಲಿಯಾದವೇ ಅನ್ನೋ ಅನುಮಾನ ಕಾಡುತ್ತಿದೆ.